ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

MI vs CSK: ಮುಂಬೈ-ಚೆನ್ನೈ ಸಂಭಾವ್ಯ XI, ನೇರಪ್ರಸಾರ, ಪ್ರಮುಖ ಮಾಹಿತಿ

IPL 2020, Match 1: MI vs CSK live streaming, match and toss timing details in kannada

ಅಬುಧಾಬಿ: ಫುಟ್ಬಾಲ್‌ನಲ್ಲಿ ರಿಯಲ್ ಮ್ಯಾಡ್ರಿಡ್ ಮತ್ತು ಎಫ್‌ಸಿ ಬಾರ್ಸಿಲೋನಾ ನಡುವಿನ ಕುತೂಹಲಕಾರಿ ಕಾಳಗವನ್ನು ಎಲ್ ಕ್ಲಾಸಿಕೋ ಎಂದು ಕರೆಯಲಾಗುತ್ತದೆ. ಇತ್ತಂಡಗಳ ಪಂದ್ಯ ಅಷ್ಟರ ಮಟ್ಟಿಗೆ ರೋಚಕ ಅನ್ನಿಸುತ್ತದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌)ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ಪಂದ್ಯವನ್ನೂ ನಾವು ಎಲ್‌ ಕ್ಲಾಸಿಕೊ ಎನ್ನಬಹುದೇನೋ. ಐಪಿಎಲ್ ಇತಿಹಾಸದಲ್ಲಿ ಈ ಎರಡು ಬಲಿಷ್ಠ ತಂಡಗಳ ಸೆಣಸಾಟವೂ ಅಷ್ಟೇ ರೋಮಾಂಚಕಾರಿ ಎನಿಸುತ್ತದೆ.

MI vs CSK: ವಿರಾಟ್ ಕೊಹ್ಲಿ ದಾಖಲೆ ಮುರಿಯುವತ್ತ ರೋಹಿತ್ ಶರ್ಮಾ ಚಿತ್ತ!MI vs CSK: ವಿರಾಟ್ ಕೊಹ್ಲಿ ದಾಖಲೆ ಮುರಿಯುವತ್ತ ರೋಹಿತ್ ಶರ್ಮಾ ಚಿತ್ತ!

ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ನಲ್ಲಿ ನಡೆಯಲಿರುವ ನಗದು ಶ್ರೀಮಂತ ಟೂರ್ನಿ ಐಪಿಎಲ್‌ನ ಉದ್ಘಾಟನಾ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಅಪೂರ್ವ ಕದನಕ್ಕೆ ಸಾಕ್ಷಿಯಾಗಲಿದೆ.

ಕಾಮೆಂಟರಿ ಪ್ಯಾನೆಲ್‌ನಿಂದ ಹೊರದಬ್ಬಿದ್ದಕ್ಕೆ ಅಸಲಿ ಕಾರಣ ಹೇಳಿದ ಮಂಜ್ರೇಕರ್!ಕಾಮೆಂಟರಿ ಪ್ಯಾನೆಲ್‌ನಿಂದ ಹೊರದಬ್ಬಿದ್ದಕ್ಕೆ ಅಸಲಿ ಕಾರಣ ಹೇಳಿದ ಮಂಜ್ರೇಕರ್!

13ನೇ ಆವೃತ್ತಿಯ ಐಪಿಎಲ್‌ನ ಮೊದಲ ಪಂದ್ಯದಕ್ಕೆ ಸಂಬಂಧಿಸಿ ಪ್ರಮುಖ ಮಾಹಿತಿಗಳು ಇಲ್ಲಿವೆ. ಇತ್ತಂಡಗಳ ಸಂಭಾವ್ಯ XI ಕೂಡ ಇಲ್ಲಿ ನೀಡಿದ್ದೇವೆ.

ಎರಡೂ ಬಲಿಷ್ಠ ತಂಡಗಳು

ಎರಡೂ ಬಲಿಷ್ಠ ತಂಡಗಳು

ಐಪಿಎಲ್ ಆರಂಭಿಕ ಪಂದ್ಯದಲ್ಲಿ ಆಡಲಿರುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ಎರಡೂ ಬಲಿಷ್ಠ ತಂಡಗಳು. ಇತ್ತಂಡಗಳು ಒಟ್ಟಿಗೆ 7 ಬಾರಿ ಪ್ರಶಸ್ತಿ (ಮುಂಬೈ 4, ಚೆನ್ನೈ 3) ಗೆದ್ದಿವೆ. ಒಟ್ಟಿಗೆ 13 ಬಾರಿ ಫೈನಲ್‌ನಲ್ಲಿ ಸ್ಪರ್ಧಿಸಿವೆ. ಎರಡೂ ತಂಡಗಳೂ ಈ ಬಾರಿಯೂ ಪ್ರಶಸ್ತಿ ಗೆಲ್ಲಬಲ್ಲ ಪ್ರಮುಖ ತಂಡಗಳು.

ಆರಂಭಿಕ ಪಂದ್ಯದ ಮಾಹಿತಿ

ಆರಂಭಿಕ ಪಂದ್ಯದ ಮಾಹಿತಿ

ಮುಂಬೈ ಮತ್ತು ಚೆನ್ನೈ ನಡುವಿನ ಮೊದಲ ಪಂದ್ಯ ಅಬುದಾಭಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆಯಲಿದೆ. ಸೆಪ್ಟೆಂಬರ್ 19ರಂದು 7.30 pm ಹೊತ್ತಿಗೆ ಪಂದ್ಯ ಆರಂಭವಾಗಲಿದೆ. ಪಂದ್ಯದ ನೇರಪ್ರಸಾರ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಚಾನೆಲ್, ಹಾಟ್‌ ಸ್ಟಾರ್ ಮತ್ತು ಜಿಯೋದಲ್ಲಿ ಲಭಿಸಲಿದೆ.

ಮುಂಬೈ ಸಂಭಾವ್ಯ ತಂಡ (‍XI)

ಮುಂಬೈ ಸಂಭಾವ್ಯ ತಂಡ (‍XI)

ರೋಹಿತ್ ಶರ್ಮಾ (ಸಿ), ಕ್ವಿಂಟನ್ ಡಿ ಕಾಕ್ (ವಿಕೆ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ನಾಥನ್ ಕೌಲ್ಟರ್-ನೈಲ್/ಮಿಚೆಲ್ ಮೆಕ್ಲೆನಾಘನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್ ಬುಮ್ರಾ.

ಚೆನ್ನೈ ಸಂಭಾವ್ಯ ತಂಡ (‍XI)

ಚೆನ್ನೈ ಸಂಭಾವ್ಯ ತಂಡ (‍XI)

ಶೇನ್ ವ್ಯಾಟ್ಸನ್, ಫಾಫ್ ಡು ಪ್ಲೆಸಿಸ್, ಅಂಬಾಟಿ ರಾಯುಡು, ಎಂ.ಎಸ್. ಧೋನಿ, ಕೇದಾರ್ ಜಾಧವ್, ಡ್ವೇನ್ ಬ್ರಾವೋ/ಸ್ಯಾಮ್ ಕರನ್, ರವೀಂದ್ರ ಜಡೇಜಾ, ಪಿಯೂಷ್ ಚಾವ್ಲಾ, ಇಮ್ರಾನ್ ತಾಹಿರ್, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್.

Story first published: Saturday, September 19, 2020, 13:50 [IST]
Other articles published on Sep 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X