ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಬೇರೆ ಬೇರೆ ತಂಡಗಳಲ್ಲಿರುವ ಕನ್ನಡಿಗರ ಸಂಪೂರ್ಣ ಪಟ್ಟಿ

IPL 2020: List of Karnataka players part of different IPL squads

ಬೆಂಗಳೂರು: ಕರ್ನಾಟಕದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮೆರೆದ ಸಾಕಷ್ಟು ಪ್ರತಿಭಾವಂತರಿದ್ದಾರೆ. ಕ್ರಿಕೆಟ್ ಕ್ಷೇತ್ರಕ್ಕೂ ಕನ್ನಡನಾಡು ಹಲವಾರು ಸಾಧಕರನ್ನು, ಪ್ರತಿಭಾವಂತರನ್ನು ನೀಡಿದೆ. ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಗುಂಡಪ್ಪ ವಿಶ್ವನಾಥ್, ಜಾವಗಲ್ ಶ್ರೀನಾಥ್, ದೊಡ್ಡ ಗಣೇಶ್, ಸೈಯ್ಯದ್ ಕಿರ್ಮಾನಿ ಇಂಥ ಅನೇಕ ದಿಗ್ಗಜರ ದೊಡ್ಡ ಪಟ್ಟಿಯೇ ಇದೆ.

MI vs CSK: ಮುಂಬೈ-ಚೆನ್ನೈ ಸಂಭಾವ್ಯ XI, ನೇರಪ್ರಸಾರ, ಪ್ರಮುಖ ಮಾಹಿತಿMI vs CSK: ಮುಂಬೈ-ಚೆನ್ನೈ ಸಂಭಾವ್ಯ XI, ನೇರಪ್ರಸಾರ, ಪ್ರಮುಖ ಮಾಹಿತಿ

ಹಲವಾರು ದಿಗ್ಗಜರ ನಡುವೆ ಈಗಲೂ ಮಿನುಗುತ್ತಿರುವ ಯುವ ಪ್ರತಿಭಾವಂತರೂ ಇದ್ದಾರೆ. ಕೆಎಲ್ ರಾಹುಲ್, ಕೃಷ್ಣಪ್ಪ ಗೌತಮ್, ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್, ಶ್ರೇಯಸ್ ಗೋಪಾಲ್, ಕರುಣ್ ನಾಯರ್, ದೇವದತ್ ಪಡಿಕ್ಕಲ್ ಇವರೆಲ್ಲ ಈಗ ಸಕ್ರಿಯರಾಗಿರುವ ಆಟಗಾರರು.

MI vs CSK: ವಿರಾಟ್ ಕೊಹ್ಲಿ ದಾಖಲೆ ಮುರಿಯುವತ್ತ ರೋಹಿತ್ ಶರ್ಮಾ ಚಿತ್ತ!MI vs CSK: ವಿರಾಟ್ ಕೊಹ್ಲಿ ದಾಖಲೆ ಮುರಿಯುವತ್ತ ರೋಹಿತ್ ಶರ್ಮಾ ಚಿತ್ತ!

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕರ್ನಾಟಕದ ತಂಡ. ಆದರೆ ಈ ತಂಡದಲ್ಲೇ ಕರ್ನಾಟಕದ ಎಲ್ಲಾ ಆಟಗಾರರು ಇಲ್ಲ. ಈಗ ಆಡುತ್ತಿರುವ ಕರ್ನಾಟಕದ ಆಟಗಾರರೆಲ್ಲ ಬೇರೆ ಬೇರೆ ಐಪಿಎಲ್ ತಂಡಕ್ಕೆ ಹಂಚಿ ಹೋಗಿದ್ದಾರೆ.

ಕಾಮೆಂಟರಿ ಪ್ಯಾನೆಲ್‌ನಿಂದ ಹೊರದಬ್ಬಿದ್ದಕ್ಕೆ ಅಸಲಿ ಕಾರಣ ಹೇಳಿದ ಮಂಜ್ರೇಕರ್!ಕಾಮೆಂಟರಿ ಪ್ಯಾನೆಲ್‌ನಿಂದ ಹೊರದಬ್ಬಿದ್ದಕ್ಕೆ ಅಸಲಿ ಕಾರಣ ಹೇಳಿದ ಮಂಜ್ರೇಕರ್!

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ 13ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ಕರ್ನಾಟಕ ರಣಜಿ ತಂಡ ಐಪಿಎಲ್‌ಗೆ ಸಂಬಂಧಿಸಿ ಒಂದು ಟ್ವೀಟ್ ಮಾಡಿತ್ತು. ಐಪಿಎಲ್‌ನ ಬೇರೆ ಬೇರೆ ತಂಡಗಳಲ್ಲಿರುವ ಆಟಗಾರರ ಪಟ್ಟಿಯನ್ನು ಟ್ವೀಟ್ ಮೂಲಕ ಅದು ನೀಡಿತ್ತು. ಆ ಪಟ್ಟಿ ಕೆಳಗಿದೆ.

ಈ ಐಪಿಎಲ್‌ ಸೀಸನ್‌ನ ನಿರೂಪಕರ ಸಂಪೂರ್ಣ ಪಟ್ಟಿ, ಮಯಾಂತಿ ಇಲ್ಲ!ಈ ಐಪಿಎಲ್‌ ಸೀಸನ್‌ನ ನಿರೂಪಕರ ಸಂಪೂರ್ಣ ಪಟ್ಟಿ, ಮಯಾಂತಿ ಇಲ್ಲ!

ಐಪಿಎಲ್ ಬೇರೆ ಬೇರೆ ತಂಡಗಳಲ್ಲಿ ಆಡುವ ಕರ್ನಾಟಕದ ಆಟಗಾರರ ಪಟ್ಟಿ
* ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ): ದೇವದತ್ ಪಡಿಕ್ಕಲ್, ಪವನ್ ದೇಶಪಾಂಡೆ.
* ಕಿಂಗ್ಸ್ ಇಲೆವೆನ್ ಪಂಜಾಬ್ (ಕೆXIಪಿ): ಕೆಎಲ್ ರಾಹುಲ್, ಕರುಣ್ ನಾಯರ್, ಕೃಷ್ಣಪ್ಪ ಗೌತಮ್, ಸುಚಿತ್ ಜಗದೀಶ, ಮಯಾಂಕ್ ಅಗರ್ವಾಲ್.
* ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್): ಪ್ರಸಿದ್ಧ್ ಕೃಷ್ಣ
* ರಾಜಸ್ಥಾನ ರಾಯಲ್ಸ್ (ಆರ್‌ಆರ್): ಶ್ರೇಯಸ್ ಗೋಪಾಲ್, ಅನಿರುದ್ಧ್ ಜೋಶಿ.
* ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್): ಮನೀಶ್ ಪಾಂಡೆ.

Story first published: Saturday, September 19, 2020, 13:49 [IST]
Other articles published on Sep 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X