ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂದು ಆರ್‌ಸಿಬಿ vs ಕೆಕೆಆರ್ ಮುಖಾಮುಖಿ: ಪಿಚ್ ರಿಪೋರ್ಟ್, ಸಂಭಾವ್ಯ ತಂಡ ತಿಳಿದುಕೊಳ್ಳಿ

IPL 2020, Match 39, KKR vs RCB In Abu Dhabi; Predicted Playing 11, Pitch Report, Toss Timing, Weather Forecast

ಅಬುಧಾಬಿಯಲ್ಲಿ ಇಂದು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಐಪಿಎಲ್ 13ನೇ ಆವೃತ್ತಿಯ 39ನೇ ಪಂದ್ಯದಲ್ಲಿ ಇತ್ತಂಡಗಳು ಸಮನಾದ ಪಂದ್ಯಗಳನ್ನು ಆಡಿದ್ದು, ಕೊಹ್ಲಿ ಪಡೆ ಗೆಲುವಿನಲ್ಲಿ ಒಂದು ಹೆಜ್ಜೆ ಮುಂದಿದೆ.

ಪ್ಲೇ ಆಫ್ ಹಂತ ತಲುಪಲು ಉಭಯ ತಂಡಗಳಿಗೂ ಇಂದಿನ ಪಂದ್ಯದ ಫಲಿತಾಂಶ ತುಂಬಾನೆ ಮುಖ್ಯವಾಗಿದೆ. ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ 82ರನ್‌ಗಳ ಹೀನಾಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಕೆಕೆಆರ್ ಸಜ್ಜಾಗಿದೆ. ಕೆಕೆಆರ್‌ನ ಬೌಲರ್ ಲ್ಯುಕಿ ಫರ್ಗ್ಯುಸನ್ ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಉತ್ತಮ ಪ್ರದರ್ಶನ ತೋರಿದ ಬಳಿಕ, ಆರ್‌ಸಿಬಿ ವಿರುದ್ಧವೂ ಮಿಂಚುವ ವಿಶ್ವಾಸ ಹೊಂದಿದ್ದಾರೆ.

KKR ನಾಯಕನಾದ ಬಳಿಕ, ಮೌನ ಮುರಿದ ಇಯಾನ್ ಮಾರ್ಗನ್ ಹೇಳಿದ್ದೇನು?KKR ನಾಯಕನಾದ ಬಳಿಕ, ಮೌನ ಮುರಿದ ಇಯಾನ್ ಮಾರ್ಗನ್ ಹೇಳಿದ್ದೇನು?

ಮತ್ತೊಂದೆಡೆ, ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಪ್ಲೇಆಫ್ ಸ್ಪರ್ಧೆಯಲ್ಲಿ ಒಂದು ಹೆಜ್ಜೆ ಮುಂದೆ ಇದೆ. ಈ ಋತುವಿನಲ್ಲಿ ತಂಡ ಪ್ರಭಾವಶಾಲಿಯಾಗಿದ್ದು, ಎಬಿ ಡಿವಿಲಿಯರ್ಸ್ ಅವರು ವಿಂಟೇಜ್ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಕೆಕೆಆರ್ ಸ್ಫೋಟಕ ಆಲ್‌ರೌಂಡರ್‌ನನ್ನು ಕೈ ಬಿಡುವ ಸಾಧ್ಯತೆ

ಕೆಕೆಆರ್ ಸ್ಫೋಟಕ ಆಲ್‌ರೌಂಡರ್‌ನನ್ನು ಕೈ ಬಿಡುವ ಸಾಧ್ಯತೆ

ಕೆಕೆಆರ್ ಸ್ಫೋಟಕ ಆಲ್‌ರೌಂಡರ್ ಆಂಡ್ರೆ ರಸ್ಸೆಲ್ ಅವರನ್ನು ಬದಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಏಕೆಂದರೆ ಆತ ಸದ್ಯ ಉತ್ತಮ ಫಾರ್ಮ್‌ನಲ್ಲಿಲ್ಲ ಮತ್ತು 100 ಪ್ರತಿಶತದಷ್ಟು ಫಿಟ್ ಇದ್ದಂತೆ ಕಾಣುತ್ತಿಲ್ಲ. ಹೀಗಾಗಿ ಅವರ ಬದಲು ಮಿಸ್ಟರಿ ಸ್ಪಿನ್ನರ್ ಸುನಿಲ್ ನರೇನ್ ಅಥವಾ ಕ್ರಿಸ್‌ ಗ್ರೀನ್ ಅವರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ರಾಯಲ್ ಚಾಲೆಂಜರ್ಸ್ ಸಂಭಾವ್ಯ ಪ್ಲೇಯಿಂಗ್ 11

ರಾಯಲ್ ಚಾಲೆಂಜರ್ಸ್ ಸಂಭಾವ್ಯ ಪ್ಲೇಯಿಂಗ್ 11

ಆ್ಯರೋನ್ ಫಿಂಚ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ (C), ಎಬಿ ಡಿವಿಲಿಯರ್ಸ್ (W), ಗುರಕೀರತ್ ಸಿಂಗ್ ಮನ್, ವಾಷಿಂಗ್ಟನ್ ಸುಂದರ್, ಕ್ರಿಸ್ ಮೋರಿಸ್, ಶಹಬಾಜ್ ಅಹ್ಮದ್, ಇಸುರು ಉದಾನಾ, ನವದೀಪ್ ಸೈನಿ, ಯುಜವೇಂದ್ರ ಚಹಾಲ್

RCB ಪರ 4,000 ರನ್‌ ಗಡಿ ತಲುಪಿದ ಎಬಿ ಡಿ ವಿಲಿಯರ್ಸ್

ಕೊಲ್ಕತ್ತಾ ನೈಟ್ ರೈಡರ್ಸ್‌ ಸಂಭಾವ್ಯ ಪ್ಲೇಯಿಂಗ್ 11

ಕೊಲ್ಕತ್ತಾ ನೈಟ್ ರೈಡರ್ಸ್‌ ಸಂಭಾವ್ಯ ಪ್ಲೇಯಿಂಗ್ 11

ರಾಹುಲ್ ತ್ರಿಪಾಠಿ, ಶುಭ್ಮನ್ ಗಿಲ್, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ಪ), ಇಯಾನ್ ಮಾರ್ಗನ್ (ಸಿ), ಆ್ಯಂಡ್ರೆ ರಸ್ಸೆಲ್/ಸುನಿಲ್ ನರೇನ್, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ, ಕುಲ್‌ದೀಪ್ ಯಾದವ್, ಲ್ಯುಕಿ ಫರ್ಗ್ಯುಸನ್, ವರುಣ್ ಚಕ್ರವರ್ತಿ

ಹೆಡ್‌ ಟು ಹೆಡ್ ಮುಖಾಮುಖಿ

ಹೆಡ್‌ ಟು ಹೆಡ್ ಮುಖಾಮುಖಿ

ಕೆಕೆಆರ್ ಮತ್ತು ಆರ್‌ಸಿಬಿ ತಂಡಗಳು ಐಪಿಎಲ್‌ನಲ್ಲಿ ಇದುವರೆಗೂ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ 15 ಪಂದ್ಯಗಳನ್ನು ಕೆಕೆಆರ್ ಗೆದ್ದುಕೊಂಡಿದೆ. ಇನ್ನು ಆರ್‌ಸಿಬಿ 11 ಪಂದ್ಯಗಳಲ್ಲಿ ಜಯಗಳಿಸಿದೆ.

ಕೆಕೆಆರ್ ವರ್ಸಸ್ ಆರ್‌ಸಿಬಿ ಪಿಚ್ ವರದಿ ಮತ್ತು ಟಾಸ್

ಕೆಕೆಆರ್ ವರ್ಸಸ್ ಆರ್‌ಸಿಬಿ ಪಿಚ್ ವರದಿ ಮತ್ತು ಟಾಸ್

ಅಬುಧಾಬಿಯಲ್ಲಿನ ಪಿಚ್ ನಿಧಾನಗತಿಯಲ್ಲಿರುತ್ತದೆ ಮತ್ತು ಮೊದಲು ಬ್ಯಾಟಿಂಗ್ ಮಾಡುವ ತಂಡವು ಪ್ರಯೋಜನವನ್ನು ಪಡೆಬಹುದು. ಏಕೆಂದರೆ ಆಟ ಮುಂದುವರೆದಂತೆ ಪಿಚ್ ಗಣನೀಯವಾಗಿ ನಿಧಾನವಾಗುವುದು ಮತ್ತು ಎರಡನೆ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುವವರಿಗೆ ಕಷ್ಟಪಡಬಹುದು. ಟಾಸ್ ಗೆದ್ದ ನಾಯಕ ಬಹುತೇಕ ಬ್ಯಾಟಿಂಗ್ ಆಯ್ಕೆ ಮಾಡುತ್ತಾನೆ.

 ಹವಾಮಾನ ಮುನ್ಸೂಚನೆ

ಹವಾಮಾನ ಮುನ್ಸೂಚನೆ

ಇದು ಬಿಸಿ ಮತ್ತು ಒಣಗಿನ ವಾತಾವರಣವಿರುತ್ತದೆ. ತಾಪಮಾನವು ಸುಮಾರು 30-35 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ ಮತ್ತು ಇದು ಮೈದಾನದಲ್ಲಿರುವ ಆಟಗಾರರಿಗೆ ಅನಾನುಕೂಲವನ್ನುಂಟು ಮಾಡುತ್ತದೆ.

Story first published: Wednesday, October 21, 2020, 13:24 [IST]
Other articles published on Oct 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X