'ಬ್ಲ್ಯಾಕ್ ಲೈವ್ಸ್ ಮ್ಯಾಟರ್‌'ಗಾಗಿ ಮೊಣಕಾಲೂರಿದ ಹಾರ್ದಿಕ್ ಪಾಂಡ್ಯ

ಅಬುಧಾಬಿ: ಕರಿಯರ ಮೇಲಿನ ದೌರ್ಜನ್ಯ, ಜನಾಂಗೀಯ ಬೇಧ, ವರ್ಣಭೇದ ನೀತಿಯ ವಿರುದ್ಧ ವಿಶ್ವದಾದ್ಯಂತ ವಿರೋಧ ವ್ಯಕ್ತವಾಗಿತ್ತು. ಇದರ ಪರಿಣಾಮವೇ 'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಚಳುವಳಿ ಹುಟ್ಟಿಕೊಂಡಿತ್ತು. ಜಾರ್ಜ್ ಫ್ಲಾಯ್ಡ್ ಎನ್ನುವ ಆಫ್ರಿಕನ್-ಅಮೆರಿಕನ್ ವ್ಯಕ್ತಿ ಅಸುನೀಗಿದ ಬೆನ್ನಲ್ಲೇ ಈ ಚಳುವಳಿಗೆ ಕಿಡಿ ಹತ್ತಿಕೊಂಡಿತ್ತು.

ಭಾರತ vs ಆಸ್ಟ್ರೇಲಿಯಾ: ವಿಚಿತ್ರ ಕಾರಣ, ಪಂತ್ ಆಯ್ಕೆ ಅನುಮಾನ!

ವಿಶ್ವದಾದ್ಯಂತ ಎಲ್ಲಾ ಪ್ರಮುಖ ಕ್ರೀಡಾಕೂಟಗಳ ವೇಳೆಯೂ ವರ್ಣಬೇಧ, ಜನಾಂಗೀಯ ಬೇಧದ ಅಮಾನವೀಯ ನೀತಿಯ ವಿರುದ್ಧ ಕ್ರೀಡಾಪಟುಗಳು ಧ್ವನಿಯೆತ್ತಿದ್ದರು. ಭಾರತದಲ್ಲೂ ಕಪ್ಪು ವರ್ಣದವರು ಹೆಚ್ಚು. ಜಾತಿ-ಧರ್ಮಗಳಿಗೆ ಸಂಬಂಧಿಸಿ ದೌರ್ಜನ್ಯಗಳೂ ಇಲ್ಲಿ ಸಾಕಷ್ಟು ಸಾರಿ ಸುದ್ದಿಯಾಗಿದ್ದಿದೆ. ಆದರೆ ಭಾರತದಲ್ಲಿ ಪ್ರಮುಖ ಕ್ರೀಡಾಕೂಟಗಳ ವೇಳೆ 'ಬ್ಲ್ಯಾಕ್‌ ಲೈವ್ಸ್ ಮ್ಯಾಟರ್‌' ಗಮನ ಸೆಳೆದಿರಲೇ ಇಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಐಪಿಎಲ್‌ನಲ್ಲಿ ಈ ಚಳುವಳಿ ಸಂಪೂರ್ಣ ಮೂಲೆಗುಂಪಾಗಿತ್ತು. ಈ ಬಗ್ಗೆ ವೆಸ್ಟ್ ಇಂಡೀಸ್ ಆಲ್ ರೌಂಡರ್, ನಾಯಕ ಜೇಸನ್ ಹೋಲ್ಡರ್ ಕೂಡ ಬೇಸರ ವ್ಯಕ್ತಪಡಿಸಿದ್ದರು.

ಆದರೆ ಮುಂಬೈ ಇಂಡಿಯನ್ಸ್ ಆಲ್ ರೌಂಡರ್ 'ಬ್ಲ್ಯಾಕ್ ಲೈವ್ಸ್ ಮ್ಯಾಟರ್‌'ಗೆ ಬೆಂಬಲಿಸಿ ಗಮನ ಸೆಳೆದಿದ್ದಾರೆ. ಭಾನುವಾರ ನಡೆದ ಮುಂಬೈ vs ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ ಪಂದ್ಯದ ವೇಳೆ ಸ್ಫೋಟಕ ಬ್ಯಾಟಿಂಗ್ (21 ಎಸೆತಗಳಿಗೆ 60 ರನ್) ನಡೆಸಿದ್ದ ಪಾಂಡ್ಯ ಮೊಣಕಾಲೂರಿ ಬಿಎಲ್‌ಎಂಗೆ ಬೆಂಬಲಿಸಿ ಮನ ಗೆದ್ದಿದ್ದಾರೆ.

ಬೆನ್ ಸ್ಟೋಕ್ಸ್ ಕೈ ಬೆರಳು ಮಡಚಿದ್ದರ ಹಿಂದಿದೆ ಕುತೂಹಲಕಾರಿ ಕಾರಣ!

ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಪಾಂಡ್ಯ ಉತ್ತಮ ಬ್ಯಾಟಿಂಗ್ ಬಳಿಕ ಬ್ಲ್ಯಾಕ್ ಲೈವ್ಸ್ ಮ್ಯಾಟರ್‌ಬೆಂಬಲಿಸಿ, ಮೊಣಕಾಲೂರಿ ತನ್ನ ಇನ್ನಿಂಗ್ಸನ್ನು ರೋಹಿತ್ ಬದಲು ಎಂಐ ನಾಯಕತ್ವದ ವಹಿಸಿದ್ದ ಕೀರನ್ ಪೊಲಾರ್ಡ್‌ಗೆ ಅರ್ಪಿಸಿದ್ದರು. ಪೊಲಾರ್ಡ್ ಕೂಡ ಇದಕ್ಕೆ ಡಕ್‌ನಲ್ಲಿ ಕೂತಲ್ಲಿಂದಲೇ ಪ್ರತಿಕ್ರಿಯಿಸಿದ್ದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, October 26, 2020, 16:09 [IST]
Other articles published on Oct 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X