ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

MI vs CSK: ವಿರಾಟ್ ಕೊಹ್ಲಿ ದಾಖಲೆ ಮುರಿಯುವತ್ತ ರೋಹಿತ್ ಶರ್ಮಾ ಚಿತ್ತ!

IPL 2020: MI vs CSK-Rohit Sharma looks to break Virat Kohli’s record against CSK

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸ ಗಮನಿಸಿದರೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಅತ್ಯಂತ ಯಶಸ್ವಿ ತಂಡವಾಗಿ ಕಾಣಿಸುತ್ತದೆ. ಯಾಕೆಂದರೆ ಐಪಿಎಲ್ ಎಲ್ಲಾ ಸೀಸನ್‌ಗಳಲ್ಲಿ ಸಿಎಸ್‌ಕೆ ಪ್ಲೇ ಆಫ್‌ಗೆ ಪ್ರವೇಶಿಸಿದೆ. ಅಷ್ಟೇ ಅಲ್ಲ, ದಾಖಲೆಯ 8 ಬಾರಿ ಫೈನಲ್‌ಗೆ ಪ್ರವೇಶಿಸಿದೆ. ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮುಂದಾಳತ್ವದ ಸಿಎಸ್‌ಕೆ ತಂಡ ಅಷ್ಟರ ಮಟ್ಟಿಗೆ ಶಕ್ತಿಶಾಲಿ.

ಕಾಮೆಂಟರಿ ಪ್ಯಾನೆಲ್‌ನಿಂದ ಹೊರದಬ್ಬಿದ್ದಕ್ಕೆ ಅಸಲಿ ಕಾರಣ ಹೇಳಿದ ಮಂಜ್ರೇಕರ್!ಕಾಮೆಂಟರಿ ಪ್ಯಾನೆಲ್‌ನಿಂದ ಹೊರದಬ್ಬಿದ್ದಕ್ಕೆ ಅಸಲಿ ಕಾರಣ ಹೇಳಿದ ಮಂಜ್ರೇಕರ್!

ಯಾವುದೇ ಬ್ಯಾಟ್ಸ್‌ಮನ್‌ಗಳ ಜೊತೆ ನೀವು ಪ್ರಶ್ನಿಸಿ ನೋಡಿ. ಹೆಚ್ಚಿನವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರನ್ ಗಳಿಸೋದು ಕಷ್ಟ ಅನ್ನುತ್ತಾರೆ. ಸಿಎಸ್‌ಕೆ ತಂಡದ ಬೌಲಿಂಗ್ ದಾಳಿ ಅಷ್ಟು ಬಲಿಷ್ಠವಾಗಿದೆ.

ಈ ಐಪಿಎಲ್‌ ಸೀಸನ್‌ನ ನಿರೂಪಕರ ಸಂಪೂರ್ಣ ಪಟ್ಟಿ, ಮಯಾಂತಿ ಇಲ್ಲ!ಈ ಐಪಿಎಲ್‌ ಸೀಸನ್‌ನ ನಿರೂಪಕರ ಸಂಪೂರ್ಣ ಪಟ್ಟಿ, ಮಯಾಂತಿ ಇಲ್ಲ!

ಹಾಗಾದರೆ ಭಾರತದ ಬಲಿಷ್ಠ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇವರಿಬ್ಬರಲ್ಲಿ ಸಿಎಸ್‌ಕೆ ವಿರುದ್ಧ ಹೆಚ್ಚು ರನ್ ಗಳಿಸಿರುವವರ್ಯಾರು?

ಮುಂಬೈ-ಚೆನ್ನೈ ಕುತೂಹಲಕಾರಿ ಕದನ

ಮುಂಬೈ-ಚೆನ್ನೈ ಕುತೂಹಲಕಾರಿ ಕದನ

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ 13ನೇ ಆವೃತ್ತಿಯ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಹಾಲಿ ರನ್ನರ್ಸ್ ಚೆನ್ನೈ ಸೂಪರ್ ಕಿಂಗ್ಸ್ ಕಾದಾಡಲಿವೆ. ಐಪಿಎಲ್ ಇತಿಹಾಸದಲ್ಲಿ ಎರಡೂ ಅತ್ಯಂತ ಬಲಿಷ್ಠ ತಂಡಗಳೆ. ಎಂಐ ಒಟ್ಟು 4 ಬಾರಿ ಐಪಿಎಲ್ ಟ್ರೋಫಿ ಗೆದ್ದಿದ್ದರೆ, ಸಿಎಸ್‌ಕೆ 3 ಬಾರಿ ಚಾಂಪಿಯನ್ಸ್ ಆಗಿ ಮಿನುಗಿದೆ.

ಸಿಎಸ್‌ಕೆಯಲ್ಲಿ ಗುಣಮಟ್ಟದ ಬೌಲರ್‌ಗಳು

ಸಿಎಸ್‌ಕೆಯಲ್ಲಿ ಗುಣಮಟ್ಟದ ಬೌಲರ್‌ಗಳು

ಬ್ಯಾಟ್ಸ್‌ಮನ್‌ಗಳಿಗೆ ಅತೀ ಸವಾಲಿನ ತಂಡವಾಗಿ ಸಿಎಸ್‌ಕೆ ಕಾಣಿಸಿಕೊಂಡಿದೆ ಏಕೆಂದರೆ ಸಿಎಸ್‌ಕೆಯಲ್ಲಿ ಗುಣಮಟ್ಟದ ಬೌಲರ್‌ಗಳಿದ್ದಾರೆ. ಈಗಿನ ತಂಡದ ಬಗ್ಗೆ ಹೇಳೋದಾದ್ರೆ, ಲುಂಗಿ ಸಾನಿ ಎನ್‌ಗಿಡಿ, ಡ್ವೇನ್ ಬ್ರಾವೊ, ಇಮ್ರಾನ್ ತಾಹಿರ್, ರವೀಂದ್ರ ಜಡೇಜಾ, ಸ್ಯಾಮ್ ಕರನ್ ಮತ್ತು ದೀಪಕ್ ಚಹಾರ್ ಇಂಥ ಅಪಾಯಕಾರಿ ಬೌಲರ್‌ಗಳಿದ್ದಾರೆ. ಆಲ್ ರೌಂಡರ್‌ಗಳೂ ಸಿಎಸ್‌ಕೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಕೊಹ್ಲಿ ಹೆಸರಲ್ಲಿ ಹೆಚ್ಚು ರನ್ ದಾಖಲೆ

ಕೊಹ್ಲಿ ಹೆಸರಲ್ಲಿ ಹೆಚ್ಚು ರನ್ ದಾಖಲೆ

ಬೌಲಿಂಗ್‌ನಲ್ಲಿ ಬಲಿಷ್ಠವಾಗಿರುವ ಸಿಎಸ್‌ಕೆ ವಿರುದ್ಧ ಹೆಚ್ಚು ರನ್ ಗಳಿಸಿದವರಲ್ಲಿ ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ ಸಿಎಸ್‌ಕೆ ವಿರುದ್ಧ 747 ರನ್ ಗಳಿಸಿದ್ದಾರೆ. ಆದರೆ ಐಪಿಎಲ್ ಮೊದಲ ಪಂದ್ಯದಲ್ಲೇ ರೋಹಿತ್ ಶರ್ಮಾ ಅವರು ಕೊಹ್ಲಿ ದಾಖಲೆ ಮುರಿಯುವ ಸಾಧ್ಯತೆಯಿದೆ.

ವಿರಾಟ್ ದಾಖಲೆ ಮುರಿಯುತ್ತ ಶರ್ಮಾ ಚಿತ್ತ

ವಿರಾಟ್ ದಾಖಲೆ ಮುರಿಯುತ್ತ ಶರ್ಮಾ ಚಿತ್ತ

ಎಂಐ ನಾಯಕ ರೋಹಿತ್ ಶರ್ಮಾ ಸಿಎಸ್‌ಕೆ ವಿರುದ್ಧ 27 ಪಂದ್ಯಗಳಲ್ಲಿ 705 ರನ್ ಗಳಿಸಿದ್ದಾರೆ. ಮೊದಲ ಪಂದ್ಯದಲ್ಲಿ ಹಿಟ್‌ಮ್ಯಾನ್ ರೋಹಿತ್ 43 ರನ್ ಬಾರಿಸಿದರೂ ಕೊಹ್ಲಿ ದಾಖಲೆ ಬದಿಗೆ ಸರಿಯಲಿದೆ. ಬಲಿಷ್ಠ ಸಿಎಸ್‌ಕೆ ವಿರುದ್ಧ ಅತೀ ಹೆಚ್ಚು ರನ್ ಬಾರಿಸಿದವರಲ್ಲಿ ಮೊದಲ ಸ್ಥಾನ ಶರ್ಮಾಗೆ ಲಭಿಸಲಿದೆ. ಸೆಪ್ಟೆಂಬರ್ 19ರಂದು ಎಂಐ ಪರ ಆರಂಭಿಕರಾಗಿ ರೋಹಿತ್ ಮತ್ತು ಕ್ವಿಂಟನ್ ಡಿ ಕಾಕ್ ಇಳಿಯುತ್ತಿರುವುದರಿಂದ ಇದೇ ಪಂದ್ಯದಲ್ಲಿ ವಿರಾಟ್ ದಾಖಲೆ ಬದಿಗೆ ಸರಿಯುವ ನಿರೀಕ್ಷೆ ಹೆಚ್ಚಿದೆ.

Story first published: Saturday, September 19, 2020, 11:08 [IST]
Other articles published on Sep 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X