ಐಪಿಎಲ್ 2020: ಸ್ಟೋಕ್ಸ್, ಸಂಜು ಸ್ಪೋಟಕ ಆಟಕ್ಕೆ ಶರಣಾದ ಮುಂಬೈ ಇಂಡಿಯನ್ಸ್

ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರೋಚಕ ಗೆಲುವನ್ನು ಸಾಧಿಸಿದೆ. ಮುಂಬೈ ಇಂಡಿಯನ್ಸ್ ನಿಡಿದ್ದ 196 ರನ್‌ಗಳ ಬೃಹತ್ ಟಾರ್ಗೆಟನ್ನು ರಾಜಸ್ಥಾನ್ ಇನ್ನೂ 10 ಎಸೆತಗಳು ಬಾಕಿಯಿರುವಂತೆಯೇ ಗೆದ್ದು ಬೀಗಿದೆ. ಈ ಮೂಲಕ ಟೂರ್ನಿಯಲ್ಲಿ ತನ್ನ ಅಸ್ತಿತ್ವವನ್ನು ರಾಜಸ್ಥಾನ್ ಮತ್ತೆ ತೋರಿಸಿದೆ.

ಬೆನ್ ಸ್ಟೋಕ್ಸ್ ಸ್ಪೋಟಕ ಶತಕ ಹಾಗೂ ಸಂಜು ಸ್ಯಾಮ್ಸನ್ ಭರ್ಜರಿ ಅರ್ಧ ಶತಕ ರಾಜಸ್ಥಾನ್ ರೋಚಕ ಗೆಲುವಿಗೆ ಕಾರಣವಾಯಿತು. 60 ಎಸೆತಗಳನ್ನು ಎದುರಿಸಿದ ಸ್ಟೋಕ್ಸ್ 107 ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿದರು ಸ್ಟೋಕ್ಸ್ ಇನ್ನಿಂಗ್ಸ್‌ನಲ್ಲಿ 3 ಸಿಕ್ಸರ್ ಹಾಗೂ 14 ಬೌಂಡರಿ ಒಳಗೊಂಡಿತ್ತು. ಇವರಿಗೆ ಅದ್ಭುತ ಸಾಥ್ ನೀಡಿದ ಸಂಜು 31 ಎಸೆತಗಳಲ್ಲಿ 54 ರನ್ ಬಾರಿಸಿದರು. ಈ ಜೋಡಿ ಮುರಿಯದ 3ನೇ ವಿಕೆಟ್‌ಗೆ 152 ರನ್‌ಗಳ ಜೊತೆಯಾಟವನ್ನು ನೀಡಿದರು.

ಭರ್ಜರಿ ಬ್ಯಾಟಿಂಗ್ ಮಾಡಿದ ಮುಂಬೈ

ಭರ್ಜರಿ ಬ್ಯಾಟಿಂಗ್ ಮಾಡಿದ ಮುಂಬೈ

ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಭರ್ಜರಿ 195 ರನ್‌ಗಳನ್ನು ಸೇರಿಸಿತು. ಇಶಾನ್ ಕಿಶನ್, ಸೂರ್ಯ ಕುಮಾರ್ ಹಾಗೂ ಅಂತ್ಯದಲ್ಲಿ ಹಾರ್ದಿಕ್ ಪಾಂಡ್ಯ ಸ್ಪೋಟಕ ಪ್ರದರ್ಶನ ಮುಂಬೈ ಇಂಡಿಯನ್ಸ್ ಬೃಹತ್ ಮೊತ್ತಕ್ಕೆ ಕಾರಣವಾಯಿತು.

ಉತ್ತಪ್ಪ, ಸ್ಮಿತ್ ವೈಫಲ್ಯ

ಉತ್ತಪ್ಪ, ಸ್ಮಿತ್ ವೈಫಲ್ಯ

ಮುಂಬೈ ಇಂಡಿಯನ್ಸ್ ನೀಡಿದ ಈ ಬೃಹತ್ ಟಾರ್ಗೆಟನ್ನು ಬೆನ್ನತ್ತಿದ ರಾಜಸ್ಥಾನ್ ರಾಬಿನ್ ಉತ್ತಪ್ಪ ವಿಕೆಟನ್ನು ಶೀಘ್ರವಾಗಿ ಕಳೆದುಕೊಂಡಿತು. ನಾಯಕ ಸ್ಟೀವ್ ಸ್ಮಿತ್ ಕೂಡ 11 ರನ್‌ಗಳ ಕಾಣಿಕೆಯನ್ನು ನೀಡಿ ನಿರ್ಗಮಿಸಿದರು. ಆಗ ರಾಜಸ್ಥಾನ್ 44 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು.

ಬೌಂಡರಿ ಸಿಕ್ಸರ್‌ಗಳ ಸುರಿಮಳೆ

ಬೌಂಡರಿ ಸಿಕ್ಸರ್‌ಗಳ ಸುರಿಮಳೆ

ಆಗ ಆರಂಭಿಕ ಆಟಗಾರ ಬೆನ್ ಸ್ಟೋಕ್ಸ್‌ಗೆ ಜೊತೆಯಾಗಿದ್ದು ಸಂಜು ಸ್ಯಾಮ್ಸನ್. ಎಚ್ಚರಿಕೆಯ ಆಟದೊಂದಿಗೆ ಇನ್ನಿಂಗ್ಸ್ ಕಟ್ಟಿದ ಈ ಜೋಡಿ ಬಳಿಕ ಬೌಂಡರಿ ಸಿಕ್ಸರ್‌ಗಳ ಸುರಿಮಳೆಗೈದರು. ಮುಂಬೈನ ಘಟಾನುಘಟಿ ಬೌಲಿಂಗ್ ದಾಳಿಯನ್ನು ಚೆಂಡಾಡಿದ ಈ ಜೋಡಿ ಇನ್ನೂ 10 ಎಸೆತಗಳು ಬಾಕಿಯಿರುವಂತೆಯೇ ಗೆಲುವನ್ನು ತಮ್ಮದಾಗಿಸಿಕೊಂಡರು.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, October 25, 2020, 23:15 [IST]
Other articles published on Oct 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X