ಕೊನೇ ಓವರ್‌ನಲ್ಲಿ ಬ್ರಾವೋ ಬದಲು ಜಡೇಜಾ ಆಡಿಸಿದ್ಯಾಕೆ?: ಧೋನಿ ವಿವರಣೆ

ಶಾರ್ಜಾ: ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮತ್ತೊಂದು ಜಯ ಕಂಡಿದೆ. ಶಾರ್ಜಾಸ್ಟೇಡಿಯಂನಲ್ಲಿ ನಡೆದ 34ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ 5 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿದೆ. ಇದು ಡೆಲ್ಲಿಗೆ ಟೂರ್ನಿಯಲ್ಲಿ ಲಭಿಸುತ್ತಿರುವ 7ನೇ ಗೆಲುವು.

ರಿಕಿ ಪಾಂಟಿಂಗ್‌ಗೆ ಕೀಟಲೆ ಮಾಡಿದ ರಿಷಭ್ ಪಂತ್

ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್ ಧವನ್ ಉತ್ತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಐಪಿಎಲ್‌ನ ಚೊಚ್ಚಲ ಶತಕ (58 ಎಸೆತ, 101 ರನ್) ಬಾರಿಸಿ ಪಂದ್ಯವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದಿದ್ದರು. ಆದರೆ ಪಂದ್ಯ ಗೆಲ್ಲುವ ಅವಕಾಶ ಸಿಎಸ್‌ಕೆಗೆ ಇತ್ತು. ಕೊನೇ ಓವರ್‌ನಲ್ಲಿ ವೇಗಿಯ ಬದಲು ಸ್ಪಿನ್ನರ್‌ನ ಆಡಿಸಿದ್ದು ಸಿಎಸ್‌ಕೆಗೆ ದುಬಾರಿಯಾಯ್ತು.

ಪಂದ್ಯದ ಸೋಲಿನ ಬಗ್ಗೆ ಮಾತನಾಡಿರುವ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಕೊನೇ ಓವರ್‌ನಲ್ಲಿ ಜಡೇಜಾ ಅವರನ್ನು ಆಡಿಸಿದ್ಯಾಕೆ ಎನ್ನುವುದಕ್ಕೆ ಕಾರಣ ವಿವರಿಸಿದ್ದಾರೆ. 'ಬ್ರಾವೋ ಫಿಟ್ ಇರಲಿಲ್ಲ. ಅವರು ಓವರ್ ಎಸೆಯಲು ಸಾಧ್ಯವಿರಲಿಲ್ಲ. ಹಾಗಾಗಿ ನಮ್ಮಲ್ಲಿ ಜಡೇಜಾ ಮತ್ತು ಸ್ಯಾಮ್ ಕರನ್ ಆಯ್ಕೆ ಮಾತ್ರ ಇತ್ತು,' ಎಂದು ಧೋನಿ ಹೇಳಿದ್ದಾರೆ.

ಶಾರ್ಜಾ ಸ್ಟೇಡಿಯಂ ಆಚೆಗೆ ಸಿಕ್ಸರ್ ಹೊಡೆದ ಜಡೇಜಾ! ಪ್ರಾಣವನ್ನು ಪಣಕ್ಕಿಟ್ಟು ಚೆಂಡನ್ನು ಎತ್ತಿಕೊಂಡ ಬಾಲಕ

'ಶಿಖರ್ ಧವನ್ ವಿಕೆಟ್ ನಮಗೆ ತುಂಬಾ ಪ್ರಮುಖವಾಗಿತ್ತು. ಆದರೆ ಅವರ ಕ್ಯಾಚನ್ನು ನಾವು ಒಂದೆರಡು ಸಾರಿ ಮಿಸ್ ಮಾಡಿಕೊಂಡೆವು. ಅವರು ಬ್ಯಾಟಿಂಗ್ ಆಡುತ್ತಾ ನಿಂತರೆ ಅವರ ಸ್ಟ್ರೈಕ್‌ರೇಟ್ ಬೆಳೆಯುತ್ತಾ ಹೋಗುತ್ತದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಪಿಚ್‌ ಕೂಡ ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲ ಒದಗಿಸಿತು,' ಎಂದು ಧೋನಿ ವಿವರಿಸಿದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, October 18, 2020, 9:15 [IST]
Other articles published on Oct 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X