ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈ ಇಂಡಿಯನ್ಸ್ ವೇಳಾಪಟ್ಟಿ, ತಂಡದ ಪ್ಲಸ್-ಮೈನಸ್ ಅಂಶಗಳು

IPL 2020: Mumbai Indians full Schedule, details

ಬೆಂಗಳೂರು: ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿ ಆರಂಭಗೊಳ್ಳಲಿದೆ. ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಕಳೆದ ಬಾರಿಯ ರನ್ನರ್ಸ್ ಚೆನ್ನೈ ಸೂಪರ್ ಕಿಂಗ್ಸ್ ಕಾದಾಡಲಿವೆ. ಯುಎಇಯ ದುಬೈ, ಶಾರ್ಜಾ, ಅಬುಧಾಬಿ ತಾಣಗಳಲ್ಲಿ ಪಂದ್ಯಗಳು ನಡೆಯಲಿವೆ. ಭಾರತೀಯ ಕಾಲಮಾನ 7.30 pm ಮತ್ತು 3.30 pmಗೆ ಪಂದ್ಯಗಳು ನಡೆಯಲಿವೆ. ದಿನಕ್ಕೆರಡು ಪಂದ್ಯಗಳಿದ್ದಾಗ ಮಾತ್ರ ಮೊದಲ ಪಂದ್ಯ 3.30 pm ಆರಂಭವಾಗಲಿದೆ.

ಯುವರಾಜ್ ವಿಚಾರದಲ್ಲೂ ಬಿಸಿಸಿಐ ತಾಂಬೆ ನಿಯಮ ಅನುಸರಿಸುತ್ತಾ?!ಯುವರಾಜ್ ವಿಚಾರದಲ್ಲೂ ಬಿಸಿಸಿಐ ತಾಂಬೆ ನಿಯಮ ಅನುಸರಿಸುತ್ತಾ?!

ಐಪಿಎಲ್ ಇತಿಹಾಸ ಗಮನಿಸಿದರೆ, ಭಾರತದ ನಿಯಮಿತ ಓವರ್‌ಗಳ ಕ್ರಿಕೆಟ್‌ನ ಉಪನಾಯಕ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಅತೀ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿದೆ. ಎಂಐ ಒಟ್ಟು 4 ಬಾರಿ ಟ್ರೋಫಿ ಗೆದ್ದಿದ್ದರೆ, ಭಾರತದ ಮಾಜಿ ನಾಯಕ ಎಂಎಸ್ ಧೋನಿ ಕ್ಯಾಪ್ಟನ್ಸಿಯ ಸಿಎಸ್‌ಕೆ 3 ಬಾರಿ ಚಾಂಪಿಯನ್ಸ್ ಆಗಿ ಮಿನುಗಿದೆ.

ಐಪಿಎಲ್ 2020ರ ಗೀತೆ ಕಾಪೀನಾ?: ಬಿಸಿಸಿಐ ವಿರುದ್ಧ ರ್‍ಯಾಪರ್ ಕೃಷ್ಣ ಗರಂ!ಐಪಿಎಲ್ 2020ರ ಗೀತೆ ಕಾಪೀನಾ?: ಬಿಸಿಸಿಐ ವಿರುದ್ಧ ರ್‍ಯಾಪರ್ ಕೃಷ್ಣ ಗರಂ!

ಬಿಸಿಸಿಐಯು 2020ರ ಐಪಿಎಲ್‌ನ ಲೀಗ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಮುಂಬೈಯ ಸಂಪೂರ್ಣ ವೇಳಾಪಟ್ಟಿ, ತಂಡದ ಪ್ಲಸ್-ಮೈನಸ್ ಪಾಯಿಂಟ್ಸ್‌, ಪ್ರಮುಖ ಮಾಹಿತಿಗಳು ಇಲ್ಲಿವೆ.

ಪ್ಲಸ್ ಪಾಯಿಂಟ್ಸ್‌

ಪ್ಲಸ್ ಪಾಯಿಂಟ್ಸ್‌

ಮುಂಬೈ ಇಂಡಿಯನ್ಸ್ ಪ್ರಮುಖ ಪ್ಲಸ್ ಪಾಯಿಂಟ್ ಅಂದರೆ ಬಲಿಷ್ಠ ಆಟಗಾರರು. ಅದರಲ್ಲೂ ಟಿ20ಗೆ ಬೇಕಾದ ಅಪಾಯಕಾರಿ ಆಟಗಾರರು ಎಂಐನಲ್ಲಿದ್ದಾರೆ. ರೋಹಿತ್ ಶರ್ಮಾ, ಕೀರನ್ ಪೊಲಾರ್ಡ್, ಜಸ್‌ಪ್ರೀತ್‌ ಬೂಮ್ರಾ, ಕ್ವಿಂಟನ್ ಡಿ ಕಾಕ್, ಹಾರ್ದಿಕ್ ಪಾಂಡ್ಯ, ಕ್ರಿಸ್ ಲಿನ್ ಇಂಥ ಪ್ರತಿಭಾನ್ವಿತರಿದ್ದಾರೆ. ಅನುಭವಿಗಳು, ಯುವ ಬೌಲರ್‌ಗಳು, ಬೌಲಿಂಗ್-ಬ್ಯಾಟಿಂಗ್-ಫೀಲ್ಡಿಂಗ್ ಎಲ್ಲಾ ವಿಚಾರದಲ್ಲೂ ಮುಂಬೈ ಬಲಿಷ್ಠವಾಗಿದೆ. ಮುಖ್ಯವಾಗಿ ತಂಡದಲ್ಲಿ ಫಲಿತಾಂಶ ತಿರುಗಿಸಬಲ್ಲ ಆಲ್ ರೌಂಡರ್‌ಗಳು ಹೆಚ್ಚಿದ್ದಾರೆ.

ಮೈನಸ್ ಪಾಯಿಂಟ್

ಮೈನಸ್ ಪಾಯಿಂಟ್

ಮುಂಬೈ ಇಂಡಿಯನ್ಸ್ ಪ್ರಮುಖ ಬಲವಾಗಿದ್ದ ಶ್ರೀಲಂಕಾ ವೇಗಿ ಲಸಿತ್ ಮಾಲಿಂಗ ಈ ಬಾರಿ ಐಪಿಎಲ್‌ನಲ್ಲಿ ಆಡುತ್ತಿಲ್ಲ. ಇದು ಎಂಐಗೆ ಪ್ರಮುಖ ಹಿನ್ನಡೆ. ಮಾಲಿಂಗ ಬದಲಿಗೆ ಆಸ್ಟ್ರೇಲಿಯಾ ವೇಗಿ ಜೇಮ್ಸ್ ಪ್ಯಾಟಿನ್ಸನ್ ಅವರನ್ನು ತಂಡದಲ್ಲಿ ಹೆಸರಿಸಲಾಗಿದೆ. ಟೂರ್ನಿಯ ಆರಂಭದ ಪಂದ್ಯಗಳಲ್ಲಿ ಸೋಲುತ್ತಾ ಹೋಗಿ ಕಡೇಯ ಪ್ರಮುಖ ಪಂದ್ಯಗಳಲ್ಲಿ ಪ್ಲೇ ಆಫ್‌ಗೆ ಪ್ರವೇಶಿಸಲು ಪರದಾಡೋದು ಮುಂಬೈಯ ಮುಖ್ಯ ಮೈನಸ್ ಪಾಯಿಂಟ್. ಉಳಿದಂತೆ ತಂಡ ಉತ್ತಮವಾಗಿದೆ.

ಎಂಐ ತಂಡ (ಅಪ್‌ ಡೇಟೆಡ್)

ಎಂಐ ತಂಡ (ಅಪ್‌ ಡೇಟೆಡ್)

ರೋಹಿತ್ ಶರ್ಮಾ, (ಬ್ಯಾಟ್ಸ್‌ಮನ್), ಆದಿತ್ಯ ತಾರೆ (ವಿಕೆಟ್ ಕೀಪರ್), ಅನ್ಮೋಲ್‌ಪ್ರೀತ್ ಸಿಂಗ್ (ಬ್ಯಾಟ್ಸ್‌ಮನ್), ಅನುಕೂಲ್‌ ರಾಯ್ (ಆಲ್‌ ರೌಂಡರ್), ಕ್ರಿಸ್ ಲಿನ್ (ಬ್ಯಾಟ್ಸ್‌ಮನ್, ಆಸ್ಟ್ರೇಲಿಯಾ), ಧವಳ್ ಕುಲಕರ್ಣಿ (ಬೌಲರ್), ದಿಗ್ವಿಜಯ್ ದೇಶ್‌ಮುಖ್ (ಬೌಲರ್), ಹಾರ್ದಿಕ್ ಪಾಂಡ್ಯ (ಆಲ್ ರೌಂಡರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಜಸ್‌ಪ್ರೀತ್‌ ಬೂಮ್ರಾ (ಬೌಲರ್), ಜಯಂತ್ ಯಾದವ್ (ಬೌಲರ್), ಕೀರನ್ ಪೊಲಾರ್ಡ್ (ಆಲ್ ರೌಂಡರ್, ವೆಸ್ಟ್ ಇಂಡೀಸ್), ಕೃನಾಲ್ ಪಾಂಡ್ಯ (ಆಲ್ ರೌಂಡರ್), ಮಿಚೆಲ್ ಮೆಕ್ಲೆನಾಘನ್ (ಬೌಲರ್, ನ್ಯೂಜಿಲೆಂಡ್), ಮೋಹ್ಸಿನ್ ಖಾನ್ (ಬ್ಯಾಟ್ಸ್‌ಮನ್), ನಾಥನ್ ಕೌಲ್ಟರ್-ನೈಲ್ (ಬೌಲರ್, ಆಸ್ಟ್ರೇಲಿಯಾ), ಪ್ರಿನ್ ಬಲವಂತ್ ರಾಯ್ (ಆಲ್ ರೌಂಡರ್), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಾಹುಲ್ ಚಹಾರ್ (ಬೌಲರ್), ಸೌರಭ್ ತಿವಾರಿ (ಬ್ಯಾಟ್ಸ್‌ಮನ್), ಶರ್ಫೇನ್ ರುದಫೋರ್ಡ್ (ಬ್ಯಾಟ್ಸ್‌ಮನ್, ವೆಸ್ಟ್ ಇಂಡೀಸ್), ಸೂರ್ಯಕುಮಾರ್ ಯಾದವ್ (ಬ್ಯಾಟ್ಸ್‌ಮನ್), ಟ್ರೆಂಟ್ ಬೌಲ್ಟ್ (ಬೌಲರ್, ನ್ಯೂಜಿಲೆಂಡ್).

ಮುಂಬೈ ಸಂಪೂರ್ಣ ವೇಳಾಪಟ್ಟಿ

ಮುಂಬೈ ಸಂಪೂರ್ಣ ವೇಳಾಪಟ್ಟಿ

* ಸೆಪ್ಟೆಂಬರ್ 19, ಶನಿವಾರ, ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್, 7:30 PM, ಅಬುಧಾಬಿ
* ಸೆಪ್ಟೆಂಬರ್ 23, ಬುಧವಾರ, ಕೋಲ್ಕತಾ ನೈಟ್ ರೈಡರ್ಸ್ vs ಮುಂಬೈ ಇಂಡಿಯನ್ಸ್, 7:30 PM, ಅಬುಧಾಬಿ
* ಸೆಪ್ಟೆಂಬರ್ 28, ಸೋಮವಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್, 7:30 PM, ದುಬೈ
* ಅಕ್ಟೋಬರ್ 1, ಗುರುವಾರ, ಕಿಂಗ್ಸ್ ಇಲೆವೆನ್ ಪಂಜಾಬ್ vs ಮುಂಬೈ ಇಂಡಿಯನ್ಸ್, 7:30 PM, ಅಬುಧಾಬಿ
* ಅಕ್ಟೋಬರ್ 4, ಭಾನುವಾರ, ಮುಂಬೈ ಇಂಡಿಯನ್ಸ್ vs ಸನ್‌ರೈಸರ್ಸ್ ಹೈದರಾಬಾದ್, 3.30 PM, ಶಾರ್ಜಾ
* ಅಕ್ಟೋಬರ್ 6, ಮಂಗಳವಾರ, ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್, 7.30 PM, ಅಬುಧಾಬಿ
* ಅಕ್ಟೋಬರ್ 11, ಭಾನುವಾರ, ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್, 7.30 PM, ಅಬುಧಾಬಿ
* ಅಕ್ಟೋಬರ್ 16, ಶುಕ್ರವಾರ, ಮುಂಬೈ ಇಂಡಿಯನ್ಸ್ vs ಕೋಲ್ಕತಾ ನೈಟ್ ರೈಡರ್ಸ್, 7.30 PM, ಅಬುಧಾಬಿ
* ಅಕ್ಟೋಬರ್ 18, ಭಾನುವಾರ, ಮುಂಬೈ ಇಂಡಿಯನ್ಸ್ vs ಕಿಂಗ್ಸ್ ಇಲೆವೆನ್ ಪಂಜಾಬ್, 7.30 PM, ದುಬೈ
* ಅಕ್ಟೋಬರ್ 23, ಶುಕ್ರವಾರ, ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್, 7.30 PM, ಶಾರ್ಜಾ
* ಅಕ್ಟೋಬರ್ 25, ಭಾನುವಾರ, ರಾಜಸ್ಥಾನ್ ರಾಯಲ್ಸ್ Vs ಮುಂಬೈ ಇಂಡಿಯನ್ಸ್, 7.30 PM, ಅಬುಧಾಬಿ
* ಅಕ್ಟೋಬರ್ 28, ಬುಧವಾರ, ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, 7.30 PM, ಅಬುಧಾಬಿ
* ಅಕ್ಟೋಬರ್ 31, ಶನಿವಾರ, ದೆಹಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್, 3.30 PM, ದುಬೈ
* ನವೆಂಬರ್ 3, ಮಂಗಳವಾರ, ಮುಂಬೈ ಇಂಡಿಯನ್ಸ್ vs ಸನ್‌ರೈಸರ್ಸ್ ಹೈದರಾಬಾದ್, 7.30 PM, ಶಾರ್ಜಾ

Story first published: Saturday, September 12, 2020, 18:08 [IST]
Other articles published on Sep 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X