ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಬರೊಬ್ಬರಿ ಎರಡೂವರೆ ವರ್ಷ ಬೆಂಚ್ ಕಾದು ಅವಕಾಶ ಗಿಟ್ಟಿಸಿಕೊಂಡ ಮೋನು ಸಿಂಗ್

IPL 2020: Monu Singh makes IPL debut two years after being picked by CSK

ಎರಡು ವರ್ಷಗಳ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಎರಡು ವರ್ಷಗಳ ನಿಷೇಧದ ಬಳಿಕ ಮತ್ತೆ ಐಪಿಎಲ್‌ನಲ್ಲಿ ಕಣಕ್ಕಿಳಿದಿತ್ತು. ಆ ಟೂರ್ನಿಯಲ್ಲಿ ಚೆನ್ನೈ ಫ್ರಾಂಚೈಸಿ ತಂಡದ ನಾಯಕನ ತವರೂರಾದ ರಾಂಚಿಯ ಇನ್ನೋರ್ವ ಯುವ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ನಿರೀಕ್ಷೆಯೊಂದಿಗೆ ಸಿಎಸ್‌ಕೆಗೆ ಸೇರಿಕೊಂಡ ಮೋನು ಸಿಂಗ್ ಸತತ ಎರಡು ವರ್ಷ ಸಂಪೂರ್ಣವಾಗಿ ಬೆಂಚ್ ಕಾದರು. ಕಡೆಗೂ ಮೂರನೇ ಆವೃತ್ತಿಯ ಅಂತ್ಯದ ವೇಳೆಗೆ ಆಡುವ ಬಳಗದಲ್ಲಿ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಹೌದು, ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೋನು ಕುಮಾರ್ ಸಿಂಗ್ ಅವರನ್ನು ಕಣಕ್ಕಿಳಿಸಿದೆ. ಬೌಲಿಂಗ್ ಆಲ್‌ರೌಂಡರ್ ಆಗಿರುವ ಮೋನು ಈ ಅವಕಾಶವನ್ನು ಹೇಗೆ ಬಳಸಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

2018ರ ಆವೃತ್ತಿಯಲ್ಲಿ ಮೋನು ಸಿಂಗ್ ಅವರನ್ನು ಚೆನ್ನೈ ಫ್ರಾಂಚೈಸಿ ಅವರ ಮೂಲ ಬೆಲೆ 20 ಲಕ್ಷವನ್ನು ನೀಡಿ ಖರೀದಿಸಿತ್ತು. ಆದರೆ ಅದಾದ ಬಳಿಕ ಸತತ ಎರಡೂವರೆ ಆವೃತ್ತಿಗಳಲ್ಲಿ ಕನಿಷ್ಠ ಒಂದು ಪಂದ್ಯದಲ್ಲೂ ಮೊನು ಸಿಂಗ್ ಆಡಲು ಅವಕಾಶ ಪಡೆದಿರಲಿಲ್ಲ. ಸತತ 44 ಪಂದ್ಯಗಳಲ್ಲಿ ಮೋನು ಬೆಂಚ್ ಕಾದಿದ್ದಾರೆ. ಆರ್‌ಸಿಬಿ ವಿರುದ್ದದ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಬದಲಿಗೆ ತಂಡದಲ್ಲಿ ಅವಕಾಶ ಗಿಟ್ಟಿಸಿದ್ದಾರೆ.

ಕಡಿಮೆ ರನ್‌ ಗಳಿಸಿಯೂ ಪಂಜಾಬ್ ಪಂದ್ಯ ಗೆದ್ದಿದ್ದು ಇದೇ ಮೊದಲಲ್ಲಕಡಿಮೆ ರನ್‌ ಗಳಿಸಿಯೂ ಪಂಜಾಬ್ ಪಂದ್ಯ ಗೆದ್ದಿದ್ದು ಇದೇ ಮೊದಲಲ್ಲ

ಮೋನು ಸಿಂಗ್ 2014ರ ಅಂಡರ್ 19 ವಿಶ್ವಕಪ್ ತಂಡದಲ್ಲಿ ಬೌಲಿಂಗ್ ಆಲ್‌ರೌಂಡರ್ ಆಗಿ ಕಣಕ್ಕಿಳಿದಿದ್ದರು. ಝಾರ್ಖಾಂಡ್ ತಂಡದ ಪರವಾಗಿ ಮೊನು 22 ಟಿ20 ಪಂದ್ಯಗಳಲ್ಲಿ 25 ವಿಕೆಟ್ ಪಡೆದಿದ್ದಾರೆ. ಕಳೆದ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ 9 ಪಂದ್ಯಗಳಿಂದ 10 ವಿಕೆಟ್ ಪಡೆದಿದ್ದರು.

ಆರ್‌ಸಿಬಿ ವಿರುದ್ದದ ಪಂದ್ಯದ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಟ್ವಿಟ್ಟರ್ ಖಾತೆಯಲ್ಲಿ ಮೋನು ಸಿಂಗ್ ಧೋನಿ ಜೊತೆಗಿರುವ ಫೋಟೋ ಹಂಚಿಕೊಂಡು ಪದಾರ್ಪಣೆಯನ್ನು ಖಚಿತಪಡಿಸಲಾಗಿತ್ತು.

Story first published: Sunday, October 25, 2020, 16:55 [IST]
Other articles published on Oct 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X