ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮೂರು ಬಾರಿ ಚಾಂಪಿಯನ್ಸ್ ಆಗಿ ಮಿನುಗಿದ್ದ ಚೆನ್ನೈ ಸೂಪರ್ ಕಿಂಗ್ಸ್ 2020ನೇ ಆವೃತ್ತಿಯಲ್ಲಿ ನೀರಸ ಪ್ರದರ್ಶನ ನೀಡಿದೆ. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ಲೇ ಆಫ್ಗೆ ಪ್ರವೇಶಿಸದೆ ಕೂಡ ಸಿಎಸ್ಕೆ ಟೂರ್ನಿಯಿಂದ ಹೊರ ಬೀಳುವುದರಲ್ಲಿದೆ.
'12 ಗಂಟೆಗಳು ಉಳಿದಿವೆ, ಪ್ರತೀ ಕ್ಷಣವನ್ನೂ ಎಂಜಾಯ್ ಮಾಡಬೇಕಿದೆ'
ಅಕ್ಟೋಬರ್ 25ರಂದು ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 8 ವಿಕೆಟ್ಗಳ ಗೆಲುವನ್ನಾಚರಿಸಿತು. ಆದರೂ ಚೆನ್ನೈ ಖಾತೆಯಲ್ಲೀಗ ಕೇವಲ 8 ಅಂಕಗಳಷ್ಟೇ ಉಳಿದಿವೆ. ಇನ್ನುಳಿದ 2 ಪಂದ್ಯಗಳನ್ನು ಗೆದ್ದರೂ ಸಿಎಸ್ಕೆಯ ಪ್ಲೇ ಆಫ್ ಪ್ರವೇಶದ ಹಾದಿ ಬಹುತೇಕ ಮುಚ್ಚಿದಂತೆಯೇ.
ಐಪಿಎಲ್ ಇತಿಹಾಸದಲ್ಲಿ ಪ್ರತೀ ಸೀಸನ್ನಲ್ಲಿಯೂ ಪ್ಲೇ ಆಫ್ ಪ್ರವೇಶಿಸಿದ ಏಕಮಾತ್ರ ತಂಡವೆಂದರೆ ಅದು ಚೆನ್ನೈ ಸೂಪರ್ ಕಿಂಗ್ಸ್. ಇಂಥ ಬಲಿಷ್ಠ ತಂಡ ಈ ಬಾರಿ ಬೇಗನೆ ಟೂರ್ನಿಯಿಂದ ಹೊರ ಬೀಳುತ್ತಿರುವುದು ಸಿಎಸ್ಕೆ ಅಭಿಮಾನಿಗಳಿಗೆ ಬೇಸರವುಂಟು ಮಾಡಿದೆ.
💛🙏🏻 pic.twitter.com/beoQX3aOuR
— Sakshi Singh 🇮🇳❤️ (@SaakshiSRawat) October 25, 2020
ಸಿಎಸ್ಕೆ ನಾಯಕ ಎಂಎಸ್ ಧೋನಿಯ ಪತ್ನಿ ಸಾಕ್ಷಿ ಧೋನಿ ಕೂಡ ಸಾಮಾಜಿಕ ತಾಲತಾಣಗಳಲ್ಲಿ ಭಾವನಾತ್ಮಕ ಕವಿತೆ ಪೋಸ್ಟ್ ಮಾಡಿದ್ದಾರೆ. ಸಾಕ್ಷಿಯ ಹಾಕಿರುವ ಪೋಸ್ಟ್ನಲ್ಲಿ,
'ಇದು ಬರೀ ಆಟ..
ಕೆಲವು ನೀನು ಗೆಲ್ಲಬಹುದು ಕೆಲವು ನೀನು ಸೋಲಬಹುದು!!
ಕಳೆದ ವರ್ಷಗಳು ಅನೇಕ ರೋಚಕ ಗೆಲುವುಗಳಿಗೆ ಸಾಕ್ಷಿಯಾಗಿವೆ
ಇನ್ನು ಕೆಲವು ಸೋಲಿನ ಸಂಕಟ ತಂದಿವೆ
ಒಂದರಲ್ಲಿ ಗೆದ್ದರೆ ಮತ್ತೊಂದರಲ್ಲಿ ಹೃದಯ ಛಿತ್ರವಾಗುವ ನೋವು!!
ಕೆಲವು ಪ್ರಮುಖ ಪ್ರತಿಕ್ರಿಯೆಗಳಾಗಿದ್ದರೆ ಇನ್ನು ಕೆಲವು ಹಾಗಿರೋಲ್ಲ
ಕೆಲವು ಗೆಲ್ಲುತ್ತೇವೆ, ಕೆಲವು ಸೋಲುತ್ತೇವೆ, ಕೆಲವು ಕಳೆದುಕೊಳ್ಳುತ್ತೇವೆ.. ಇದು ಬರೀ ಆಟ..!! ಎಂದು ಬರೆದುಕೊಂಡಿದ್ದಾರೆ.