ಐಪಿಎಲ್2020: ಕೊಲ್ಕತ್ತಾ ವಿರುದ್ಧ ಭರ್ಜರಿಯಾಗಿ ಗೆದ್ದ ಮುಂಬೈ ಇಂಡಿಯನ್ಸ್

ಐಪಿಎಲ್‌ನ ಐದನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕಾದಾಟವನ್ನು ನಡೆಸಿದ್ದು ಈ ಪಂದ್ಯವನ್ನು ಮುಂಬೈ 49 ರನ್‌ಗಳ ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. ಮುಂಬೈ ಇಂಡಿಯನ್ಸ್ 195/5 ಗಳಿಸಿದರೆ ಇದನ್ನು ಬೆನ್ನತ್ತಿದ ಕೆಕೆಆರ್ 146/9 ವಿಕೆಟ್ ಕಳೆದುಕೊಂಡು ಶರಣಾಯಿತು. ಈ ಮೂಲಕ ಮುಂಬೈ ಇಂಡಿಯನ್ಸ್ ಯುಎಇ ಅಂಗಳದಲ್ಲಿ ತನ್ನ ಮೊತ್ತಮೊದಲ ಗೆಲುವನ್ನು ದಾಖಲಿಸಿದೆ.

ಮೊದಲ ಪಂದ್ಯವನ್ನು ಸೋತು ಮುಖಭಂಗ ಅನುಭವಿಸಿದ್ದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತನ್ನ ಎರಡನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಸರ್ವಾಂಗೀಣ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಅರ್ಹ ಜಯವನ್ನು ದಾಖಲಿಸಿದೆ.

ಐಪಿಎಲ್ ಸಿಕ್ಸರ್ #200 ಮೈಲಿಗಲ್ಲು ದಾಟಿದ ರೋಹಿತ್ ಶರ್ಮ

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಮುಂಬೈ ಇಂಡಿಯನ್ಸ್ ತಂಡ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ವಿಕೆಟನ್ನು ವಿಕೆಟನ್ನು ಶೀಘ್ರವಾಗಿ ಕಳೆದುಕೊಂಡರೂ ರೋಹಿತ್ ಶರ್ಮಾ(80ರನ್ 54ಎಸೆತ) ಹಾಗೂ ಸೂರ್ಯ ಕುಮಾರ್ ಯಾದವ್(47ರನ್ 28 ಎಸೆತ) ಭರ್ಜರಿ ಪ್ರದರ್ಶನವನ್ನು ನೀಡಿದರು. ಎರಡನೇ ವಿಕೆಟ್‌ಗೆ ಈ ಇಬ್ಬರು 90 ರನ್‌ ಸೇರಿಸಿದರು. ಬಳಿಕ ಬಂದ ಸೌರಬ್ ತಿವಾರಿ(21 ರನ್ 13 ಎಸೆತ) ಹಾರ್ದಿಕ್ ಪಾಂಡ್ಯ(18 ರನ್ 13 ಎಸೆತ) ಹಾಗೂ ಪೊಲಾರ್ಡ್(13 ರನ್ 7 ಎಸೆತ) ತಂಡದ ಮೊತ್ತ ಇನ್ನೂರರ ಗಡಿ ತಲುಪಲು ಕಾರಣರಾದರು.

ಐಪಿಎಲ್ 2020: ಕೆಕೆಆರ್ ವಿರುದ್ಧ ವಾರ್ನರ್ ದಾಖಲೆ ಮುರಿದ ರೋಹಿತ್ ಶರ್ಮಾ

ಮುಂಬೈ ಇಂಡಿಯನ್ಸ್ ನೀಡಿದ ಗುರಿ ಚೇಸ್ ಮಾಡಲು ಆರಂಭಿಸಿದ ಕೆಕೆಆರ್ ತಂಡ ಯಾವ ಹಂತದಲ್ಲೂ ತಿರುಗಿ ಬೀಳುವ ಲಕ್ಷಣವನ್ನು ತೋರಲೇ ಇಲ್ಲ. ತಂಡದ ಎಲ್ಲಾ ಬ್ಯಾಟ್ಸ್‌ಮನ್‌ಗಳೂ ಒಬ್ಬರ ಹಿಂದೊಬ್ಬರಂತೆ ವಿಕೆಟ್ ಕಳೆದುಕೊಳ್ಳಲು ಆರಂಭಿಸಿದರು. ಬೌಲಿಂಗ್‌ನಲ್ಲಿ ಅತ್ಯಂತ ದುಬಾರಿ ಎನಿಸಿದ ಪ್ಯಾಟ್ ಕಮ್ಮಿನ್ಸ್ ಬ್ಯಾಟಿಂಗ್‌ನಲ್ಲಿ ಸ್ಪೋಟಕ ಪ್ರದರ್ಶನವನ್ನು ನೀಡಿ 33 ರನ್‌ಗಳಿಸಿದ್ದೇ ತಂಡದ ಗರಿಷ್ಠ ಸ್ಕೋರ್. ನಾಯಕ ದಿನೇಶ್ ಕಾರ್ತಿಕ್ 30 ರನ್, ನಿತೀಶ್ ರಾಣಾ 24 ರನ್‌ಗಳಿಸಿದರು.

ಈ ಮೂಲಕ ಮುಂಬೈ ಇಂಡಿಯನ್ಸ್ ತಮ್ಮ ಮೊದಲ ಗೆಲುವನ್ನು ದಾಖಲಿಸುವಲ್ಲಿ ಯಶಸ್ವಿಯಾದರೆ ದಿನೇಶ್ ಕಾರ್ತಿಕ್ ನಾಯಕತ್ವದ ಕೆಕೆಆರ್ ಮೊದಲ ಪಂದ್ಯವನ್ನು ಸೋಲಿನ ಮೂಲಕ ಆರಂಭಿಸಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, September 23, 2020, 23:42 [IST]
Other articles published on Sep 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X