ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

CSK ಪರ 4,000 ರನ್ ಮತ್ತು IPLನಲ್ಲಿ ವಿಕೆಟ್ ಹಿಂಬದಿ 150 ಬಲಿ ಪಡೆದ ಧೋನಿ

Dhoni 4000runs for csk

ಅಬುಧಾಬಿಯ ಶೇಕ್ ಜಾಯೆದ್ ಸ್ಟೇಡಿಯಂನಲ್ಲಿ ಸೋಮವಾರ(ಅ.19) ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಮುಗ್ಗರಿಸಿತು. ಆದರೂ ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಪಾಲಿಗೆ ಈ ಪಂದ್ಯವು ಅತ್ಯಂತ ವಿಶೇಷವಾಗಿತ್ತು.

ರಾಜಸ್ಥಾನ್ ರಾಯಲ್ಸ್‌ ವಿರುದ್ಧ ಧೋನಿ ಕಣಕ್ಕಿಳಿಯುತ್ತಿದ್ದಂತೆ, ಐಪಿಎಲ್ ಇತಿಹಾಸದಲ್ಲಿ 200ನೇ ಪಂದ್ಯವನ್ನಾಡಿದ ಮೊದಲ ಆಟಗಾರ ಎಂಬ ದಾಖಲೆಯನ್ನೇ ಸೃಷ್ಟಿಸಿದ್ರು. ಟಾಸ್ ಗೆದ್ದು ಅಂದುಕೊಂಡಂತೆ ಬ್ಯಾಟಿಂಗ್ ಆಯ್ದುಕೊಂಡ ಧೋನಿ ಪಡೆ ಈ ಸೀಸನ್‌ನಲ್ಲಿ ಅತ್ಯಂತ ಕಡಿಮೆ ಮೊತ್ತವನ್ನು ಕಲೆಹಾಕಿತು.

5 ವಿಕೆಟ್ ನಷ್ಟಕ್ಕೆ 125ರನ್ ಕಲೆಹಾಕಿದ್ದ ಸಿಎಸ್‌ಕೆ ಗುರಿಯನ್ನು ರಾಜಸ್ಥಾನ್ ರಾಯಲ್ಸ್ ಇನ್ನೆರಡು ಓವರ್ ಬಾಕಿ ಇರುವಂತೆಯೇ ಗುರಿ ಮುಟ್ಟಿತು. ಪಂದ್ಯ ಸೋತರು ಧೋನಿ ಹೆಸರಿಗೆ ಎರಡು ಅಮೂಲ್ಯ ದಾಖಲೆಗಳು ಸೇರಿಕೊಂಡವು.

ಐದನೇ ಓವರ್‌ನಲ್ಲಿ ದೀಪಕ್ ಚಹಾರ್ ಬೌಲಿಂಗ್‌ನಲ್ಲಿ ಸಂಜು ಸ್ಯಾಮ್ಸನ್ ಬ್ಯಾಟ್‌ಗೆ ತಗುಲಿದ ಚೆಂಡು ಎಡ ಭಾಗಕ್ಕೆ ಹಾರಿತು. ಧೋನಿ ಅತ್ಯಂತ ಕೆಳ ಮಟ್ಟದಲ್ಲಿ ಎಡಕ್ಕೆ ಜಿಗಿದು ಕ್ಯಾಚ್ ಹಿಡಿಯುವ ಮೂಲಕ ನೋಡುಗರನ್ನ ಅಷ್ಟೇ ಅಲ್ಲದೆ ಬೌಲರ್‌ ದೀಪಕ್ ಚಹಾರ್‌ನನ್ನೇ ಬೆಚ್ಚಿ ಬೀಳಿಸಿದರು.

ತನ್ನ ನಲವತ್ತನೇ ವಯಸ್ಸಿನಲ್ಲಿ ಧೋನಿ ಎಡ ಭಾಗಕ್ಕೆ ಜಿಗಿದು ಅಂತಹ ಕೆಳ ಮಟ್ಟದ ಕ್ಯಾಚ್‌ ಅನ್ನು ಅದ್ಭುತವಾಗಿ ಹಿಡಿದಿದ್ದು ಭಾರೀ ಪ್ರಶಂಸೆಗೆ ಪಾತ್ರವಾಗಿದೆ. ಇಷ್ಟೇ ಅಲ್ಲದೆ ಇದು ಮಹೇಂದ್ರ ಸಿಂಗ್ ಧೋನಿ ಪಾಲಿಗೆ ವಿಕೆಟ್ ಹಿಂಬಂದಿಯ 150ನೇ ಬಲಿಯಾಗಿದೆ.

ಇದರ ಜೊತೆಗೆ ಇದಕ್ಕೂ ಮೊದಲು ಬ್ಯಾಟಿಂಗ್‌ನಲ್ಲಿ 28 ರನ್‌ಗಳಿಸಿ ಔಟಾಗಿದ್ದ ಮಹೇಂದ್ರ ಸಿಂಗ್ ಧೋನಿ, ಚೆನ್ನೈ ಸೂಪರ್ ಕಿಂಗ್ಸ್‌ ಪರವಾಗಿ 4,000 ರನ್ ಪೂರೈಸಿದ ಸಾಧನೆ ಮಾಡಿದರು.

ಈ ಮೂಲಕ ಧೋನಿ 200 ಪಂದ್ಯಗಳಲ್ಲಿ, 4,596 ರನ್ ಗಳಿಸಿದ್ದು, ಇದರಲ್ಲಿ 23 ಅರ್ಧಶತಕಗಳನ್ನು ಒಳಗೊಂಡಿದೆ, 84 ರನ್ ಗಳಿಸದ ಗರಿಷ್ಠ ಸ್ಕೋರ್. ಅವರ ಸ್ಟ್ರೈಕ್ ರೇಟ್ 137.36 ರಷ್ಟಿದೆ.

Story first published: Tuesday, October 20, 2020, 10:26 [IST]
Other articles published on Oct 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X