ಐಪಿಎಲ್ 2020: ಚೆನ್ನೈ vs ಕೊಲ್ಕತಾ, ಹೆಡ್ ಟು ಹೆಡ್ ಅಂಕಿಅಂಶಗಳು

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತಾ ನೈಟ್ ರೈಡರ್ಸ್ ತಂಡಗಳು ಈ ಬಾರಿಯ ಐಪಿಎಲ್‌ನಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿದೆ. ಈ ಪಂದ್ಯ ಚೆನ್ನೈ ತಂಡಕ್ಕೆ ಯಾವುದೇ ರೀತಿಯಲ್ಲೂ ಪರಿಣಾಮ ಬೀರದಿದ್ದರೂ ಕೆಕೆಆರ್ ಪಾಲಿಗೆ ತುಂಬಾ ಮಹತ್ವದ್ದಾಗಿದೆ. ಹೀಗಾಗಿ ಇಂದಿನ ಪಂದ್ಯವೂ ಕುತೂಹಲವನ್ನು ಉಳಿಸಿಕೊಂಡಿದೆ.

ಈ ಎರಡು ತಂಡಗಳು ಈವರೆಗೆ 21 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ 13 ಪಂದ್ಯಗಳನ್ನು ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಮುನ್ನಡೆಯನ್ನು ಪಡೆದುಕೊಂಡಿದ್ದರೆ ಕೊಲ್ಕತಾ ತಂಡ 8 ಪಂದ್ಯಗಳನ್ನು ಗೆಲುವನ್ನು ತನ್ನದಾಗಿಸಿಕೊಂಡು ಹಿನ್ನೆಡೆಯಲ್ಲಿದೆ.

ಬ್ಯಾಟಿಂಗ್‌ನಲ್ಲಿ ಹೆಚ್ಚಿನ ಜವಾಬ್ಧಾರಿಗೆ ರೋಹಿತ್ ಸೂಚಿಸಿದ್ದರು: ಸೂರ್ಯಕುಮಾರ್ ಯಾದವ್

ಇದು ಇದೇ ಆವತ್ತಿಯಲ್ಲಿ ಮೊದಲ ಹಂತದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದಾಗ ಕೊಲ್ಕತಾ ತಂಡ ಚೆನ್ನೈಯನ್ನು 10 ರನ್‌ಗಳಿಂದ ಮಣಿಸಿತ್ತು. ಶೇಕ್ ಝಾಯೇದ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆದಿದ್ದ ಅಂದಿನ ಪಮದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ಕೆಕೆಆರ್ ರಾಹುಲ್ ತ್ರಿಪಾಠಿ ಭರ್ಜರಿ 81 ರನ್‌ಗಳ ನೆರವಿನಿಂದ 167 ರನ್‌ಗಳಿಸಿತ್ತು. ಇದನ್ನು ಬೆನ್ನಟ್ಟಿದ್ದ ಸಿಎಸ್‌ಕೆ ತಂಡ ಗಳಿಸಿದ್ದು 157 ರನ್‌ಗಳಿಸಿ ಶರಣಾಯಿತು.

ಇನ್ನು ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೊನೆಯ ಸ್ಥಾನವನ್ನು ಹೊಂದಿದೆ. 12 ಪಂದ್ಯಗಳನ್ನು ಆಡಿರುವ ಸಿಎಸ್‌ಕೆ 8 ಸೋಲು ಕಂಡಿದ್ದರೆ 4 ಗೆಲುವು ಮಾತ್ರ ತನ್ನದಾಗಿಸಿಕೊಂಡಿದೆ. ಇನ್ನು ಕೆಕೆಆರ್ ಅಂಕಪಟ್ಟಿಯಲ್ಲಿ 5ನೇ ಸ್ಥಾನವನ್ನು ಹೊಂದಿದ್ದು ಆರು ಗೆಲುವು ಹಾಗೂ ಆರು ಸೋಲು ಕಂಡಿದೆ.

ವಿಶಿಷ್ಟ ದಾಖಲೆ: ಬೂಮ್ರಾಗೆ ಮೊದಲ ಹಾಗೂ 100ನೇ ಬಲಿಯಾದ ಕೊಹ್ಲಿ

ಇನ್ನು ಈ ಎರಡು ತಂಡಗಳ ಪೈಕಿ ಫಾಪ್ ಡು ಪ್ಲೆಸಿಸ್ 401 ರನ್ ಗಳಿಸಿ ಹೆಚ್ಚಿನ ರನ್‌ಗಳಿಸಿದ ಆಟಗಾರ ಎನಿಸಿದರೆ ಶುಬ್ಮನ್ ಗಿಲ್ 378 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಸ್ಯಾಮ್ ಕರ್ರನ್ ಹಾಗೂ ವರುಣ್ ಚಕ್ರವರ್ತಿ ತಲಾ 13 ವಿಕೆಟ್ ಪಡೆದು ಮಿಂಚಿದ್ದಾರೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, October 29, 2020, 16:08 [IST]
Other articles published on Oct 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X