ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಹಿರಿ-ಕಿರಿ ಜೋಡಿ ಸೃಷ್ಟಿ RCB ಐಡಿಯಾ ಮಾಡುತ್ತಾ ಮೋಡಿ

IPL 2020: Kohli-Padikkal Paired-RCB Mentorship initiative

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಯುವ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಯೋಜನೆ ಹಾಕಿಕೊಂಡಿದೆ. ಯುವ ಪ್ರತಿಭೆ ಜೊತೆ ಒಬ್ಬ ಅನುಭವಿ ಆಟಗಾರನನ್ನು ಜೋಡಿ ಎಂದು ಮಾಡಲಾಗುತ್ತಿದೆ.

ಈ ಮೂಲಕ ಉದಯೋನ್ಮುಖ ಆಟಗಾರರಿಗೆ ಅನುಭವಿ ಆಟಗಾರರಿಂದ ನಿರಂತರವಾಗಿ ಸಲಹೆ, ಸೂಚನೆ ಸಿಗಲಿದೆ ಒಂದು ರೀತಿ ಯುವ ಕ್ರಿಕೆಟರ್ ಏಳಿಗೆ ನೋಡಿಕೊಳ್ಳುವ ಮಾರ್ಗದರ್ಶಿಯಾಗಿರುತ್ತಾರೆ.

ಕೊಹ್ಲಿ-ಎಬಿ ಡಿವಿಲಿಯರ್ಸ್ ಗೆಳೆತನ ಎಷ್ಟು ಗಾಢ ಗೊತ್ತೇ?ಕೊಹ್ಲಿ-ಎಬಿ ಡಿವಿಲಿಯರ್ಸ್ ಗೆಳೆತನ ಎಷ್ಟು ಗಾಢ ಗೊತ್ತೇ?

ಟೀಂ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಜೊತೆ ಕರ್ನಾಟಕದ ಯುವಪ್ರತಿಭೆ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಅವರನ್ನು "ಜೋಡಿ'' ಮಾಡಲಾಗಿದೆ.

ಆರ್‌ಸಿಬಿ ಪಾಲಿನ ದೇವದೂತ ದೇವದತ್ ಪಡಿಕ್ಕಲ್ಆರ್‌ಸಿಬಿ ಪಾಲಿನ ದೇವದೂತ ದೇವದತ್ ಪಡಿಕ್ಕಲ್

ವೇಗಿ ನವದೀಪ್ ಸೈನಿ ನಿರೀಕ್ಷೆಯಂತೆ ಡೇಲ್ ಸ್ಟೇನ್ ಜೊತೆ ಜೋಡಿಯಾಗಲಿದ್ದಾರೆ ಎಂದು ಆರ್ ಸಿಬಿ ನಿರ್ದೇಶಕ ಮೈಕ್ ಹೆಸ್ಸಾನ್ ಹೇಳಿದರು.

ನಿಜಕ್ಕೂ ಇದರ ಉದ್ದೇಶವೇನು?

ನಿಜಕ್ಕೂ ಇದರ ಉದ್ದೇಶವೇನು?

ಮುಖ್ಯ ಕೋಚ್ ಸೈಮನ್ ಕಟಿಚ್ ಅವರ ನಿರ್ದೇಶನದಂತೆ ಈ ಮೆಂಟರ್ ಶಿಪ್ ಕಾರ್ಯಕ್ರಮವನ್ನು ಹೊರ ತರಲಾಗುತ್ತಿದೆ. ಇದರಿಂದ ಆಟಗಾರರ ನಡುವೆ ಪರಸ್ಪರ ಬಾಂಧವ್ಯ ಹೆಚ್ಚಾಗಲಿದೆ. ಆಟದ ಕೌಶಲ್ಯ ಅಭಿವೃದ್ಧಿಗೆ ಇದು ಪೂರಕವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿರುವ ಕ್ರಿಕೆಟ್ ದಿಗ್ಗಜ ಆಟಗಾರರು ಯುವ ಅನ್ ಕ್ಯಾಪ್ಡ್ ಆಟಗಾರರನ್ನು ಹುರಿದುಂಬಿಸಲು ಅವರ ಅನುಭವ ಧಾರೆ ಎರೆಯಲು ಇದು ಉತ್ತಮ ವೇದಿಕೆಯಾಗಿದೆ. ತಂಡದಲ್ಲಿ ಯುವ ಹಾಗೂ ಅನುಭವಿ ಆಟಗಾರರು ಸಮ ಸಂಖ್ಯೆಯಲ್ಲಿರುವುದು ಈ ರೀತಿ ಪ್ರಯೋಗಕ್ಕೆ ಅನುಕೂಲವಾಗಿದೆ ಎಂದಿದ್ದಾರೆ.

ದೇವದತ್ ಪಡಿಕ್ಕಲ್

ದೇವದತ್ ಪಡಿಕ್ಕಲ್

ಅಂಡರ್ 19, ಲಿಸ್ಟ್ ಎ, ಪ್ರಥಮ ದರ್ಜೆ ಕ್ರಿಕೆಟ್ ಎಲ್ಲದರಲ್ಲೂ ಮೊದಲ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಸಿಡಿಸಿದ ದಾಖಲೆ ಹೊಂದಿರುವ ದೇವದತ್ ಪಡಿಕ್ಕಲ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರನಾಗಿ ಕಣಕ್ಕಿಳಿದು ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದಾರೆ. 20 ಲಕ್ಷದ ಮೂಲ ಬೆಲೆ ಆರ್ ಸಿಬಿ ಖರೀದಿಸಿದ್ದು, 2020ರಲ್ಲಿ ಅಕ್ಟೋಬರ್ 01ರ ಎಣಿಕೆಯಂತೆ 3 ಪಂದ್ಯಗಳಲ್ಲಿ 132.14 ಸ್ಟೈಕ್ ರೇಟ್ ಹಾಗೂ 37ರನ್ ಸರಾಸರಿಯಂತೆ 111ರನ್ ಗಳಿಸಿದ್ದಾರೆ. 2 ಅರ್ಧಶತಕವಿದ್ದು, 13 ಬೌಂಡರಿ, 2 ಸಿಕ್ಸರ್ ಬಾರಿಸಿದ್ದಾರೆ. 56 ರನ್ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

2020ರಲ್ಲಿ ಇನ್ನೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡದಿರುವ ಕೊಹ್ಲಿ ಅವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರ. ಒಟ್ಟಾರೆ 180 ಪಂದ್ಯಗಳಿಂದ 131.12 ಸ್ಟೈಕ್ ರೇಟ್ ನಂತೆ 37.19 ರನ್ ಸರಾಸರಿಯಲ್ಲಿ 4,141 ರನ್ ಗಳಿಸಿದ್ದಾರೆ. 36 ಅರ್ಧಶತಕ, 5 ಶತಕ ಸಿಡಿಸಿದ್ದಾರೆ. 480 ಬೌಂಡರಿ, 190 ಸಿಕ್ಸ್ ಸಿಡಿಸಿದ್ದಾರೆ.

2020ರಲ್ಲಿ 3 ಪಂದ್ಯಗಳಲ್ಲಿ 18 ರನ್ ಮಾತ್ರಗಳಿಸಿದ್ದು, 29 ಎಸೆತಗಳನ್ನು ಮಾತ್ರ ಎದುರಿಸಿದ್ದಾರೆ.

ನವದೀಪ್ ಸೈನಿ

ನವದೀಪ್ ಸೈನಿ

ಭಾರತದ ಅತ್ಯಂತ ವೇಗದ ಬೌಲರ್ ಗಳ ಪೈಕಿ ನವದೀಪ್ ಸೈನಿ ಕೂಡಾ ಒಬ್ಬರು. ಸತತವಾಗಿ 140 ಕಿ. ಮೀ/ ಗಂಟೆ ವೇಗದಲ್ಲಿ ಎಸೆಯಬಲ್ಲರು. ಡೆಲ್ಲಿ ಡೆರ್ ಡೆವಿಲ್ಸ್ ಪರ ಆಡಿದ್ದ ಸೈನಿಯನ್ನು 3 ಕೋಟಿ ನೀಡಿ ಆರ್ ಸಿಬಿ ತಂಡಕ್ಕೆ ಸೇರಿಸಿಕೊಂಡಿದೆ.

ಐಪಿಎಲ್ ನಲ್ಲಿ 16 ಪಂದ್ಯಗಳಲ್ಲಿ160 ರನ್ ನೀಡಿ 13ವಿಕೆಟ್ ಗಳಿಸಿದ್ದು, 2/24 ಉತ್ತಮ ಸಾಧನೆ. 27. 69 ಸ್ಟೈಕ್ ರೇಟ್.

2020ರಲ್ಲಿ 3 ಪಂದ್ಯಗಳಲ್ಲಿ 72 ರನ್ ನೀಡಿ 2 ವಿಕೆಟ್, 2/25 ಉತ್ತಮ ಪ್ರದರ್ಶನ. 36.0 ಸ್ಟೈಕ್ ರೇಟ್.

ಡೇಲ್ ಸ್ಟೇನ್

ಡೇಲ್ ಸ್ಟೇನ್

ನಾಥನ್ ಕೌಲ್ಟರ್ ನೈಲ್ ಗಾಯಾಳುವಾಗಿದ್ದರಿಂದ ಮತ್ತೆ ಆರ್ ಸಿಬಿ ತಂಡ ಸೇರಿಕೊಂಡ ದಕ್ಷಿಣ ಅಫ್ರಿಕಾದ ಶರವೇಗಿ ಡೇಲ್ ಸ್ಟೇನ್ ಈ ಮುಂಚೆ ಹೈದರಾಬಾದ್ ತಂಡದ ಪರವೂ ಆಡಿದ್ದರು. ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಗಾಯದ ಸಮಸ್ಯೆಯಿಂದ ನಿರೀಕ್ಷೆಗೆ ತಕ್ಕ ಪ್ರದರ್ಶನ ಬಂದಿಲ್ಲ.

94 ಪಂದ್ಯಗಳಲ್ಲಿ 2465ರನ್ ನೀಡಿ 6.87 ಎಕಾನಾಮಿ 22.18 ಸ್ಟ್ರೈಕ್ ರೇಟ್ ನಂತೆ 97 ವಿಕೆಟ್ ಗಳಿಸಿದ್ದಾರೆ. 3/8 ಉತ್ತಮ ಪ್ರದರ್ಶನವಾಗಿದೆ. 2020ರಲ್ಲಿ 2 ಪಂದ್ಯಗಳಲ್ಲಿ1ವಿಕೆಟ್, 11.73 ಎಕಾನಾಮಿ, 46 ಸ್ಟ್ರೈಕ್ ರೇಟ್.

Story first published: Thursday, October 1, 2020, 23:18 [IST]
Other articles published on Oct 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X