ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2021ರಲ್ಲೂ ರಾಹುಲ್-ಅನಿಲ್ ಕುಂಬ್ಳೆಗೆ ಗಟ್ಟಿಯಾಗಲಿದೆಯಾ ಪಂಜಾಬ್?

IPL 2020: KXIP likely to stick to KL Rahul-Anil Kumble combo for 2021

ದುಬೈ: 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಕಿಂಗ್ಸ್ 11 ಪಂಜಾಬ್‌ ಪಾಲಿಗೆ ಚೆನ್ನಾಗಿರಲಿಲ್ಲ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ತಂಡವೆಂಬ ಪ್ರೀತಿಗೆ ಪಂಜಾಬ್‌ ಕಾರಣವಾಗಿತ್ತಾದರೂ ಸಣ್ಣ ಸಣ್ಣ ತಪ್ಪುಗಳಿಂದಾಗಿ ಟ್ರೋಫಿ ಗೆಲುವಿನಾಸೆ ಉಳಿಸಿಕೊಳ್ಳಲಿಲ್ಲ. ಪ್ಲೇ ಆಫ್‌ಗೆ ಪ್ರವೇಶಿಸಲಿಲ್ಲ.

ಕಿಂಗ್ಸ್‌ 11 ಪಂಜಾಬ್‌ನಲ್ಲಿ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಬಲವಿದ್ದರೂ ಅವರನ್ನು ಆರಂಭಿಕ ಪಂದ್ಯಗಳಲ್ಲಿ ಕಡೆಗಣಿಸಿದ್ದು ಒಂದೆಡೆ ಸೋಲಿಗೆ ನೆಪವಾಯ್ತು. ಇನ್ನು ಬಿಗ್ ಹಿಟ್ಟರ್ ಅನ್ನಿಸಿಕೊಂಡಿರುವ ಆಸ್ಟ್ರೇಲಿಯಾ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.

ಮುಂಬೈ vs ಡೆಲ್ಲಿ ಫೈನಲ್‌ ಹಣಾಹಣಿ: 5 ಅಚ್ಚರಿಯ ಸತ್ಯ ಸಂಗತಿಗಳು!ಮುಂಬೈ vs ಡೆಲ್ಲಿ ಫೈನಲ್‌ ಹಣಾಹಣಿ: 5 ಅಚ್ಚರಿಯ ಸತ್ಯ ಸಂಗತಿಗಳು!

2021ರ ಐಪಿಎಲ್‌ಗೆ ಹೆಚ್ಚು ದೂರವಿಲ್ಲ. ವಾಡಿಕೆಯಂತೆ ಮಾರ್ಚ್-ಏಪ್ರಿಲ್‌ನಲ್ಲೇ 2021ರ ಐಪಿಎಲ್ ಆರಂಭವಾಗುವ ನಿರೀಕ್ಷೆಯಿದೆ. ಆದರೆ ಕಿಂಗ್ಸ್ 11 ತಂಡದಲ್ಲಿ ಮುಂದಿನ ಸೀಸನ್‌ಗೆ ಸಣ್ಣಪುಟ್ಟ ಬದಲಾವಣೆಯಾಗುವ ಸಾಧ್ಯತೆಯಿದೆ. ಮ್ಯಾಕ್ಸ್‌ವೆಲ್ ಬಹುಶಃ ತಂಡದಿಂದ ಹೊರ ಬೀಳಬಹುದು. ಆದರೆ ಕೆಎಲ್ ರಾಹುಲ್-ಅನಿಲ್ ಕುಂಬ್ಳೆ ಜೋಡಿ ತಂಡದಲ್ಲಿ ಮುಂದುವರೆಯುವ ಸಾಧ್ಯತೆಯಿದೆ.

'ತಂಡದ ಮಾಲೀಕರು ನಾಯಕ ಮತ್ತು ಕೋಚ್ ಬಗ್ಗೆ ಖುಷಿಗೊಂಡಿದ್ದಾರೆ. ರಾಹುಲ್ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಟೂರ್ನಿಯ ದ್ವಿತೀಯಾರ್ಧದಲ್ಲಿ ತಂಡ ಒಳ್ಳೆ ಕಮ್‌ಬ್ಯಾಕ್‌ ತೋರಿಸಿತ್ತು. ಕೆಲವೊಂದು ಪಂದ್ಯದಲ್ಲಿ ಹಿನ್ನಡೆ ಅನುಭವಿಸದಿದ್ದರೆ ತಂಡ ಪ್ಲೇ ಆಫ್‌ಗೆ ಪ್ರವೇಶಿಸುತ್ತಿತ್ತು,' ಎಂದು ಮೂಲವೊಂದು ಹೇಳಿದೆ.

Story first published: Tuesday, November 10, 2020, 18:27 [IST]
Other articles published on Nov 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X