ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂದು ಪಂಜಾಬ್ vs ಹೈದ್ರಾಬಾದ್ ಮುಖಾಮುಖಿ: ಹೆಡ್‌ To ಹೆಡ್ ರೆಕಾರ್ಡ್‌

ದುಬೈ ಇಂಟರ್‌ನ್ಯಾಷ್‌ನಲ್ ಕ್ರಿಕೆಟ್‌ ಸ್ಟೇಡಿಯಂನಲ್ಲಿಂದು ಪ್ಲೇ ಆಫ್ ಕನಸನ್ನು ಹೊತ್ತು ಸಾಗಿರುವ ಎರಡು ತಂಡಗಳು ಮುಖಾಮುಖಿಯಾಗುತ್ತಿವೆ. ಐಪಿಎಲ್ 13ನೇ ಆವೃತ್ತಿಯ 42ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಸನ್‌ರೈಸರ್ಸ್ ಹೈದ್ರಾಬಾದ್ ಕಾದಾಟ ನಡೆಸಲಿವೆ.

ತಲಾ ಹತ್ತು ಪಂದ್ಯಗಳನ್ನ ಆಡಿರುವ ಪಂಜಾಬ್ ಮತ್ತು ಹೈದ್ರಾಬಾದ್ ಸಮನಾದ ಅಂಕಗಳ ಜೊತೆಗೆ ಐದು ಆರನೇ ಸ್ಥಾನದಲ್ಲಿವೆ. ಪ್ಲೇ ಆಫ್ ತಲುಪಲು ಉಳಿದ ಪಂದ್ಯಗಳನ್ನ ಗೆಲ್ಲಲೇಬೇಕಾದ ಒತ್ತಡದಲ್ಲಿ ಕಣಕ್ಕಿಳಿಯುತ್ತಿವೆ.

ಪಂಜಾಬ್-ಹೈದ್ರಾಬಾದ್ ಹೆಡ್ ಟು ಹೆಡ್

ಪಂಜಾಬ್-ಹೈದ್ರಾಬಾದ್ ಹೆಡ್ ಟು ಹೆಡ್

ಐಪಿಎಲ್‌ನಲ್ಲಿ ಈವರೆಗೆ ಉಭಯ ತಂಡಗಳು 15 ಬಾರಿ ಪರಸ್ಪರ ಮುಖಾಮುಖಿಯಾಗಿವೆ ಮತ್ತು ಎಸ್‌ಆರ್‌ಹೆಚ್ 11 ಬಾರಿ ಗೆಲ್ಲುವ ಮೂಲಕ ಮೇಲುಗೈ ಸಾಧಿಸಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ನಾಲ್ಕು ಬಾರಿ ಮಾತ್ರ ಪಂದ್ಯ ಗೆದ್ದಿದೆ.

ಹೈದರಾಬಾದ್‌ vs ಪಂಜಾಬ್ ಪೈಪೋಟಿ: ಸಂಭಾವ್ಯ ತಂಡ, ಪಿಚ್ ರಿಪೋರ್ಟ್

 ಉಭಯ ತಂಡಗಳ ಕೊನೆಯ ಮುಖಾಮುಖಿ

ಉಭಯ ತಂಡಗಳ ಕೊನೆಯ ಮುಖಾಮುಖಿ

ಎಸ್‌ಆರ್‌ಹೆಚ್ (20 ಓವರ್‌ಗಳಲ್ಲಿ 201/6) ಕಿಂಗ್ಸ್‌ ಇಲೆವೆನ್ ಪಂಜಾಬ್ (16.5 ಓವರ್‌ಗಳಲ್ಲಿ 132/10) ಅವರನ್ನು 69 ರನ್‌ಗಳಿಂದ ಸೋಲಿಸಿತು.

ಈ ಋತುವಿನ ಆರಂಭದಲ್ಲಿ, ಅಕ್ಟೋಬರ್ 8, ಗುರುವಾರ ದುಬೈನಲ್ಲಿ ಎರಡು ತಂಡಗಳು ಕೊನೆಯ ಬಾರಿಗೆ ಎದುರಾಗಿದ್ದವು. ಹೈದರಾಬಾದ್ ಮೂಲದ ಫ್ರ್ಯಾಂಚೈಸಿ, ಪಂಜಾಬ್ ಮೂಲದ ತಂಡವನ್ನ 69 ರನ್‌ಗಳಿಂದ ಸೋಲಿಸಿತು. ಜಾನಿ ಬೈರ್‌ಸ್ಟೋವ್ (97) ಮತ್ತು ಡೇವಿಡ್ ವಾರ್ನರ್ (52) ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕ ವಿಕೆಟ್‌ಗೆ ಈ ಜೋಡಿ 160 ರನ್ ಗಳಿಸಿ ತಮ್ಮ ತಂಡವನ್ನು 200ರ ಗಡಿ ದಾಟಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಕೆ.ಎಲ್. ರಾಹುಲ್ ಅವರ ಪಂಜಾಬ್ ಕೇವಲ 132 ರನ್‌ಗಳನ್ನು ಮಾತ್ರ ಗಳಿಸಿತು.

ಕೊನೆಯ ಐದು ಪಂದ್ಯಗಳ ಫಲಿತಾಂಶ

ಕೊನೆಯ ಐದು ಪಂದ್ಯಗಳ ಫಲಿತಾಂಶ

ಕೆಎಕ್ಸ್‌ಐಪಿ- ಪಂಜಾಬ್ ತನ್ನ ಕೊನೆಯ ಐದು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇಆಫ್ ತಲುಪುವ ಸಾಧ್ಯತೆಯನ್ನು ಹೆಚ್ಚಿಸಿದೆ. (3: 2)

ಎಸ್‌ಆರ್‌ಹೆಚ್- ಹೈದರಾಬಾದ್ ತನ್ನ ಕೊನೆಯ ಐದು ಪಂದ್ಯಗಳಲ್ಲಿ ಎರಡನ್ನು ಮಾತ್ರ ಗೆದ್ದಿದೆ ಆದರೆ ಪ್ಲೇ ಆಫ್‌ಗೆ ಗುರಿಯಿಟ್ಟಿದೆ. (2: 3)

 ಕಿಂಗ್ಸ್‌ ಇಲೆವೆನ್ ಪರ ಅತಿ ಹೆಚ್ಚು ರನ್/ವಿಕೆಟ್ ಪಡೆದ ಪ್ಲೇಯರ್ಸ್‌

ಕಿಂಗ್ಸ್‌ ಇಲೆವೆನ್ ಪರ ಅತಿ ಹೆಚ್ಚು ರನ್/ವಿಕೆಟ್ ಪಡೆದ ಪ್ಲೇಯರ್ಸ್‌

ಅಗ್ರ ಸ್ಕೋರರ್‌ಗಳು
ಕೆ.ಎಲ್.ರಾಹುಲ್ (540)
ಮಯಾಂಕ್ ಅಗರ್ವಾಲ್ (398)
ನಿಕೋಲಸ್ ಪೂರನ್ (295)

ಹೆಚ್ಚು ವಿಕೆಟ್ ಪಡೆದವರು
ಮೊಹಮ್ಮದ್ ಶಮಿ (16)

ರವಿ ಬಿಷ್ಣೋಯ್ (9)

ಮುರುಗನ್ ಅಶ್ವಿನ್ (7)

ಹೈದ್ರಾಬಾದ್ ಪರ ಅತಿ ಹೆಚ್ಚು ರನ್/ವಿಕೆಟ್ ಪಡೆದ ಪ್ಲೇಯರ್ಸ್‌

ಹೈದ್ರಾಬಾದ್ ಪರ ಅತಿ ಹೆಚ್ಚು ರನ್/ವಿಕೆಟ್ ಪಡೆದ ಪ್ಲೇಯರ್ಸ್‌

ಅಗ್ರ ಸ್ಕೋರರ್‌ಗಳು
ಡೇವಿಡ್ ವಾರ್ನರ್ (335)
ಜಾನಿ ಬೈರ್‌ಸ್ಟೋವ್ (326)
ಮನೀಶ್ ಪಾಂಡೆ (295)

ಹೆಚ್ಚು ವಿಕೆಟ್ ಪಡೆದವರು

ರಶೀದ್ ಖಾನ್ (12)

ಟಿ.ನಟರಾಜನ್ (11)

ಖಲೀಲ್ ಅಹ್ಮದ್ (8)

Story first published: Saturday, October 24, 2020, 17:39 [IST]
Other articles published on Oct 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X