ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆನ್ನೈಗೆ Mid season Transferನಲ್ಲಿ ಬೇಕಿರುವ 4 ಕ್ರಿಕೆಟರ್ಸ್

ಮೂರು ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಚಾಂಪಿಯನ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಈಗ ಮಿಡ್ ಸೀಸನ್ ವರ್ಗಾವಣೆ ಸೌಲಭ್ಯ ಬಳಸಿಕೊಳ್ಳಲು ಅರ್ಹವಾಗಿದೆ.

ಐಪಿಎಲ್ 2020ರಲ್ಲಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿರುವ ಧೋನಿ ಬಳಗ ಮತ್ತೆ ಪುಟಿದೇಳಲಿ ಎಂದು ಎಲ್ಲರೂ ಬಯಸಿದ್ದಾರೆ. 7 ಪಂದ್ಯಗಳಲ್ಲಿ 5 ಪಂದ್ಯ ಸೋತಿರುವ ಚೆನ್ನೈ ತನ್ನ ಮಧ್ಯಮ ಕ್ರಮಾಂಕ ಬ್ಯಾಟಿಂಗ್ ಬಲ ಹೆಚ್ಚಿಸಿಕೊಳ್ಳಲು ಮಿಡ್ ಸೀಸನ್ ವರ್ಗಾವಣೆ ಬಳಸುವುದು ಒಳ್ಳೆಯದು ಎಂಬ ಅಭಿಪ್ರಾಯ ಕೇಳಿ ಬಂದಿದೆ.

ಇದೇ ಚೆನ್ನೈ ತಂಡ 2010ರಲ್ಲಿ ಇಂಥದ್ದೇ ಪರಿಸ್ಥಿತಿಯಲ್ಲಿತ್ತು, 5 ಪಂದ್ಯ ಸೋತಿದ್ದರೂ ನಂತರ ಸತತ ಗೆಲುವು ಸಾಧಿಸಿ ಕಪ್ ಎತ್ತಿತ್ತು. ಆದರೆ, 2020ರ ತಂಡದ ಬಗ್ಗೆ ಈ ನಂಬಿಕೆ ಹುಟ್ಟುತ್ತಿಲ್ಲ ಎಂದು ಆಕಾಶ್ ಛೋಪ್ರಾ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಸೀಸನ್ ಮಧ್ಯದಲ್ಲಿ ಹಿರಿಯ ಆಟಗಾರರ ವರ್ಗಾವಣೆ ಸೂಕ್ತ ಎಂದು ಅನೇಕ ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಿಡ್ ಸೀಸನ್ ಆಟಗಾರರ ವರ್ಗಾವಣೆ ನಿಯಮಗಳು

ಮಿಡ್ ಸೀಸನ್ ಆಟಗಾರರ ವರ್ಗಾವಣೆ ನಿಯಮಗಳು

* ಪ್ರಸಕ್ತ ಸೀಸನ್ ನಲ್ಲಿ ಎಲ್ಲಾ 8 ತಂಡಗಳು ಕನಿಷ್ಠ 7 ಪಂದ್ಯಗಳನ್ನಾಡಿರಬೇಕು.
* ವರ್ಗಾವಣೆಗೆ ಒಳಪಡುವ ಆಟಗಾರ 2 ಪಂದ್ಯಕ್ಕಿಂತ ಹೆಚ್ಚು ಪಂದ್ಯವನ್ನಾಡಿರಬಾರದು.
* ಕ್ಯಾಪ್ಡ್ ಹಾಗೂ ಅನ್ ಕ್ಯಾಪ್ಡ್ ಆಟಗಾರರಿಬ್ಬರನ್ನು ಖರೀದಿಸಲು ಅಥವಾ ತಂಡದಿಂದ ತಂಡಕ್ಕೆ ವರ್ಗಾವಣೆ ಮಾಡಿಕೊಳ್ಳಲು ಸಾಧ್ಯ. * ಹೀಗಾಗಿ, ಇನ್ನೂ ಒಂದು ಪಂದ್ಯವಾಡದ ಪವನ್ ದೇಶಪಾಂಡೆಗೂ ಒಂದೇ ನಿಯಮ, ಸಿಕ್ಸರ್ ಕಿಂಗ್ ಗೇಲ್ ಗೂ ಅದೇ ನಿಯಮ.

ಐಪಿಎಲ್ ಮಧ್ಯದಲ್ಲೇ 5 ಸ್ಟಾರ್ ಭಾರತೀಯ ಕ್ರಿಕೆಟರ್ ವರ್ಗಾವಣೆ ಸಾಧ್ಯತೆ

ಅಜಿಂಕ್ಯ ರಹಾನೆ

ಅಜಿಂಕ್ಯ ರಹಾನೆ

ಡೆಲ್ಲಿ ಡೇರ್ ಡೆವಿಲ್ಸ್ ನಲ್ಲಿ ಪೃಥ್ವಿ-ಧವನ್ ಯಶಸ್ಸು ಕಾಣುತ್ತಿದ್ದು, ಅಜಿಂಕ್ಯ ರಹಾನೆಗೆ ಅವಕಾಶವೇ ಸಿಕ್ಕಿರಲಿಲ್ಲ. ಇಂಥ ಸಂದರ್ಭದಲ್ಲಿ ಉತ್ತಮ ಆರಂಭಿಕ ಆಟಗಾರರ ಕೊರತೆ ಅನುಭವಿಸುತ್ತಿರುವ ಫ್ರಾಂಚೈಸಿಗಳು Mid-Season Transfer ಬಳಸಿಕೊಂಡು ರಹಾನೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು. ಆದರೆ, ಮುಂಬೈ ವಿರುದ್ಧ ನಡೆದ ಅಕ್ಟೋಬರ್ 11ರ ಪಂದ್ಯದಲ್ಲಿ ರಹಾನೆಗೆ ಅವಕಾಶ ಸಿಕ್ಕಿತ್ತು. ಆದರೆ, ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದೆ 15 ಎಸೆತಗಳಲ್ಲಿ 3 ಬೌಂಡರಿ ಇದ್ದ 15 ರನ್ ಗಳಿಸಿ ಪೆವಿಲಿಯನ್ ಸೇರಿದರು.

ಹರ್ಷ ಭೋಗ್ಲೆ ಅವರು ಟೆಸ್ಟ್ ತಂಡ ಉಪ ನಾಯಕ ರಹಾನೆ ಅವರು ಚೆನ್ನೈ ತಂಡಕ್ಕೆ ಸೂಕ್ತ ಎಂದು ಹೇಳಿದ್ದಾರೆ.

ಪಾರ್ಥೀವ್ ಪಟೇಲ್

ಪಾರ್ಥೀವ್ ಪಟೇಲ್

ಆರ್ ಸಿಬಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಪಾರ್ಥೀವ್ ಪಟೇಲ್ ಅವರಿಗೆ ಈ ಸೀಸನ್ ನಲ್ಲಿ ಬೆಂಗಳೂರು ತಂಡದಲ್ಲಿ ಆಡುವ ಅವಕಾಶ ಸಿಗುವುದು ಕಷ್ಟ ಎನ್ನಬಹುದು. ಫಿಂಚ್ ಹಾಗೂ ದೇವದತ್ ಉತ್ತಮವಾಗಿ ಆಡುತ್ತಿದ್ದಾರೆ. ಚೆನ್ನೈ ತಂಡಕ್ಕೆ ಪಾರ್ಥೀವ್ ಪಟೇಲ್ ಬಂದರೆ ಆರಂಭಿಕರಾಗಿ ವಾಟ್ಸನ್ ಜೊತೆ ಕಣಕ್ಕಿಳಿಯಬಹುದು. ನಂತರ ಡುಪ್ಲೆಸಿಸ್ ಹಾಗೂ ರಾಯುಡು ಮುಂದಿನ ಕ್ರಮಾಂಅಕ್ದಲ್ಲಿ ಆಡಬಹುದು. ಸಮಯ ಬಂದರೆ ವಿಕೆಟ್ ಕೀಪಿಂಗ್ ಮಾಡಬಹುದು. ಈ ಹಿಂದೆ ಚೆನ್ನೈ ಕ್ಯಾಂಪಿನಲ್ಲಿದ್ದ ಗುಜರಾತಿನ ಪಟೇಲ್ ಅವರಿಗೆ ಧೋನಿ ಹಾಗೂ ಫ್ಲೆಮಿಂಗ್ ಜೊತೆ ಹೊಂದಾಣಿಕೆ ಕಷ್ಟವಾಗಲಾರದು.

ಕ್ವಿಕ್ ರನ್ ಬದಲಿಗೆ ಜಾಗಿಂಗ್ ಮಾಡುತ್ತಿದ್ದ ರಾಯುಡು ವಿರುದ್ಧ ಕೆವಿನ್ ಕಿಡಿ

ವಿರಾಟ್ ಸಿಂಗ್

ವಿರಾಟ್ ಸಿಂಗ್

ಜಾರ್ಖಂಡ್ ಮೂಲದ ವಿರಾಟ್ ಸಿಂಗ್ ಅವರು ಸದ್ಯ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದು, ಎಡಗೈ ಬ್ಯಾಟ್ಸ್ ಮನ್ ವಿರಾಟ್ ಗೆ ಅವಕಾಶ ಸಿಗುವುದು ಕಷ್ಟವಾಗಿದೆ. ವಾರ್ನರ್ ಪಡೆಯಲ್ಲಿ ಅಂಡರ್ 19 ತಂಡದಲ್ಲಿದ್ದ ಪ್ರಿಯಂ ಗರ್ಗ್ ಹಾಗೂ ಕಾಶ್ಮೀರದ ಆಲ್ ರೌಂಡರ್ ಸಮದ್ ಅವರಿಗೆ ಅವಕಾಶ ಸಿಕ್ಕಿದೆ. ಹೀಗಾಗಿ ಚೆನ್ನೈ ತಂಡದ ಮಧ್ಯಮ ಕ್ರಮಾಂಕ ಬಲ ಹೆಚ್ಚಿಸಲು ಸೂಕ್ತವಾದ ಆಟಗಾರ ಎನಿಸಿದ್ದಾರೆ. ಚೆನ್ನೈ ತಂಡದಲ್ಲಿನ ಯುವ ಪ್ರತಿಭೆ ಕೊರತೆಯನ್ನು ನೀಗಿಸಲೂ ಬಹುದು.

ದೀಪಕ್ ಹೂಡಾ

ದೀಪಕ್ ಹೂಡಾ

ಬರೋಡಾದ ಬಲಗೈ ಬ್ಯಾಟ್ಸ್ ಮನ್ ದೀಪಕ್ ಹೂಡಾರನ್ನು ಕಿಂಗ್ಸ್ ಎಲೆವನ್ ಪಂಜಾಬ್ ತಂಡ 50 ಲಕ್ಷ ರು ಕೊಟ್ಟು ಹರಾಜಿನಲ್ಲಿ ಖರೀದಿಸಿತ್ತು. ಆದರೆ, ರಾಹುಲ್ ಪಡೆಯಲ್ಲಿ ಇನ್ನೂ ಆಡುವ ಅವಕಾಶ ಸಿಕ್ಕಿಲ್ಲ. ಕಳೆದ ವರ್ಷ ಹೈದರಾಬಾದ್ ಪರ ಆಡಿದ್ದರೂ ಉತ್ತಮ ಪ್ರದರ್ಶನ ನೀಡಿರಲಿಲ್ಲ.

ಐಪಿಎಲ್ transfer ಆಗಬಲ್ಲ ಸಂಭಾವ್ಯ 5 ವಿದೇಶಿ ಆಟಗಾರರು ಯಾರು?

2015ರಿಂದ ಐಪಿಎಲ್ ಆಡುತ್ತಿರುವ ಹೂಡಾ 61 ಪಂದ್ಯಗಳಲ್ಲಿ 127.18 ಸ್ಟ್ರೈಕ್ ರೇಟ್ ನಂತೆ ಸ್ಕೋರ್ ಮಾಡಿದ್ದಾರೆ. ಚೆನ್ನೈನ ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಶಕ್ತಿ ತುಂಬಬಲ್ಲರು.

Story first published: Tuesday, October 13, 2020, 9:58 [IST]
Other articles published on Oct 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X