ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಬ್ಯಾಟ್‌ನಲ್ಲಿ ಧೋನಿ ಮಿಂಚದಿದ್ದರೂ ವಿಕೆಟ್ ಕೀಪಿಂಗ್‌ನಲ್ಲಿ ಯಶಸ್ಸು

IPL 2020: MS Dhoni is the most successful wicketkeeper this year

ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಟೂರ್ನಿಯಲ್ಲಿ ಕಳಪೆ ಪ್ರದರ್ಶನವನ್ನು ನೀಡಿ ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಸಿಎಸ್‌ಕೆ ತಂಡದ ಈ ಕೆಟ್ಟ ಪ್ರದರ್ಶನಕ್ಕೆ ನಾಯಕ ಎಂಎಸ್ ಧೋನಿಯ ಬ್ಯಾಟಿಂಗ್ ವೈಫಲ್ಯವೂ ಕಾರಣ. ಹೀಗಾಗಿ ಧೋನಿಯ ನಾಯಕತ್ವ ಹಾಗೂ ಬ್ಯಾಟಿಂಗ್ ಬಗ್ಗೆ ಸಾಕಷ್ಟು ಪ್ರಶ್ನೆಗಳು ಬರುತ್ತಿವೆ.

ಆದರೆ ಸಿಎಸ್‌ಕೆ ತಂಡದ ನಾಯಕ ಧೋನಿ ಬ್ಯಾಟಿಂಗ್‌ನಲ್ಲಿ ವೈಫಲ್ಯವನ್ನು ಅನುಭವಿಸಿದ್ದರೂ ವಿಕೆಟ್‌ನ ಹಿಂದೆ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಮಹೇಂದ್ರ ಸಿಂಗ್ ಧೋನಿ 39 ವರ್ಷದಲ್ಲಿದ್ದಾರೆ. ಆದರೆ ವಿಕೆಟ್‌ನ ಹಿಂಬಾಗದಲ್ಲಿನ ಪ್ರದರ್ಶನಕ್ಕೆ ಧೋನಿಯ ವಯಸ್ಸು ಎಳ್ಳಷ್ಟೂ ಅಡ್ಡಿಯಾಗಿಲ್ಲ.

ಅಭಿಮಾನಿಗೆ ಧೋನಿ ಬಗ್ಗೆ ಕೆಎಲ್ ರಾಹುಲ್ ಕೊಟ್ಟ ಉತ್ತರ ವಾಹ್!ಅಭಿಮಾನಿಗೆ ಧೋನಿ ಬಗ್ಗೆ ಕೆಎಲ್ ರಾಹುಲ್ ಕೊಟ್ಟ ಉತ್ತರ ವಾಹ್!

ಈ ಬಾರಿಯ ಐಪಿಎಲ್‌ನಲ್ಲಿ ಎಲ್ಲಾ ವಿಕೆಟ್ ಕೀಪರ್‌ಗಳತ್ತ ಗಮನಹರಿಸಿದರೆ ಧೊನಿಯೇ ಅತ್ಯಂತ ಯಶಸ್ವಿ ವಿಕೆಟ್ ಕೀಪರ್ ಎನಿಸುತ್ತಾರೆ. ವಿಕೆಟ್ ಕೀಪರ್ ಆಗಿ ಈವರೆಗೆ ಧೋನಿ ಅತಿ ಹೆಚ್ಚು ಬಲಿ ಪಡೆಯಲು ಯಶಸ್ವಿಯಾಗಿದ್ದಾರೆ. ವಿಕೆಟ್‌ನ ಹಿಂದೆ ನಿಂತು 15 ಬಲಿಗೆ ಕಾರಣರಾಗಿರುವ ಧೋನಿ ಮುಂಬೈ ಇಂಡಿಯನ್ಸ್ ತಂಡದ ಕ್ವಿಂಟನ್ ಡಿಕಾಕ್ ಅವರಿಂದ ಐದು ಬಲಿಯಷ್ಟು ಮುಂದಿದ್ದಾರೆ.

ಈ ಬಾರೊಯ ಐಪಿಎಲ್‌ನಲ್ಲಿ ಧೋನಿ ವಿಕೆಟ್ ಕೀಪರ್ ಆಗಿ ಪಡೆದಿರುವ 15 ಔಟ್‌ಗಳ ಪೈಕಿ 14 ಕ್ಯಾಚ್ ಹಾಗೂ ಒಂದು ಸ್ಟಂಪ್ ಔಟ್ ಕೂಡ ಸೇರಿಕೊಂಡಿದೆ.

ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ ಸಿಇಒ ''ಅಜ್ಞಾನಿ'' ಎಂದು ಕರೆದ ಬಿಸಿಸಿಐಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ ಸಿಇಒ ''ಅಜ್ಞಾನಿ'' ಎಂದು ಕರೆದ ಬಿಸಿಸಿಐ

ಧೋನಿ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ 4000 ರನ್ ಹಾಗೂ ಐಪಿಎಲ್‌ನಲ್ಲಿ 150 ಬಲಿ ಪಡೆದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇನ್ನು ರಾಂಚಿಯ ಈ ಸ್ಟಾರ್ ಆಟಗಾರ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಐಪಿಎಲ್ ಟೂರ್ನಿಯಲ್ಲಿ 200 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.

Story first published: Wednesday, October 21, 2020, 10:30 [IST]
Other articles published on Oct 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X