ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಪ್ಪು ತಿದ್ದಿಕೊಂಡು ಮುಂದಿನ ಪಂದ್ಯಕ್ಕೆ ಬಲಿಷ್ಠರಾಗಿ ಬರುತ್ತೇವೆ: ಕೊಹ್ಲಿ ವಿಶ್ವಾಸ

IPL 2020: Kohli Has No Doubt RCB Will Correct Mistakes And Come Back

ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ 5 ವಿಕೆಟ್‌ಗಳ ಸೋಲನ್ನು ಕಂಡಿತು. ಈ ಸೋಲಿನ ಬಳಿಕ ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಮಾತನಾಡಿದ್ದು ಮುಂದಿನ ಪಂದ್ಯದಲ್ಲಿ ಕಂಡಿತವಾಗಿಯೂ ತಪ್ಪನ್ನು ತಿದ್ದಿಕೊಂಡು ಬಲಿಷ್ಠರಾಗಿ ಬರುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

"ಆ ರೀತಿಯ ಪಿಚ್‌ನಲ್ಲಿ ನಾವು 16 ಓವರ್‌ಗಳವರೆಗೆ ಅದ್ಭುತವಾಗಿ ಬೌಲಿಂಗ್ ನಡೆಸಿದ್ದೇವೆ. ಹಾಗಾಗಿ ನಮ್ಮ ಬೌಲರ್‌ಗಳು ಉತ್ತಮವಾಗಿಯೇ ಪ್ರದರ್ಶನ ನೀಡಿದ್ದಾರೆ. ನಾವೇನೂ ತುಂಬಾ ದೂರದಲ್ಲಿಲ್ಲ. ಅದರಲ್ಲೂ ಮುಖ್ಯವಾಗಿ ಮೊದಲನೇ ಸ್ಥಾನಕ್ಕೆ ಹೆಚ್ಚಿನ ಅಂತರದಲ್ಲಿಲ್ಲ. ಈ ಆತ್ಮವಿಶ್ವಾವನ್ನು ಖಂಡಿತಾ ಮುಂದಿನ ಪಂದ್ಯಕ್ಕೆ ತೆಗೆದುಕೊಂಡು ಹೋಗಲಿದ್ದೇವೆ" ಎಂದಿದ್ದಾರೆ ಕೊಹ್ಲಿ.

ಬ್ಯಾಟಿಂಗ್‌ನಲ್ಲಿ ಹೆಚ್ಚಿನ ಜವಾಬ್ಧಾರಿಗೆ ರೋಹಿತ್ ಸೂಚಿಸಿದ್ದರು: ಸೂರ್ಯಕುಮಾರ್ ಯಾದವ್ಬ್ಯಾಟಿಂಗ್‌ನಲ್ಲಿ ಹೆಚ್ಚಿನ ಜವಾಬ್ಧಾರಿಗೆ ರೋಹಿತ್ ಸೂಚಿಸಿದ್ದರು: ಸೂರ್ಯಕುಮಾರ್ ಯಾದವ್

"ನಾವು ಉತ್ತಮವಾಗಿ ನಿರ್ವಹಿಸಿದ ಸಂಗತಿಗಳನ್ನು ಮುಂದಿನ ಪಂದ್ಯಕ್ಕೂ ತೆಗೆದುಕೊಂಡು ಹೋಗಲಿದ್ದೇವೆ. ಇದನ್ನು ನಾವು ಸುದೀರ್ಘ ಕಾಲದಿಂದ ಮಾಡುತ್ತಿದ್ದೇವೆ. ಯಾವುದೇ ಅನುಮಾನವಿಲ್ಲ. ಮುಂದಿನ ಪಂದ್ಯಗಳಲ್ಲಿ ನಾವು ಮಾಡಿರುವ ತಪ್ಪನ್ನು ತಿದ್ದಿಕೊಂಡು ಮುನ್ನಡೆಯಲಿದ್ದೇವೆ" ಎಂದು ಕೊಹ್ಲಿ ಹೇಳಿಕೆ ನೀಡಿದ್ದಾರೆ.

ವಿಶಿಷ್ಟ ದಾಖಲೆ: ಬೂಮ್ರಾಗೆ ಮೊದಲ ಹಾಗೂ 100ನೇ ಬಲಿಯಾದ ಕೊಹ್ಲಿವಿಶಿಷ್ಟ ದಾಖಲೆ: ಬೂಮ್ರಾಗೆ ಮೊದಲ ಹಾಗೂ 100ನೇ ಬಲಿಯಾದ ಕೊಹ್ಲಿ

ಇನ್ನು ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ ದೇವದತ್ ಪಡಿಕ್ಕಲ್ ಕುಡ ಪ್ರತಿಕ್ರಿಯಿಸಿದ್ದು "ಇದು ಉತ್ತಮ ಪಿಕೆಟ್ ಆಗಿತ್ತು. ನಾನು ಅದನ್ನು ಆರಂಭದಲ್ಲೇ ಅರ್ಥ ಮಾಡಿಕೊಂಡೆ. ನಾವು ಉತ್ತಮ ಆರಂಭವನ್ನು ಪಡೆದೆವು. ಆದರೆ ಅಂತಿಮವಾಗಿ 20 ರನ್‌ಗಳಷ್ಟು ಕೊರತೆಯನ್ನು ನಾವು ಅನುಭವಿಸಿದೆವು. ಇದು ನಮ್ಮ ಸೋಲಿಗೆ ಕಾರಣವಾಯಿತು" ಎಂದಿದ್ದಾರೆ ಪಡಿಕ್ಕಲ್.

ಈ ಸೋಲಿನ ನಂತರವೂ ಆರ್‌ಸಿಬಿ ಎರಡನೇ ಸ್ಥಾನದಲ್ಲಿ ಭದ್ರವಾಗಿದೆ. ಮೊದಲ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ಮುನ್ನಡೆಯುತ್ತಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮುಂದಿನ ಪಂದ್ಯದಲ್ಲಿ ಆರ್‌ಸಿಬಿ ಕಣಕ್ಕಿಳಿಯಲಿದೆ.

Story first published: Thursday, October 29, 2020, 13:28 [IST]
Other articles published on Oct 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X