ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಚೆನ್ನೈ vs ಬೆಂಗಳೂರು, ಸಂಭಾವ್ಯ ತಂಡಗಳು, ಪಿಚ್ ರಿಪೋರ್ಟ್

IPL 2020, Match 44, RCB vs CSK Preview, Predicted Playing 11, Pitch Report, Toss Timing, Weather Forecast

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 44ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಡಲಿವೆ. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಚೆನ್ನೈ ಪಾಲಿಗೆ ಇದು ಪ್ಲೇ ಆಫ್‌ಗೆ ಪ್ರವೇಶಿಸಲು ಇರುವ ಕೊನೇ ಆಶಾಭಾವನೆ. ಈ ಪಂದ್ಯದಲ್ಲಿ ದೊಡ್ಡ ಅಂತರದಿಂದ ಗೆದ್ದರಷ್ಟೇ ಸಿಎಸ್‌ಕೆಯ ಪ್ಲೇ ಆಫ್ ಕನಸು ಜೀವಂತವಾಗಿರಲಿದೆ.

ಕಡಿಮೆ ರನ್‌ ಗಳಿಸಿಯೂ ಪಂಜಾಬ್ ಪಂದ್ಯ ಗೆದ್ದಿದ್ದು ಇದೇ ಮೊದಲಲ್ಲಕಡಿಮೆ ರನ್‌ ಗಳಿಸಿಯೂ ಪಂಜಾಬ್ ಪಂದ್ಯ ಗೆದ್ದಿದ್ದು ಇದೇ ಮೊದಲಲ್ಲ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿರುವ 10ರಲ್ಲಿ 7 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. 11ರಲ್ಲಿ 3 ಪಂದ್ಯ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಕೊನೇ ಸ್ಥಾನದಲ್ಲಿದೆ. ಇಂದಿನ ಪಂದ್ಯ 3.30 pmಗೆ ಆರಂಭವಾಗಲಿದ್ದು, 3 pmಗೆ ಟಾಸ್ ನಡೆಯಲಿದೆ.

ಪಂದ್ಯ ನಡೆಯುವ ಭಾನುವಾರದಂದು ದುಬೈನಲ್ಲಿ 30-40 ಡಿಗ್ರೀ ಸೆಲ್ಶಿಯಸ್‌ನಷ್ಟು ತಾಪಮಾನ ಇರಲಿದೆ. ಸಿಎಸ್‌ಕೆ ಟಾಸ್ ಗೆದ್ದರೆ ಫೀಲ್ಡಿಂಗ್ ಆರಿಸುವ ಸಾಧ್ಯತೆಯಿದೆ. ದುಬೈ ಕೊಂಚ ಬ್ಯಾಲನ್ಸ್ಡ್ ಪಿಚ್. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ನೆರವಾಗಬಲ್ಲದು. ಈ ಮೈದಾನದಲ್ಲಿ 160 ರನ್ ಉತ್ತಮ ಮೊತ್ತವಾಗಬಲ್ಲದು.

ಎಂಎಸ್ ಧೋನಿಯ ಸಿಎಸ್‌ಕೆ ಈಗಲೂ ಪ್ಲೇ ಆಫ್‌ಗೆ ಪ್ರವೇಶಿಸಬಲ್ಲದು!ಎಂಎಸ್ ಧೋನಿಯ ಸಿಎಸ್‌ಕೆ ಈಗಲೂ ಪ್ಲೇ ಆಫ್‌ಗೆ ಪ್ರವೇಶಿಸಬಲ್ಲದು!

ಚೆನ್ನೈ ಸಂಭಾವ್ಯ ತಂಡ: ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಅಂಬಾಟಿ ರಾಯುಡು, ಎನ್.ಜಗದೀಸನ್, ಎಂ.ಎಸ್.ಧೋನಿ (ಸಿ & ಡಬ್ಲ್ಯೂಕೆ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್ / ಕೆಎಂ ಆಸಿಫ್, ಇಮ್ರಾನ್ ತಾಹಿರ್, ಜೋಶ್ ಹ್ಯಾಝಲ್ವುಡ್ / ಲುಂಗಿ ಎನ್‌ಗಿಡಿ / ಮಿಚೆಲ್ ಸ್ಯಾಂಟ್ನರ್

ಬೆಂಗಳೂರು ಸಂಭಾವ್ಯ ತಂಡ: ಆ್ಯರನ್ ಫಿಂಚ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ (ಸಿ), ಎಬಿ ಡಿವಿಲಿಯರ್ಸ್ (ವಿಕೆ), ಗುರ್ಕೀರತ್ ಸಿಂಗ್ ಮಾನ್, ಕ್ರಿಸ್ ಮೋರಿಸ್, ವಾಷಿಂಗ್ಟನ್ ಸುಂದರ್, ಇಸುರು ಉದಾನ, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್.

Story first published: Sunday, October 25, 2020, 11:03 [IST]
Other articles published on Oct 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X