ಐಪಿಎಲ್ 2020: ಮತ್ತೆ ಅಭ್ಯಾಸಕ್ಕಿಳಿದ ಸಿಎಸ್‌ಕೆ ನಾಯಕ ಧೋನಿ

ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯ ಸುದೀರ್ಘ ಕಾಲದ ವಿಶ್ರಾಂತಿ ಅಂತ್ಯವಾಗುವ ಸಮಯ ಸನ್ನಿಹಿತವಾಗಿದೆ. ಐಪಿಎಲ್ ಮೂಲಕ ಮತ್ತೆ ಕ್ರಿಕೆಟ್ ಅಂಗಳಕ್ಕೆ ಇಳಿಯಲು ಧೋನಿ ಸಜ್ಜಾಗುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಐಪಿಎಲ್ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಧೋನಿ ರಾಂಚಿಯಲ್ಲಿ ನೆಟ್ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.

ವರದಿಗಳ ಪ್ರಕಾರ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರಾಂಚಿಯ ಜೆಎಸ್‌ಸಿಎ ಒಳಾಂಗಣ ಕ್ರೋಡಾಂಗಣದಲ್ಲಿ ಈಗಾಗಲೇ ನೆಟ್ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಅಂತರ ಹಾಗೂ ಲಾಕ್‌ಡೌನ್ ಕಾರಣದಿಂದಾಗಿ ರಾಂಚಿಯಲ್ಲಿ ಹೆಚ್ಚಿನ ಬೌಲರ್‌ಗಳ ಲಭ್ಯತೆಯಿಲ್ಲದ ಕಾರಣ ಧೋನಿ ಬೌಲಿಂಗ್ ಮೆಷಿನ್ ಮೂಲಕ ಅಭ್ಯಾಸವನ್ನು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಆರ್‌ಸಿಬಿಗೆ ಆರೋನ್ ಫಿಂಚ್: ಕೊಹ್ಲಿ ನಾಯಕತ್ವದಲ್ಲಿ ಆಡುವ ಬಗ್ಗೆ ಫಿಂಚ್ ಮಾತು

ಜಾರ್ಖಾಂಡ್ ರಾಜ್ಯ ಕ್ರಿಕೆಟ್ ಅಸೊಸೊಯೇಶನ್‌ನ ಅಧಿಕಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕಳೆದವಾರ ಧೋನಿ ಬೌಲಿಂಗ್ ಮೆಷಿನ್ ಬಳಸಿಕೊಂಡು ಅಭ್ಯಾಸವನ್ನು ನಡೆಸಿದ್ದಾರೆ. ವಾರಾಂತ್ಯದಲ್ಲಿ ಎರಡು ದಿನಗಳ ಕಾಲ ಅವರು ಅಭ್ಯಾಸವನ್ನು ಮಾಡಿದ್ದಾರೆ. ಆದರೆ ನಂತರ ಭೇಟಿ ನೀಡಿಲ್ಲ. ಮತ್ತೆ ಅಭ್ಯಾಸಕ್ಕಾಗಿ ಬರುವ ಬಗ್ಗೆಯೂ ಯಾವುದೇ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ.

ವರದಿಗಳ ಪ್ರಕಾರ ಲಾಕ್‌ಡೌನ್ ವಿಧಿಸುವ ಮುನ್ನ ಧೋನಿ ನಿರಂತರವಾಗಿ ಜೆಎಸ್‌ಸಿಎ ಒಳಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸವನ್ನು ನಡೆಸುತ್ತಿದ್ದರು. ಆದರೆ ಲಾಕ್‌ಡೌನ್ ಬಳಿಕ ಮನೆಯಲ್ಲೇ ಕಾಲವನ್ನು ಕಳೆದಿದ್ದಾರೆ. ಈಗ ಮತ್ತೆ ನೆಟ್ ಅಭ್ಯಾಸಕ್ಕೆ ಮರಳುತ್ತಿದ್ದಾರೆ ಧೋನಿ.

ಸಿಪಿಎಲ್ 2020: ಕೆರಿಬಿಯನ್ ನಾಡಿನ ಟಿ20 ದಿಗ್ಗಜ ಈ ಬಾರಿಯ ಟೂರ್ನಿಗೆ ಅಲಭ್ಯ

ಯುಎಇಗೆ ತೆರಳುವ ಮುನ್ನ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಆಗಸ್ಟ್ 20ಕ್ಕೂ ಮುನ್ನ ಜೊತೆ ಸೇರುವ ಸಾಧ್ಯತೆಯಿದೆ. ಅದಕ್ಕೂ ಮುನ್ನ ಸಿಗುವ ಒಂದೆರಡು ವಾರಗಳ ಕಾಲದಲ್ಲಿ ಧೋನಿ ಅಣ್ಯಾಸವನ್ನು ರಾಂಚಿಯಲ್ಲೇ ನಡೆಸಲಿದ್ದಾರೆ. ಕಳೆದ ಮಾರ್ಚ್ ತಿಂಗಳಿನ ಅಂತ್ಯದಲ್ಲಿ ಧೋನಿ ಸಿಎಸ್‌ಕೆ ತಂಡದ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಆದರೆ ಬಳಿಕ ಕೊರೊನಾ ವೈರಸ್ ಕಾರಣದಿಂದಾಗಿ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ನಿರ್ಧಾರ ತೆಗೆದುಕೊಂಡ ಬಳಿಕ ತವರಿಗೆ ಮರಳಿದ್ದರು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, August 7, 2020, 12:02 [IST]
Other articles published on Aug 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X