ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ 5 ಆಟಗಾರರ ಪಾಲಿಗೆ 2020ರ ಐಪಿಎಲ್ ಕೊನೇಯ ಸೀಸನ್ ಎನಿಸಲಿದೆ!

IPL 2020 might be their last season For these 5 Players

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್, ವಿಶ್ವದಲ್ಲಿ ನಡೆಯೋ ಲೀಗ್‌ಗಳಲ್ಲೇ ಅತ್ಯಂತ ದೊಡ್ಡ ಟಿ20 ಲೀಗ್‌ ಆಗಿ, ನಗದು ಶ್ರೀಮಂತ ಟೂರ್ನಿಯಾಗಿ ಖ್ಯಾತಿ ಪಡೆದಿದೆ. ಐಪಿಎಲ್‌ನಲ್ಲಿ ವಿಶ್ವದಗಲದ ಬೆಸ್ಟ್ ಕ್ರಿಕೆಟಿಗರು ಪಾಲ್ಗೊಳ್ಳುತ್ತಾರೆ. ಕೊರೊನಾ ವೈರಸ್‌ನಿಂದಾಗಿ ಮುಂದೂಡಲ್ಪಟ್ಟಿದ್ದ 13ನೇ ಆವೃತ್ತಿ ಐಪಿಎಲ್ ಅನ್ನು ಯುಎಇಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್ 19ರಿಂದ ನವೆಂಬರ್ 8ರ ವರೆಗೆ ಟೂರ್ನಿ ನಡೆಯುವುದರಲ್ಲಿದೆ (ಚಿತ್ರಕೃಪೆ: ಕ್ರಿಕ್ ಟ್ರ್ಯಾಕರ್).

'ನಾನು ರೋಹಿತ್ ಅವರ ದೊಡ್ಡ ಅಭಿಮಾನಿ': ನ್ಯೂಜಿಲೆಂಡ್ ಮಾರಕ ವೇಗಿ'ನಾನು ರೋಹಿತ್ ಅವರ ದೊಡ್ಡ ಅಭಿಮಾನಿ': ನ್ಯೂಜಿಲೆಂಡ್ ಮಾರಕ ವೇಗಿ

ಮಾರ್ಚ್ 29ರಿಂದ ಆರಂಭವಾಗಬೇಕಿದ್ದ ಐಪಿಎಲ್ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟು ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಇದೀಗ ಕ್ರಿಕೆಟ್ ಪ್ರಿಯರು ಐಪಿಎಲ್ ಆರಂಭವಾಗುವುದನ್ನು ಕಾಯುತ್ತಿದ್ದಾರೆ. ಈ ಬಾರಿಯ ಐಪಿಎಲ್ ಹರಾಜಿನ ವೇಳೆ ಎಲ್ಲಾ 8 ಫ್ರಾಂಚೈಸಿಗಳು ಬಲಿಷ್ಠ ತಂಡ ರೂಪಿಸಲು ಪೈಪೋಟಿ ನಡೆಸಿದ್ದರಿಂದ 2020ರ ಐಪಿಎಲ್ ಆವೃತ್ತಿ ಕುತೂಹಲ ಮೂಡಿಸಿದೆ.

ಆರ್‌ಸಿಬಿ ಒಂದೇ ಒಂದು ಸಾರಿ ಐಪಿಎಲ್ ಕಪ್‌ ಗೆಲ್ಲದ್ದಕ್ಕೆ ಅಸಲಿ ಕಾರಣಗಳಿವು!ಆರ್‌ಸಿಬಿ ಒಂದೇ ಒಂದು ಸಾರಿ ಐಪಿಎಲ್ ಕಪ್‌ ಗೆಲ್ಲದ್ದಕ್ಕೆ ಅಸಲಿ ಕಾರಣಗಳಿವು!

ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಖ್ಯಾತ ಆಟಗಾರರಲ್ಲಿ ಕೆಲ ಆಟಗಾರರದ್ದು 2020ರ ಸೀಸನ್ನೇ ಕೊನೆಯಾದಾದರೂ ಅಚ್ಚರಿಯಿಲ್ಲ. ಅಂಥ ಆಟಗಾರರ ಪಟ್ಟಿ ಇಲ್ಲಿದೆ.

5. ಕ್ರಿಸ್ ಗೇಲ್ (ಕೆXIಪಿ)

5. ಕ್ರಿಸ್ ಗೇಲ್ (ಕೆXIಪಿ)

ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾದವರು ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್. ಸದ್ಯ ಕಿಂಗ್ಸ್‌ ಇಲೆವೆನ್ ಪಂಜಾಬ್‌ನಲ್ಲಿರುವ ಗೇಲ್ ಐಪಿಎಲ್‌ನಲ್ಲಿ ಹಲವಾರು ಅಪರೂಪದ ದಾಖಲೆಗಳನ್ನು ಹೊಂದಿದ್ದಾರೆ. ಅತ್ಯಧಿಕ ಶತಕ (6), ಅತ್ಯಧಿಕ ವೈಯಕ್ತಿಕ ರನ್ (175), ಅತ್ಯಧಿಕ ಸಿಕ್ಸರ್ (326) ದಾಖಲೆ ಗೇಲ್ ಹೆಸರಲ್ಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳನ್ನು ಪ್ರತಿನಿಧಿಸಿರುವ ಗೇಲ್ ಇತ್ತೀಚೆಗೇಕೋ ನೀರಸ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಅವರನ್ನು ಹರಾಜಿನ ವೇಳೆ ಖರೀದಿಸಲು ಫ್ರಾಂಚೈಸಿಗಳು ಆಸಕ್ತಿ ತೋರುತ್ತಿಲ್ಲ. ಹೀಗಾಗಿ 40ರ ಹರೆಯದ ಗೇಲ್‌ದು ಇದೇ ಕೊನೆಯ ಐಪಿಎಲ್ ಸೀಸನ್ ಅನ್ನಿಸಿದರೂ ಅನ್ನಿಸಬಹುದು.

4. ಇಮ್ರಾನ್ ತಾಹೀರ್ (ಸಿಎಸ್‌ಕೆ)

4. ಇಮ್ರಾನ್ ತಾಹೀರ್ (ಸಿಎಸ್‌ಕೆ)

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾದ ಲೆಗ್ ಸ್ಪಿನ್ನರ್ ಇಮ್ರಾನ್ ತಾಹೀರ್ ಸದ್ಯ ವಿದೇಶಿ ಲೀಗ್‌ಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೆಚ್ಚು ಬಾರಿ ಐಪಿಎಲ್ ಟ್ರೋಫಿಗಳನ್ನು ಗೆದ್ದಿರುವ ತಂಡ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಆಡುತ್ತಿರುವ ತಾಹೀರ್, 6 ಸೀಸನ್‌ಗಳಲ್ಲಿ 20.39ರ ಸರಾಸರಿಯಂತೆ 79 ವಿಕೆಟ್ ಪಡೆದಿದ್ದಾರೆ. ಕಳೆದ ಸೀಸನ್‌ನಲ್ಲಿ 26 ವಿಕೆಟ್ ಪಡೆದಿದ್ದ ತಾಹೀರ್ ಪರ್ಪಲ್ ಕ್ಯಾಪ್ ಪಡೆದಿದ್ದರು. 41ರ ಹರೆಯದ ಇಮ್ರಾನ್ ಈಗ ಆಟ ನಿಲ್ಲಿಸುವ ಘಟ್ಟದಲ್ಲಿದ್ದಾರೆ. ವಯೋಸಹಜವಾಗಿ ಆಟ ಕಷ್ಟವಾಗುವುದರಿಂದ ತಾಹೀರ್ ಆಟ ನಿಲ್ಲಿಸಬಹುದು.

3. ಡೇಲ್ ಸ್ಟೇನ್ (ಆರ್‌ಸಿಬಿ)

3. ಡೇಲ್ ಸ್ಟೇನ್ (ಆರ್‌ಸಿಬಿ)

ದಕ್ಷಿಣ ಆಫ್ರಿಕಾದ ಮಾರಕ ವೇಗಿ ಡೇಲ್ ಸ್ಟೇನ್ ಮೈದಾನದಲ್ಲಿ ಕಾಣಸಿಕೊಂಡಿದ್ದಕ್ಕಿಂತ ಗಾಯಗೊಂಡು ದೂರ ಉಳಿದಿದ್ದೇ ಹೆಚ್ಚು. ಆರ್‌ಸಿಬಿ ಮೂಲಕ ಆಟ ಆರಂಭಿಸಿದ್ದ ಸ್ಟೇನ್ ಆ ಬಳಿಕ ಡೆಕ್ಕನ್ ಚಾರ್ಜರ್ಸ್, ಸನ್ ರೈಸರ್ಸ್ ಹೈದರಾಬಾದ್, ಗುಜರಾತ್ ಲಯನ್ಸ್ ತಂಡಕ್ಕೆಲ್ಲ ಹೋಗಿ ಮತ್ತೀಗ ಆರ್‌ಸಿಬಿಗೆ ಬಂದಿದ್ದಾರೆ. 37ರ ಹರೆಯದ ಸ್ಟೇನ್ 2019ರ ಸೀಸನ್‌ನಲ್ಲಿ ಎರಡು ಪಂದ್ಯಗಳಲ್ಲಿ ಆಡಿ ಆರ್‌ಸಿಬಿ ಗೆಲುವಿಗೆ ಕಾರಣವಾಗಿದ್ದರು. ಆದರೆ ಸ್ಟೇನ್ ವೃತ್ತಿಬದುಕು ಈಗ ಕೊನೇ ಹಂತದಲ್ಲಿದೆ.

2. ಅಮಿತ್ ಮಿಶ್ರಾ (ಡಿಸಿ)

2. ಅಮಿತ್ ಮಿಶ್ರಾ (ಡಿಸಿ)

ಐಪಿಎಲ್ ಪ್ರತೀ ಸೀಸನ್‌ನಲ್ಲೂ ಅಮಿತ್ ಮಿಶ್ರಾ ಆಡಿದ್ದಾರೆ. ಲೆಗ್ ಸ್ಪಿನ್ನರ್ ಮಿಶ್ರಾ ಐಪಿಎಲ್ ಕ್ರಿಕೆಟ್‌ನಲ್ಲಿ ಅತೀ ಯಶಸ್ವಿ ಬೌಲರ್ ಅನ್ನಿಸಿಕೊಂಡವರು. 12 ಸೀಸನ್‌ಗಳಲ್ಲಿ ಮಿಶ್ರಾ 19.75ರ ಸರಾಸರಿಯಂತೆ 157 ವಿಕೆಟ್ ಪಡೆದಿದ್ದಾರೆ. ಅಲ್ಲದೆ 3 ಬಾರಿ ಹ್ಯಾಟ್ರಿಕ್ ವಿಕೆಟ್ ಸಾಧನೆಯೂ ಮಾಡಿದ್ದಾರೆ. ಡೆಲ್ಲಿ ಡೇರ್ ಡೆವಿಲ್ಸ್‌ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ಮೂಲಕ ಐಪಿಎಲ್ ವೃತ್ತಿ ಬದುಕು ಆರಂಭಿಸಿದ ಅಮಿತ್, ಮತ್ತೆ ಡೆಕ್ಕನ್ ಚಾರ್ಜರ್ಸ್‌ಗೆ ಹೋಗಿ ಮತ್ತೀಗ ಡೆಲ್ಲಿಗೆ ವಾಪಸ್ಸಾಗಿದ್ದಾರೆ. ನವೆಂಬರ್‌ನಲ್ಲಿ 38ರ ಹರೆಯಕ್ಕೆ ಕಾಲಿರಿಸುತ್ತಿರುವ ಮಿಶ್ರಾ ಇನ್ನು ಹೆಚ್ಚು ಸೀಸನ್‌ಗಳಲ್ಲಿ ಆಡುವ ನಿರೀಕ್ಷೆಯಿಲ್ಲ.

1. ಹರ್ಭಜನ್ ಸಿಂಗ್ (ಸಿಎಸ್‌ಕೆ)

1. ಹರ್ಭಜನ್ ಸಿಂಗ್ (ಸಿಎಸ್‌ಕೆ)

ಭಾರತದ ಮಾಜಿ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಇದಕ್ಕೂ ಮುನ್ನ ಭಜ್ಜಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದರು. ಮುಂಬೈ ಮತ್ತು ಚೆನ್ನೈ ಎರಡೂ ತಂಡಗಳು ಕ್ರಮವಾಗಿ 4, 3ರಂತೆ ಒಟ್ಟಿಗೆ 7 ಬಾರಿ ಚಾಂಪಿಯನ್ಸ್‌ ಆಗಿ ಮಿನುಗಿದೆ. ಐಪಿಎಲ್‌ನಲ್ಲಿ 150+ ವಿಕೆಟ್‌ಗಳೊಂದಿಗೆ ಮೂರನೇ ಅತ್ಯಧಿಕ ವಿಕೆಟ್ ದಾಖಲೆ ಹೊಂದಿರುವ ಭಜ್ಜಿಗೀಗ 40ರ ಹರೆಯ. ಬಹುಶಃ 13ನೇ ಐಪಿಎಲ್ ಆವೃತ್ತಿ ಭಜ್ಜಿಯ ಕೊನೆಯ ಐಪಿಎಲ್ ಆವೃತ್ತಿಯಾದರೂ ಅಚ್ಚರಿಯಿಲ್ಲ.

Story first published: Friday, July 31, 2020, 19:08 [IST]
Other articles published on Jul 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X