ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂದು ಕಿಂಗ್ಸ್ ಇಲೆವೆನ್ ಪಂಜಾಬ್ VS ಡೆಲ್ಲಿ ಕ್ಯಾಪಿಟಲ್ಸ್: ಪಿಚ್ ರಿಪೋರ್ಟ್, ಸಂಭಾವ್ಯ ತಂಡ

ಕಿಂಗ್ಸ್ ಇಲೆವೆನ್ ಪಂಜಾಬ್ ಮಂಗಳವಾರ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಾದಾಟ ನಡೆಸಲಿದೆ. ದುಬೈ ಇಂಟರ್‌ನ್ಯಾಷ್‌ನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯವು ಪ್ರಮುಖವಾಗಿ ಕಿಂಗ್ಸ್‌ ಇಲವೆನ್ ಪಂಜಾಬ್‌ಗಂತೂ ಮಾಡು ಇಲ್ಲವೆ ಮಡಿ ಪರಿಸ್ಥಿತಿ ಹೊಂದಿದೆ. ಏಕೆಂದರೆ ಪ್ಲೇ ಆಫ್ ತಲುಪಲು ರಾಹುಲ್ ಟೀಮ್ ಪ್ರತಿ ಪಂದ್ಯ ಗೆಲ್ಲಬೇಕಿದೆ.

ಭಾನುವಾರ ಮುಂಬೈ ವಿರುದ್ಧದ ಘರ್ಷಣೆಯಲ್ಲಿ ಕಿಂಗ್ಸ್‌ ಇಲೆವೆನ್ ಪಂಜಾಬ್ ಎರಡು ಸೂಪರ್‌ ಓವರ್‌ಗಳನ್ನು ಎದುರಿಸಿ ಪಂದ್ಯ ಗದ್ದುಕೊಂಡಿತು. ಹೇಗಾದರೂ ಮಾಡಿ ಗೆಲ್ಲಲೇಬೇಕೆಂಬ ಛಲ ತೊಟ್ಟಿರುವ ಕೆ.ಎಲ್ ರಾಹುಲ್ ಪಡೆ ಇಂದು ಬಲಿಷ್ಠ ಹಾಗೂ ಪಾಯಿಂಟ್ಸ್ ಟೇಬಲ್ ಟಾಪರ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಾದಾಟ ನಡೆಸಲಿದೆ.

ಡೆಲ್ಲಿ ವಿರುದ್ಧ ಸೂಪರ್‌ ಓವರ್‌ನಲ್ಲಿ ಮುಗ್ಗರಿಸಿದ್ದ ಪಂಜಾಬ್

ಡೆಲ್ಲಿ ವಿರುದ್ಧ ಸೂಪರ್‌ ಓವರ್‌ನಲ್ಲಿ ಮುಗ್ಗರಿಸಿದ್ದ ಪಂಜಾಬ್

ಐಪಿಎಲ್ 2020ರ ಸೀಸನ್‌ನಲ್ಲಿ ಡೆಲ್ಲಿ ಮತ್ತು ಪಂಜಾಬ್ ಮೊದಲ ಮುಖಾಮುಖಿಯು ಸೂಪರ್ ಓವರ್‌ನಲ್ಲಿ ಅಂತ್ಯಗೊಂಡಿತು. ಗೆಲ್ಲುವ ಪಂದ್ಯವನ್ನ ಸೂಪರ್‌ ಓವರ್‌ವರೆಗೆ ತೆಗೆದುಕೊಂಡ ಹೋದ ಕಿಂಗ್ಸ್ ಇಲೆವೆನ್ ಎದುರಾಳಿಗೆ ನೀಡಿದ್ದು ಕೇವಲ ಮೂರು ರನ್‌ಗಳ ಗುರಿ. ಇದನ್ನು ಸುಲಭವಾಗಿ ಬೆನ್ನತ್ತಿದ ಡೆಲ್ಲಿ ಮೇಲುಗೈ ಸಾಧಿಸಿತು.

ಮೊಹಮ್ಮದ್ ಶಮಿಯ ಅಸಾಧಾರಣ ಬೌಲಿಂಗ್‌ಗೆ ಶ್ಲಾಘಿಸಿದ ಪ್ರೀತಿ ಜಿಂಟಾ

ಆದರೆ ಮುಂಬೈ ವಿರುದ್ಧ ಛಲಬಿಡದೆ ಹೋರಾಡಿದ ರಾಹುಲ್ ಪಡೆ ಎರಡನೇ ಸೂಪರ್ ಓವರ್‌ನಲ್ಲಿ ಪಂದ್ಯ ಗೆದ್ದುಕೊಂಡಿತು.

KXIP ವರ್ಸಸ್ DC ಪಿಚ್ ವರದಿ

KXIP ವರ್ಸಸ್ DC ಪಿಚ್ ವರದಿ

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಕೊನೆಯ ಎರಡು ಪಂದ್ಯಗಳಲ್ಲಿ ತಂಡ ಎರಡನೇ ಬ್ಯಾಟಿಂಗ್‌ನಿಂದ ಜಯಗಳಿಸಿದೆ. ನಿಗದಿತ ಓವರ್‌ಗಳಲ್ಲಿನ ಸ್ಪರ್ಧೆಯು ಸಮಬಲಗೊಂಡ ನಂತರ ಕೆಎಕ್ಸ್‌ಐಪಿ ಡಬಲ್-ಸೂಪರ್ ಓವರ್‌ನಲ್ಲಿ ಮುಂಬೈ ಅವರನ್ನು ಸೋಲಿಸಿತು. ಎರಡೂ ಬಾರಿ, ತಂಡಗಳು 175 ಗುರಿಯನ್ನು ಬೆನ್ನಟ್ಟಿದ್ದನ್ನು ನೋಡಿದರೆ, 180-190ರನ್ ಡಿಫೆಂಡ್ ಮಾಡಿಕೊಳ್ಳಬಹುದು. ಇಲ್ಲಿ ರನ್ ಚೇಸಿಂಗ್ ಸ್ಥಿರವಾಗಿ ಸುಲಭವಾಗಿದ್ದು, ಟಾಸ್ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ನಡೆಯಲಿದೆ.

KXIP ವರ್ಸಸ್ DC ಹೆಡ್-ಟು-ಹೆಡ್

KXIP ವರ್ಸಸ್ DC ಹೆಡ್-ಟು-ಹೆಡ್

ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಇದುವರೆಗೂ ಆಡಿದ 25 ಪಂದ್ಯಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ 14ರಲ್ಲಿ ಗೆಲುವು ಸಾಧಿಸಿದೆ. ಇನ್ನು ಡೆಲ್ಲಿ 11 ಪಂದ್ಯಗಳನ್ನು ತನ್ನದಾಗಿಸಿಕೊಂಡಿದೆ.

ಸೋಲಿನ ಬಳಿಕ ಆತ್ಮಾವಲೋಕನ: ಸತತ 3ನೇ ವರ್ಷ ವಯಸ್ಸಾದ ತಂಡದೊಂದಿಗೆ ಸಾಗುವುದು ಕಷ್ಟಕರ ಎಂದ CSK ಕೋಚ್

ಕಿಂಗ್ಸ್ ಇಲೆವೆನ್ ಸಂಭಾವ್ಯ ಪ್ಲೇಯಿಂಗ್ 11 ತಂಡ

ಕಿಂಗ್ಸ್ ಇಲೆವೆನ್ ಸಂಭಾವ್ಯ ಪ್ಲೇಯಿಂಗ್ 11 ತಂಡ

ಕೆ.ಎಲ್. ರಾಹುಲ್ (ನಾಯಕ ಮತ್ತು ವಾರ), ಮಾಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ಗ್ಲೆನ್ ಮ್ಯಾಕ್ಸ್ ವೆಲ್, ದೀಪಕ್ ಹೂಡಾ, ಕ್ರಿಸ್ ಜೋರ್ಡಾನ್, ಮುರುಗನ್ ಅಶ್ವಿನ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಅರ್ಷ್‌ದೀಪ್ ಸಿಂಗ್

ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಪ್ಲೇಯಿಂಗ್ 11 ತಂಡ

ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಪ್ಲೇಯಿಂಗ್ 11 ತಂಡ

ಪೃಥ್ವಿ ಶಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ಮಾರ್ಕಸ್ ಸ್ಟೋಯ್ನಿಸ್, ಅಲೆಕ್ಸ್ ಕ್ಯಾರಿ (ವಾರ), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ತುಷಾರ್ ದೇಶಪಾಂಡೆ, ಕಗಿಸೊ ರಬಾಡಾ, ಅನ್ರಿಕ್ ನೊರ್ಕಿಯಾ

Story first published: Tuesday, October 20, 2020, 13:54 [IST]
Other articles published on Oct 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X