ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯರ ಪರ ಕನ್ನಡಿಗ ಮಯಾಂಕ್ ಅಗರ್ವಾಲ್ ವಿಶೇಷ ದಾಖಲೆ

IPL 2020: Mayank Agarwal slams 2nd fastest century by an Indian in IPL history

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್‌ ಇತಿಹಾಸದಲ್ಲಿ ಅಪರೂಪದ ದಾಖಲೆಗೆ ಕನ್ನಡಿಗ ಮಯಾಂಕ್ ಅಗರ್ವಾಲ್ ಕಾರಣರಾಗಿದ್ದಾರೆ. ಐಪಿಎಲ್‌ನಲ್ಲಿ ಅತೀ ವೇಗದ ಶತಕ ಬಾರಿಸಿದ ಭಾರತದ ಎರಡನೇ ಆಟಗಾರನಾಗಿ ಮಯಾಂಕ್ ಗುರುತಿಸಿಕೊಂಡಿದ್ದಾರೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 9ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದ ಮಯಾಂಕ್, ರಾಜಸ್ಥಾನ್ ರಾಯಲ್ಸ್ ವಿರುದ್ಧ 50 ಎಸೆತಗಳಿಗೆ 106 ರನ್ ಬಾರಿಸಿದ್ದರು.

ಸುಲಭವಾಗಿ ಸಿಕ್ಸರ್ ಸಿಡಿಸುವ ಸಂಜು ಸ್ಯಾಮ್ಸನ್ ತಾಕತ್ತಿನ ಗುಟ್ಟು..!ಸುಲಭವಾಗಿ ಸಿಕ್ಸರ್ ಸಿಡಿಸುವ ಸಂಜು ಸ್ಯಾಮ್ಸನ್ ತಾಕತ್ತಿನ ಗುಟ್ಟು..!

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಕೆXIಪಿ ಪರ 10 ಫೋರ್ಸ್, 7 ಸಿಕ್ಸರ್ ಚಚ್ಚಿದ್ದ ಮಯಾಂಕ್ ಅರ್ಗವಾಲ್ ಶತಕ ಪೂರೈಸಿಕೊಂಡಿದ್ದರು. ಈ ವೇಳೆ ಅಗರ್ವಾಲ್ ಅವರಿಂದ ವೇಗದ ಶತಕ ದಾಖಲಾಗಿತ್ತು.

ಐಪಿಎಲ್ 2020: ನಿಕೋಲಸ್ ಪೂರನ್ ಸೂಪರ್‌ಮ್ಯಾನ್ ಫೀಲ್ಡಿಂಗ್‌ಗೆ ಕ್ರಿಕೆಟ್ ಜಗತ್ತು ಬೆರಗುಐಪಿಎಲ್ 2020: ನಿಕೋಲಸ್ ಪೂರನ್ ಸೂಪರ್‌ಮ್ಯಾನ್ ಫೀಲ್ಡಿಂಗ್‌ಗೆ ಕ್ರಿಕೆಟ್ ಜಗತ್ತು ಬೆರಗು

ಐಪಿಎಲ್‌ನಲ್ಲಿ ವೇಗದ ಶತಕದ ದಾಖಲೆಗೆ ಸಂಬಂಧಿಸಿ ಕೆಳಗೊಂದಿಷ್ಟು ಮಾಹಿತಿಯಿದೆ.

ಮಯಾಂಕ್-ರಾಹುಲ್ ಜೊತೆಯಾಟ

ಮಯಾಂಕ್-ರಾಹುಲ್ ಜೊತೆಯಾಟ

ಮೊದಲು ಇನ್ನಿಂಗ್ಸ್‌ ಆಡಿದ್ದ ಪಂಜಾಬ್‌ ಪರ ಆರಂಭಿಕರಾಗಿ ಬ್ಯಾಟಿಂಗ್‌ಗೆ ಇಳಿಸಿದ್ದ ಮಯಾಂಕ್ ಮತ್ತು ನಾಯಕ ಕೆಎಲ್ ರಾಹುಲ್ ಉತ್ತಮ ಜೊತೆಯಾಟ ನೀಡಿದ್ದರು. ಪಂಜಾಬ್‌ನ ಮೊದಲ ವಿಕೆಟ್ ಪತನವಾಗುವಾಗ ತಂಡದ ಖಾತೆಯಲ್ಲಿ 183 ರನ್ ಇತ್ತು. ಮಯಾಂಕ್ 106, ರಾಹುಲ್ 69 ರನ್ ಸೇರ್ಪಡೆಯೊಂದಿಗೆ ಕೆXIಪಿ 2 ವಿಕೆಟ್ ನಷ್ಟಕ್ಕೆ 223 ರನ್ ಮಾಡಿತು.

ಕ್ರಿಸ್ ಗೇಲ್ ಮೊದಲಿಗ

ಕ್ರಿಸ್ ಗೇಲ್ ಮೊದಲಿಗ

ಭಾನುವಾರದ ಪಂದ್ಯದಲ್ಲಿ 45 ಎಸೆತಗಳಲ್ಲಿ 100 ರನ್ ಬಾರಿಸುವ ಮೂಲಕ ಅಗರ್ವಾಲ್ ವಿಶಿಷ್ಠ ದಾಖಲೆಗೆ ಕಾರಣರಾಗಿದ್ದಾರೆ. ಐಪಿಎಲ್‌ನಲ್ಲಿ ಅತೀ ವೇಗದ ಶತಕ ದಾಖಲೆ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಹೆಸರಿನಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವಾಗ ಗೇಲ್ 30 ಎಸೆತಗಳಲ್ಲಿ 100 ರನ್ ಬಾರಿಸಿದ್ದರು.

ಎರಡನೇ ಭಾರತೀಯ

ಎರಡನೇ ಭಾರತೀಯ

ಐಪಿಎಲ್‌ನಲ್ಲಿ ಭಾರತೀಯರ ಪರ ವೇಗದ ಶತಕ ದಾಖಲೆ ಯೂಸೂಫ್ ಪಠಾಣ್ ಹೆಸರಿನಲ್ಲಿದೆ. 2010ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಯೂಸೂಫ್ ಮುಂಬೈ ಇಂಡಿಯನ್ಸ್ ವಿರುದ್ಧ 37 ಎಸೆತಗಳಲ್ಲಿ 100 ರನ್ ಬಾರಿಸಿದ್ದರು. ಹೀಗಾಗಿ ಮಯಾಂಕ್ ಈ ದಾಖಲೆ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಮಯಾಂಕ್ ಸ್ಫೋಟಕ ಶತಕ ವ್ಯರ್ಥ

ಮಯಾಂಕ್ ಸ್ಫೋಟಕ ಶತಕ ವ್ಯರ್ಥ

ಪಂಜಾಬ್‌ ನೀಡಿದ್ದ 224 ರನ್ ಗುರಿ ಬೆನ್ನಟ್ಟಿದ ರಾಜಸ್ಥಾನ್‌ಗೆ ನಾಯಕ ಸ್ಟೀವ್ ಸ್ಮಿತ್ ಮತ್ತು ಸಂಜು ಸ್ಯಾಮ್ಸನ್ ಅವರ ಅದ್ಭುತ ಜೊತೆಯಾಟ ಲಭಿಸಿತು. ಸ್ಮಿತ್ 50 (27 ಎಸೆತ), ಸ್ಯಾಮ್ಸನ್ 85 (42 ಎಸೆತ), ರಾಹುಲ್ ತೆವಾಟಿಯಾ 53 (31 ಎಸೆತ) ರನ್ ಸೇರ್ಪಡೆಯೊಂದಿಗೆ 19.3 ಓವರ್‌ಗೆ 6 ವಿಕೆಟ್ ಕಳೆದು 226 ರನ್ ಗಳಿಸುವುದರೊಂದಿಗೆ ಆರ್‌ಆರ್‌ ಗೆಲುವನ್ನು ಸಂಭ್ರಮಿಸಿತು.

Story first published: Monday, September 28, 2020, 15:44 [IST]
Other articles published on Sep 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X