ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಚೆನ್ನೈ vs ರಾಜಸ್ಥಾನ್, ಸಂಭಾವ್ಯ ತಂಡಗಳು, ಪಿಚ್ ರಿಪೋರ್ಟ್

IPL 2020: Match 37, CSK vs RR Preview, Predicted Playing XIs, Pitch Report, Toss Timing, Weather Report

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಅಕ್ಟೋಬರ್ 19ರಂದು ನಡೆಯುವ ಈ ಪಂದ್ಯದ ಗೆಲುವು ಎರಡೂ ತಂಡಗಳಿಗೂ ಪ್ರಮುಖವಾಗಿದೆ. ಚೆನ್ನೈ ಮತ್ತು ರಾಜಸ್ಥಾನ್ ಎರಡೂ ತಂಡಗಳೂ ಈವರೆಗೆ 9 ಪಂದ್ಯಗಳನ್ನಾಡಿದೆ. ಇದರಲ್ಲಿ ಸಿಎಸ್‌ಕೆ 3 ಪಂದ್ಯಗಳನ್ನು ಗೆದ್ದಿದ್ದರೆ ರಾಜಸ್ಥಾನ್ ಕೂಡ 3 ಗೆಲುವು ದಾಖಲಿಸಿದೆ.

ಮುಂಬೈ ಇಂಡಿಯನ್ಸ್ ಹೆಚ್ಚು ಸೋತಿದ್ದು ಯಾವ ತಂಡದ ವಿರುದ್ಧ ಗೊತ್ತಾ?!ಮುಂಬೈ ಇಂಡಿಯನ್ಸ್ ಹೆಚ್ಚು ಸೋತಿದ್ದು ಯಾವ ತಂಡದ ವಿರುದ್ಧ ಗೊತ್ತಾ?!

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಎರಡೂ ತಂಡಗಳ ಖಾತೆಯಲ್ಲಿ 6 ಅಂಕಗಳಿವೆ. ಆದರೆ ಚೆನ್ನೈ ನೆಟ್ ರನ್ ರೇಟ್ ಕೊಂಚ ಚೆನ್ನಾಗಿರುವುದರಿಂದ ಅಂಕಪಟ್ಟಿಯಲ್ಲಿ ಸಿಎಸ್‌ಕೆ 7ನೇ ಸ್ಥಾನದಲ್ಲಿದೆ, ಆರ್ಆರ್ 8ನೇ ಸ್ಥಾನದಲ್ಲಿದೆ.

ಹಿಂದೆಯೂ ಒಂದೇ ಪಂದ್ಯದಲ್ಲಿ ಎರಡೆರಡು ಸೂಪರ್ ಓವರ್‌ಗಳು ನಡೆದಿತ್ತು!ಹಿಂದೆಯೂ ಒಂದೇ ಪಂದ್ಯದಲ್ಲಿ ಎರಡೆರಡು ಸೂಪರ್ ಓವರ್‌ಗಳು ನಡೆದಿತ್ತು!

ಐಪಿಎಲ್ 37ನೇ ಪಂದ್ಯದಲ್ಲಿ ಚೆನ್ನೈ ಮತ್ತು ರಾಜಸ್ಥಾನ್ ಕಾದಾಡಲಿದ್ದು, 7.30 pmಗೆ ಪಂದ್ಯ ಆರಂಭವಾಗಲಿದೆ. 7 pmಗೆ ಟಾಸ್ ನಡೆಯಲಿದೆ.

ಹವಾಮಾನ ವರದಿ

ಹವಾಮಾನ ವರದಿ

ಚೆನ್ನೈ vs ರಾಜಸ್ಥಾನ್ ಪಂದ್ಯ ನಡೆಯುವ ಅಕ್ಟೋಬರ್ 19ರ ಸೋಮವಾರ ಅಬುಧಾಬಿಯಲ್ಲಿ 33 ಡಿಗ್ರೀ ಸೆಲ್ಶಿಯನ್ ತಾಪಮಾನ ಇರಲಿದೆ. ಸಾಮಾನ್ಯದಂತೆ ತೀವ್ರ ಶೆಕೆ ಇರಲಿದೆ. ರಾತ್ರಿ ವೇಳೆ ಕೊಂಚ ತಣ್ಣಗಿನ ತಾಪಮಾನ ಇರಲಿದೆ. ಈ ದಿನ ಆರ್ದ್ರತೆ ಪ್ರಮಾಣ 46 % ಇರಲಿದೆ.

ಪಿಚ್ ವರದಿ

ಪಿಚ್ ವರದಿ

ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಅನುಕೂಲವಾಗಿದೆ. ಅಂದರೆ ಒಂಥರಾ ಸಮತೋಲನವಿರುದ್ಧ ಪಿಚ್ ಇದು. ಸ್ಪಿನ್ನರ್‌ಗಳಿಗೆ ಪಿಚ್ ಕೊಂಚ ಹೆಚ್ಚು ಅನುಕೂಲ ನೀಡಲಿದ್ದು, ಒಂದೊಂದು ಸಾರಿ ಮಂಜಿನ ಹನಿಯೂ ಪಂದ್ಯದ ಫಲಿತಾಂಶದಲ್ಲಿ ಪರಿಣಾಮ ಬೀರಿದ್ದಿದೆ.

ಚೆನ್ನೈ ಸಂಭಾವ್ಯ ತಂಡ

ಚೆನ್ನೈ ಸಂಭಾವ್ಯ ತಂಡ

ಸ್ಯಾಮ್ ಕರನ್, ಫಾಫ್ ಡು ಪ್ಲೆಸಿಸ್, ಶೇನ್ ವ್ಯಾಟ್ಸನ್, ಅಂಬಾಟಿ ರಾಯುಡು, ಎಂ.ಎಸ್.ಧೋನಿ (ಸಿ, ವಿಕೆ), ರವೀಂದ್ರ ಜಡೇಜಾ, ಕೇದಾರ್ ಜಾಧವ್/ಪಿಯೂಷ್ ಚಾವ್ಲಾ, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ಕರ್ಣ್ ಶರ್ಮಾ, ಲುಂಗಿ ಎನ್‌ಗಿಡಿ.

ರಾಜಸ್ಥಾನ್ ಸಂಭಾವ್ಯ ತಂಡ

ರಾಜಸ್ಥಾನ್ ಸಂಭಾವ್ಯ ತಂಡ

ರಾಬಿನ್ ಉತ್ತಪ್ಪ, ಬೆನ್ ಸ್ಟೋಕ್ಸ್, ಸಂಜು ಸ್ಯಾಮ್ಸನ್, ಸ್ಟೀವ್ ಸ್ಮಿತ್ (ಸಿ), ಜೋಸ್ ಬಟ್ಲರ್ (ವಿಕೆ), ರಿಯಾನ್ ಪರಾಗ್, ರಾಹುಲ್ ತೆವಟಿಯಾ, ಶ್ರೇಯಸ್ ಗೋಪಾಲ್, ಜೋಫ್ರಾ ಆರ್ಚರ್, ಜಯದೇವ್ ಉನಾದ್ಕತ್/ವರುಣ್ ಆ್ಯರನ್, ಕಾರ್ತಿಕ್ ತ್ಯಾಗಿ.

Story first published: Monday, October 19, 2020, 13:55 [IST]
Other articles published on Oct 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X