ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲೋ ಸ್ಕೋರಿಂಗ್ ಥ್ರಿಲ್ಲರ್‌ನಲ್ಲಿ ಹೈದರಾಬಾದ್ ವಿರುದ್ಧ ಗೆದ್ದು ಬೀಗಿದ ಪಂಜಾಬ್

IPL 2020: KXIP vs SRH Match 43 highlights in kannada

ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತೊಂದು ರೋಚಕ ಜಯವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಪಂಜಾಬ್ ನೀಡಿದ 127 ರನ್‌ಗಳ ಕನಿಷ್ಠ ಗುರಿಯನ್ನು ತಲುಪಲು ಸಾದ್ಯವಾಗದೆ ನಾಟಕೀಯವಾಗಿ ಕುಸಿತ ಕಂಡ ಹೈದರಾಬಾದ್ 12 ರನ್‌ಗಳಿಂದ ರಾಹುಲ್ ಪಡೆಗೆ ಶರಣಾಗಿದೆ.

ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಎದುರಾಳಿಯನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡ ಹೈದರಾಬಾದ್ ಬೌಲರ್‌ಗಳು ಹೆಚ್ಚಿನ ರನ್ ಹರಿದುಹೋಗದಂತೆ ತಡೆಯುವಲ್ಲಿ ಯಶಸ್ವಿಯಾದರು. ಪಂಜಾಬ್ ಬ್ಯಾಟ್ಸ್‌ಮನ್‌ಗಳಲ್ಲಿ ಯಾರು ಕೂಡ ದೊಡ್ಡ ಮೊತ್ತವನ್ನು ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ. ಅಂತಿಮವಾಗಿ 126 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸುಲಭ ಸವಾಲನ್ನು ಎದುರಾಳಿಯ ಮುಂದಿಟ್ಟಿತ್ತು.

ಈ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಹೈದರಾಬಾದ್ ಸುಲಭವಾಗಿ ಗುರಿ ತಲುಪಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ನಿಧಾನವಾಗಿ ಗುರಿಯತ್ತ ಸಾಗಿದ್ದ ಹೈದರಾಬಾದ್‌ಗೆ ಅಂತ್ಯದಲ್ಲಿ ಪಂಜಾಬ್ ಬೌಲರ್‌ಗಳು ಆಘಾತದ ಮೇಲೆ ಆಘಾತವನ್ನು ನೀಡಲು ಆರಂಭಿಸಿದರು. ಜೋರ್ಡನ್ ಹಾಗೂ ಅರ್ಷ್‌ದೀಪ್ ತಲಾ ಮೂರು ವಿಕೆಟ್ ಕಿತ್ತು ಮಿಂಚಿದರು.

ಉತ್ತಮ ಸ್ಥಿತಿಯಲ್ಲಿದ್ದ ಹೈದರಾಬಾದ್

ಉತ್ತಮ ಸ್ಥಿತಿಯಲ್ಲಿದ್ದ ಹೈದರಾಬಾದ್

ಸನ್‌ರೈಸರ್ಸ್ ಹೈದರಾಬಾದ್ ತಂಡ 100 ರನ್ ಗಳಿಸುವವರೆಗೂ ಉತ್ತಮ ಸ್ಥಿತಿಯಲ್ಲೇ ಇತ್ತು. ಗೆಲುವು ಕೈಗೆಟುಕುವ ಹಂತದಲ್ಲಿ ಪಂಜಾಬ್ ಬೌಲರ್‌ಗಳು ನಿರೀಕ್ಷೆಗೂ ಮೀರಿದ ಪ್ರದರ್ಶನವನ್ನು ನೀಡಲು ಆರಂಭಿಸಿದರು. ಕಳೆದ ಪಂದ್ಯದ ಹೀರೋ ಮನೀಶ್ ಪಾಂಡೆ ಹಾಗೂ ವಿಜಯ್ ಶಂಕರ್ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ನಿಧಾನಗತಿಯಲ್ಲಿ ರನ್ ಸೆರಿಸುತ್ತಾ ಸಾಗಿದ್ದರು.

ನಿರಾಸೆ ಮೂಡಿಸಿದ ಮನೀಶ್ ಪಾಂಡೆ

ನಿರಾಸೆ ಮೂಡಿಸಿದ ಮನೀಶ್ ಪಾಂಡೆ

100ರನ್ ಗಳಿಸಿದ ಸಂದರ್ಭದಲ್ಲಿ ಮನೀಶ್ ಪಾಂಡೆ 29 ಎಸೆತಗಳಲ್ಲಿ 15 ರನ್ ಗಳಿಸಿ ಜೋರ್ಡನ್‌ಗೆ ವಿಕೆಟ್ ಒಪ್ಪಿಸಿದರು. ಹೈದರಾಬಾದ್ ಬ್ಯಾಟಿಂಗ್‌ಲೈನ್‌ಅಪ್‌ನಲ್ಲಿ ಇನ್ನು ಸಾಕಷ್ಟು ಆಟಗಾರರಿದ್ದರು. ತಂಡದ ಗೆಲುವಿಗೆ ಬೇಕಿದ್ದ ರನ್ 27 ಮಾತ್ರ. ಆದರೆ ಎಸೆತಗಳ ಸಂಖ್ಯೆ ಅಗತ್ಯವಿದ್ದ ರನ್‌ಗಳಿಗಿಂತ ಕಡಿಮೆಯಿದ್ದಿದ್ದು ಪಂಜಾಬ್ ಪಾಳೆಯದಲ್ಲಿ ನಿರೀಕ್ಷೆ ಮೂಡಲು ಕಾರಣವಾಗಿತ್ತು.

ಜೋರ್ಡನ್-ಅರ್ಷ್‌ದೀಪ್ ಸಾಹಸ

ಜೋರ್ಡನ್-ಅರ್ಷ್‌ದೀಪ್ ಸಾಹಸ

ಮನಿಶ್ ಪಾಂಡೆ ವಿಕೆಟ್ ಕಳೆದುಕೊಂಡ ಬಳಿಕ 10 ರನ್ ಸೇರಿಸುವಷ್ಟರಲ್ಲಿ ವಿಜಯ್ ಶಂಕರ್ ಅರ್ಷ್‌ದೀಪ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಜೇಸನ್ ಹೋಲ್ಡರ್ ಹಾಗೂ ರಶೀದ್ ಖಾನ್ ವಿಕೆಟನ್ನು ಸತತ 2 ಎಸೆತಗಳಲ್ಲಿ ಕೆಡವುವಲ್ಲಿ ಜೋರ್ಡನ್ ಯಶಸ್ವಿಯಾದರು. ಹೀಗೆ ಜೋರ್ಡನ್ ತಮ್ಮ ಅಂತಿಮ ಓವರ್‌ನಲ್ಲೂ ಹೈದರಾಬಾದ್‌ಗೆ ಶಾಕ್ ನೀಡಿದರು.

ಆಲೌಟ್ ಮಾಡಿದ ಪಂಜಾಬ್

ಅಂತಿಮ ಓವರ್‌ನಲ್ಲಿ ಹೈದರಾಬಾದ್ ಗೆಲುವಿಗೆ 15 ರನ್‌ಗಳ ಅವಶ್ಯಕತೆಯಿತ್ತು. ಕೊನೆಯ ಓವರ್‌ ಎಸೆಯಲು ಬಂದ ಅರ್ಷ್‌ದೀಪ್ ಸಂದೀಪ್ ಶರ್ಮಾ ಹಾಗೂ ಪ್ರಿಯಮ್ ಗಾರ್ಗ್ ವಿಕೆಟನ್ನು ಸತತ ಎರಡು ಎಸೆತಗಳಲ್ಲಿ ಪಡೆಯುವಲ್ಲಿ ಯಶಸ್ವಿಯಾದರು. ಐದನೇ ಎಸೆತಕ್ಕೆ ಖಲೀಲ್ ಕೂಡ ರನ್‌ಔಟ್ ಆಗುವ ಮೂಲಕ ಹೈದರಾಬಾದ್ ಇನ್ನೂ ಒಂದು ಎಸೆತ ಇರುವಂತೆಯೇ ಆಲೌಟ್ ಆಗಿತ್ತು. ಅಲ್ಲಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ 12 ರನ್‌ಗಳ ರೋಚಕ ಜಯವನ್ನು ದಾಖಲಿಸಿತ್ತು.

Story first published: Sunday, October 25, 2020, 0:25 [IST]
Other articles published on Oct 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X