ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020ಗಾಗಿ ''ಹಿಟ್ ಮ್ಯಾನ್'' ರೋಹಿತ್ ತಂದಿರುವ ಬ್ಯಾಟುಗಳೆಷ್ಟು?

IPL 2020: Know why hit man Rohit Sharma Carrying around nine bats

ಶಾರ್ಜಾ, ಸೆ. 28: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮ ಅವರು ಪ್ರತಿ ಟೂರ್ನಮೆಂಟಿಗೂ ಮುನ್ನ ಫಿಟ್ನೆಸ್ ತಯಾರಿ ನಡೆಸುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ, ತಮ್ಮ ಬ್ಯಾಟ್ ಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಅದರಂತೆ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗಾಗಿ ತಮ್ಮ ನೆಚ್ಚಿನ ಬ್ಯಾಟುಗಳನ್ನು ಆಯ್ದು ತಂದಿದ್ದಾರೆ.

ಬೌಂಡರಿ, ಸಿಕ್ಸರ್ ಸಿಡಿಸುವ ಹಿಟ್ ಮ್ಯಾನ್ ಬಳಿ ಹೆಚ್ಚೆಂದರೆ ಒಂದು ಬ್ಯಾಟ್ ಒಂದು ತಿಂಗಳು ಬಾಳುವುದಿಲ್ಲ ಎಂಬ ಸಂಗತಿಯನ್ನು ಖುದ್ದು ರೋಹಿತ್ ಅವರು ಹಂಚಿಕೊಂಡಿದ್ದಾರೆ. ಇದಕ್ಕಾಗಿ ಪ್ರತಿ ಟೂರ್ನಮೆಂಟ್ ಹಾಗೂ ಪ್ರತಿ ಕ್ರಿಕೆಟ್ ಮಾದರಿಗೂ ಪ್ರತ್ಯೇಕ ಬ್ಯಾಟ್ ಸೆಟ್ ರೆಡಿ ಮಾಡಿಟ್ಟುಕೊಂಡಿರುತ್ತಾರಂತೆ.

ದಾಖಲೆ ಸನಿಹದಲ್ಲಿದ್ದಾರೆ ರೋಹಿತ್, ಕೊಹ್ಲಿ, ಡಿ ಕಾಕ್ದಾಖಲೆ ಸನಿಹದಲ್ಲಿದ್ದಾರೆ ರೋಹಿತ್, ಕೊಹ್ಲಿ, ಡಿ ಕಾಕ್

ಒಟ್ಟು 191 ಪಂದ್ಯಗಳಿಂದ 38 ಅರ್ಧಶತಕ ಸಿಡಿಸಿರುವ ರೋಹಿತ್ ಅವರು 131.10 ಸ್ಟ್ರೈಕ್ ರೇಟಿನಲ್ಲಿ 4998 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರ ಎನಿಸಿಕೊಂಡಿದ್ದಾರೆ

ಯುಎಇಯ ಬಿಸಿಲಿನ ವಾತಾವರಣ

ಯುಎಇಯ ಬಿಸಿಲಿನ ವಾತಾವರಣ

ಯುಎಇಯ ಬಿಸಿಲಿನ ವಾತಾವರಣಕ್ಕೆ ಅನುಗುಣವಾಗಿ ಸುಮಾರು 9 ಬ್ಯಾಟ್ ಗಳನ್ನು ಹೊತ್ತು ತಂದಿರುವುದಾಗಿ ರೋಹಿತ್ ಹೇಳಿದ್ದಾರೆ. ಪ್ರತಿ ಬ್ಯಾಟಿನ ಆಯಸ್ಸು ಯಾವ ಮಾದರಿ ಕ್ರಿಕೆಟ್ ಆಡುತ್ತಿದ್ದಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದಿದ್ದಾರೆ.

ನಾಲ್ಕರಿಂದ ಐದು ತಿಂಗಳು ಬ್ಯಾಟ್ ಬಳಕೆ

ನಾಲ್ಕರಿಂದ ಐದು ತಿಂಗಳು ಬ್ಯಾಟ್ ಬಳಕೆ

''ಸಾಮಾನ್ಯವಾಗಿ ನಾನು ಬಳಸುವ ಬ್ಯಾಟುಗಳು ಹೆಚ್ಚು ಕಾಲ ಬಳಕೆಗೆ ಬರುತ್ತವೆ ಸುಮಾರು ನಾಲ್ಕರಿಂದ ಐದು ತಿಂಗಳು ಬಳಸುತ್ತೇನೆ. ಆದರೆ ಟಿ20 ಮಾದರಿಯಲ್ಲಿ ಹೆಚ್ಚು ಬ್ಯಾಟ್ ಬೀಸಬೇಕಾಗುವುದರಿಂದ ಹೆಚ್ಚು ಬ್ಯಾಟ್ ಬೇಕಾಗುತ್ತದೆ. ಅದರಲ್ಲೂ ಐಪಿಎಲ್ ನಲ್ಲಿ ಎಲ್ಲಾ ರೀತಿ ವಿಚಿತ್ರ ಶಾಟ್, ವೇಗದ ಬೌಲಿಂಗ್ ಎದುರಿಸುವ ಕ್ಷಮತೆಯನ್ನು ಬ್ಯಾಟ್ ಹೊಂದಿರಬೇಕು. ಅದಕ್ಕೆ ತಕ್ಕಂತೆ ಈ ಬಾರಿ ಹೆಚ್ಚು ಬ್ಯಾಟ್ ತಂದಿದ್ದೇನೆ'' ಎಂದು ರೋಹಿತ್ ಹೇಳಿದರು.

ಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗ

ಐಪಿಎಲ್ ಗಾಗಿ ಹೆಚ್ಚು ಬ್ಯಾಟ್ ಬೇಕೇ ಬೇಕು

ಐಪಿಎಲ್ ಗಾಗಿ ಹೆಚ್ಚು ಬ್ಯಾಟ್ ಬೇಕೇ ಬೇಕು

ಬೇರೆ ಫಾರ್ಮ್ಯಾಟಿಗೆ ಹೋಲಿಸಿದರೆ ಐಪಿಎಲ್ ಅಥವಾ ಟಿ20 ಮಾದರಿಯಲ್ಲಿ ನಾನು ಬಳಸುವ ಬ್ಯಾಟುಗಳೂ ಒಂದು ತಿಂಗಳ ಮೇಲೆ ಬಾಳಿಕೆಗೆ ಬರುವುದಿಲ್ಲ. ಕೊರೊನಾವೈರಸ್ ಅವಧಿಯಲ್ಲಿ ಮತ್ತೆ ಮುಂಬೈನಿಂದ ಬ್ಯಾಟ್ ತರೆಸಿಕೊಳ್ಳುವುದು ಕಷ್ಟಕರ. ಹೀಗಾಗಿ 9 ಬ್ಯಾಟುಗಳನ್ನು ನನ್ನ ಕಿಟ್ ಜೊತೆಗೆ ತಂದಿದ್ದೇನೆ ಎಂದು ಹೇಳಿದರು.

ಹಿಟ್ ಮ್ಯಾನ್ ಇನ್ನೂ ಸ್ಫೋಟಿಸಿಲ್ಲ

ಹಿಟ್ ಮ್ಯಾನ್ ಇನ್ನೂ ಸ್ಫೋಟಿಸಿಲ್ಲ

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 80ರನ್ ಸಿಡಿಸಿ ಗೆಲುವಿಗೆ ಉತ್ತಮ ಕೊಡುಗೆ ನೀಡಿದ್ದ ರೋಹಿತ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 8 ರನ್ ಗಳಿಸಿ ಔಟಾಗಿದ್ದಾರೆ. 2014ರಲ್ಲಿ ಯುಎಇಯಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ್ದ ಮುಂಬೈ ಇಂಡಿಯನ್ಸ್ ಈ ಬಾರಿ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದೆ. ನಾಯಕನಾಗಿ ಹಾಗೂ ಬ್ಯಾಟ್ಸ್ ಮನ್ ಆಗಿ ರೋಹಿತ್ ಇನ್ನೂ ಮಿಂಚಬೇಕಿದೆ. ರೋಹಿತ್ ಅವರಿಗೆ ಅವರ 9 ಬ್ಯಾಟ್ ಗಳು ಲಕ್ ತಂದುಕೊಡುವುದೇ ಕಾದುನೋಡಬೇಕಿದೆ.

Story first published: Tuesday, September 29, 2020, 10:11 [IST]
Other articles published on Sep 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X