ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಹೈದರಾಬಾದ್ vs ಬೆಂಗಳೂರು, ಹೆಡ್ ಟು ಹೆಡ್ ಅಂಕಿಅಂಶಗಳು

IPL 2020, Match 52, SRH vs RCB: Head-to-head records and Players to watch out for

ಐಪಿಎಲ್ ಅತ್ಯಂತ ಕುತೂಹಲ ಘಟ್ಟಕ್ಕೆ ತಲುಪಿದೆ. ಪ್ಲೇಆಫ್ ಹಂತಕ್ಕೆ ಸಾಕಷ್ಟು ಪೈಪೋಟಿ ನಡೆಯುತ್ತಿದ್ದು ಮೂರು ಸ್ಥಾನಕ್ಕೆ ಆರು ತಂಡಗಳು ತೀವ್ರ ಪೈಪೋಟಿಯನ್ನು ನಡೆಸುತ್ತಿದೆ. ಇಂದು ಹೈದರಾಬಾದ್ ಹಾಗೂ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದು ತೀವ್ರ ಕುತೂಹಲವನ್ನು ಮೂಡಿಸಿದೆ.

ಐಪಿಎಲ್‌ನಲ್ಲಿ ಈ ಎರಡು ತಂಡಗಳು ಈವರೆಗೆ ಒಟ್ಟಾರೆಯಾಗಿ 15 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ 8 ಗೆಲುವುಗಳನ್ನು ದಾಖಲಿಸಿದ್ದರೆ ಆರ್‌ಸಿಬಿ 7 ಗೆಲುವು ಸಾಧಿಸಿ ಅಲ್ಪ ಹಿನ್ನೆಡೆಯಲ್ಲಿದೆ. ಇಂದಿನ ಪಂದ್ಯದಲ್ಲಿ ಈ ಲೆಕ್ಕಾಚಾರವನ್ನು ಸಮಬಲಗೊಳಿಸುವ ಅವಕಾಶ ಆರ್‌ಸಿಬಿಗೆ ಇದೆ.

ಮೂರು ಸೋಲುಗಳಿಂದ ನಮ್ಮದು ಕೆಟ್ಟ ತಂಡ ಅನ್ನಿಸಲಾರದು: ರಹಾನೆಮೂರು ಸೋಲುಗಳಿಂದ ನಮ್ಮದು ಕೆಟ್ಟ ತಂಡ ಅನ್ನಿಸಲಾರದು: ರಹಾನೆ

ಈ ಟೂರ್ನಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದ ಸಂದರ್ಭದಲ್ಲಿ ಆರ್‌ಸಿಬಿ ಹೈದರಾಬಾದ್ ತಂಡವನ್ನು ಹತ್ತು ರನ್‌ಗಳ ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾಗಿತ್ತು. ಆರ್‌ಸಿಬಿ ನೀಡಿದ್ದ 164 ರನ್‌ಗಳ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಗದೆ ಹೈದರಾಬಾದ್ 153 ರನ್‌ಗಳಿಗೆ ಆಲೌಟ್ ಆಗಿತ್ತು.

ಅಂಕಪಟ್ಟಿಯಲ್ಲಿ ಆರ್‌ಸಿಬಿ ಎರಡನೇ ಸ್ಥಾನದಲ್ಲಿದ್ದು ಪ್ಲೇ ಆಫ್‌ಗೆ ಒಂದು ಗೆಲುವಿನಷ್ಟು ಮಾತ್ರ ಹಿಂದಿದೆ. 12 ಪಂದ್ಯಗಳನ್ನಾಡಿರುವ ಆರ್‌ಸಿಬಿ 7 ಗೆಲುವು ಸಾಧಿಸಿದ್ದು 5 ಸೋಲು ಕಂಡಿದೆ. ಈ ಮೂಲಕ 14 ಅಂಕಗಳನ್ನು ಖಾತೆಯಲ್ಲಿ ಹೊಂದಿದೆ. ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. 12 ಪಂದ್ಯಗಳನ್ನಾಡಿರುವ ಹೈದರಾಬಾದ್ 5 ಗೆಲುವು 7 ಸೋಲು ಕಂಡಿದೆ. ಈ ಮೂಲಕ 10 ಅಂಕಗಳನ್ನು ಖಾತೆಯಲ್ಲಿ ಹೊಂದಿದೆ.

ಜೋಫ್ರಾ ಹೇಳಿದಂತೆಯೇ ನಡೆಯುತ್ತಾ?: ಆರ್ಚರ್ ಹಳೆ ಟ್ವೀಟೊಂದು ವೈರಲ್!ಜೋಫ್ರಾ ಹೇಳಿದಂತೆಯೇ ನಡೆಯುತ್ತಾ?: ಆರ್ಚರ್ ಹಳೆ ಟ್ವೀಟೊಂದು ವೈರಲ್!

ಇನ್ನು ಆರ್‌ಸಿಬಿ ಪರವಾಗಿ ನಾಯಕ ವಿರಾಟ್ ಕೊಹ್ಲಿ(427) ಅತಿ ಹೆಚ್ಚಿನ ಸ್ಕೋರರ್ ಎನಿಸಿದ್ದಾರೆ. ದೇವದತ್ ಪಡಿಕ್ಕಲ್ (417) ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ 18 ವಿಕೆಟ್ ಕಿತ್ತಿರುವ ಚಾಹಲ್ ಯಶಸ್ವಿ ಬೌಲರ್ ಎನಿಸಿದ್ದರೆ ಕ್ರಿಸ್ ಮೋರಿಸ್ 11 ವಿಕೆಟ್ ಪಡೆದಿದ್ದಾರೆ. ಹೈದರಾಬಾದ್ ಪರವಾಗಿ ನಾಯಕ ಡೇವಿಡ್ ವಾರ್ನರ್ 370 ರನ್ ಗಳಿಸಿ ಟಾಪ್ ಸ್ಕೋರರ್ ಎನಿಸಿದ್ದರೆ, ಮನೀಶ್ ಪಾಂಡೆ 354 ರನ್ ಗಳಿಸಿದ್ದಾರೆ. ಬೌಲರ್‌ಗಳ ಪೈಕಿ ರಶೀದ್ ಖಾನ್ (17) ಟಿ.ನಟರಾಜನ್ (13) ಯಶಸ್ವಿಯಾಗಿದ್ದಾರೆ.

Story first published: Saturday, October 31, 2020, 17:23 [IST]
Other articles published on Oct 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X