ಅಭಿಮಾನಿಗಳನ್ನ ಗೊಂದಲಕ್ಕೀಡುಮಾಡಿದ ರೋಹಿತ್ ಶರ್ಮಾ ಫೋಟೋ

ರೋಹಿತ್ ಶರ್ಮಾ ಸೋಮವಾರ ಸಂಜೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದ್ದರು. ಇದಕ್ಕೆ ಕಾರಣ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಿದ್ದು, ಮೂರು ಸ್ವರೂಪದ ಕ್ರಿಕೆಟ್‌ನಲ್ಲಿ ಅವರಿಗೆ ಸ್ಥಾನ ಸಿಕ್ಕಿಲ್ಲ.

ಸುನಿಶ್‌ ಜೋಶಿ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಎಲ್ಲಾ ಮೂರು ಸ್ವರೂಪಗಳಲ್ಲಿ ತಂಡವನ್ನು ಆಯ್ಕೆ ಮಾಡಿತು. ಆದರೆ ಮೂರು ಸ್ವರೂಪದ ತಂಡದಲ್ಲಿ ರೋಹಿತ್ ಶರ್ಮಾ ಕಾಣಿಸದೇ ಇರುವುದು ಹಿಟ್‌ಮ್ಯಾನ್ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿತು.

ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್ ಇಂಡಿಯಾ ಆಯ್ಕೆ: ಟಿ20, ಏಕದಿನ, ಟೆಸ್ಟ್ ತಂಡದ ಸಂಪೂರ್ಣ ವಿವರ

ಗಾಯದಿಂದ ಬಳಲುತ್ತಿರುವ ಹಿಟ್‌ಮ್ಯಾನ್

ಗಾಯದಿಂದ ಬಳಲುತ್ತಿರುವ ಹಿಟ್‌ಮ್ಯಾನ್

ಮಂಡಿರಜ್ಜು ಗಾಯದಿಂದಾಗಿ ಪ್ರಸ್ತುತ ಯುಎಇನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಪರ ಕೊನೆಯ ಎರಡು ಪಂದ್ಯಗಳನ್ನು ಅವರು ತಪ್ಪಿಸಿಕೊಂಡರು.

ತನ್ನ ವೈದ್ಯಕೀಯ ತಂಡವು ರೋಹಿತ್ ಶರ್ಮಾ ಮತ್ತು ಇಶಾಂತ್ ಶರ್ಮಾ ಅವರ ಫಿಟ್ನೆಸ್ ಅನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ತಂಡಗಳು ಘೋಷಿಸಿದ ಕೂಡಲೇ ಬಿಸಿಸಿಐ ಕೂಡ ಟ್ವೀಟ್ ಮಾಡಿದೆ.

ಅಭಿಮಾನಿಗಳನ್ನ ಗೊಂದಲಕ್ಕೀಡುಮಾಡಿದ ಟ್ವೀಟ್

ಆದರೆ ಇದರ ನಡುವೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಆಸೀಸ್ ಪ್ರವಾಸಕ್ಕೆ ಇಲ್ಲವಲ್ಲ ಎಂಬ ಆಘಾತ ಅಭಿಮಾನಿಗಳಲ್ಲಿ ಕಾಡುತ್ತಿರುವ ನಡುವೆ ಮುಂಬೈ ಇಂಡಿಯನ್ಸ್‌ನ ಇತ್ತೀಚಿನ ಟ್ವಿಟರ್ ಪೋಸ್ಟ್ ಅವರನ್ನು ಗೊಂದಲಕ್ಕೀಡು ಮಾಡಿದೆ. ಮುಂಬೈ ಫ್ರ್ಯಾಂಚೈಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ, ತಮ್ಮ ನಾಯಕ ಬ್ಯಾಟಿಂಗ್‌ನ ಚಿತ್ರವನ್ನು ನೆಟ್‌ಗಳಲ್ಲಿ ಪೋಸ್ಟ್ ಮಾಡಿದ್ದು, ಅದು ಈಗ ಅನೇಕರ ಹುಬ್ಬೇರಿಸುವಂತೆ ಮಾಡಿದೆ.

ಟೆಸ್ಟ್, ಏಕದಿನ , ಟಿ20: 3 ಫಾರ್ಮೆಟ್‌ನಲ್ಲಿ ಸ್ಥಾನ ಪಡೆದ ಟೀಮ್ ಇಂಡಿಯಾ ಆಟಗಾರರು

ರೋಹಿತ್ ಐಪಿಎಲ್ ಆಡೋದಿಲ್ಲ ಎನ್ನಲಾಗಿತ್ತು!

ರೋಹಿತ್ ಐಪಿಎಲ್ ಆಡೋದಿಲ್ಲ ಎನ್ನಲಾಗಿತ್ತು!

ಇನ್ನೂ ಏನೂ ಅಧಿಕೃತವಾಗಿಲ್ಲವಾದರೂ, ರೋಹಿತ್ ಶರ್ಮಾ ಐಪಿಎಲ್ 2020 ರಲ್ಲಿ ಇನ್ನು ಮುಂದೆ ಆಡುವ ಸಾಧ್ಯತೆಯಿಲ್ಲ ಎನ್ನಲಾಗಿತ್ತು. ಬಿಸಿಸಿಐನ ವೈದ್ಯಕೀಯ ತಂಡವು ಅವರ ಗಾಯದ ಬಗ್ಗೆ ಗಮನಹರಿಸುವುದರಿಂದ, ಅವರು ಯಾವುದೇ ರೀತಿಯ ರಿಸ್ಕ್‌ ತೆಗೆದುಕೊಳ್ಳಲು ಅವರು ಅನುಮತಿಸದಿರಬಹುದು. ಏಕೆಂದರೆ ಇದು ಆಸ್ಟ್ರೇಲಿಯಾದಲ್ಲಿ ಕಾಣಿಸಿಕೊಳ್ಳುವ ಅವಕಾಶಗಳಿಗೆ ಅಡ್ಡಿಯಾಗುತ್ತದೆ. ಇದರ ನಡುವೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ತಂಡದಲ್ಲಿ ಅವರಿಗೆ ಸ್ಥಾನವನ್ನು ಸಹ ನೀಡಿಲ್ಲ

ರೋಹಿತ್ ಇಲ್ಲದಿದ್ದರೆ ಮುಂಬೈಗೆ ದೊಡ್ಡ ಹೊಡೆತ

ರೋಹಿತ್ ಇಲ್ಲದಿದ್ದರೆ ಮುಂಬೈಗೆ ದೊಡ್ಡ ಹೊಡೆತ

ರೋಹಿತ್ ಶರ್ಮಾ ಕಿಂಗ್ಸ್ ಇಲೆವೆನ್ ಪಂಜಾಬ್ (ಕೆಎಕ್ಸ್‌ಐಪಿ) ವಿರುದ್ಧದ ಪಂದ್ಯದಲ್ಲಿ ಗಾಯಗೊಂಡರು, ಅದು ಡಬಲ್ ಸೂಪರ್ ಓವರ್‌ನಿಂದ ಕೊನೆಗೊಂಡಿತು ಮತ್ತು ಪಂದ್ಯದ ನಂತರದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಮತ್ತು ರಾಜಸ್ಥಾನ್ ರಾಯಲ್ಸ್ (ಆರ್ಆರ್) ವಿರುದ್ಧದ ಪಂದ್ಯದಲ್ಲೂ ಅವರು ಮೈದಾನಕ್ಕಿಳಿಯಲಿಲ್ಲ.

ಈ ಸೀಸನ್‌ನಲ್ಲಿ ಅಸಾಧಾರಣ ಕ್ರಿಕೆಟ್ ಆಡುತ್ತಿರುವ ಮತ್ತು ಏಳು ಗೆಲುವುಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿರುವ ಮುಂಬೈಗೆ ಇದು ದೊಡ್ಡ ಹೊಡೆತವಾಗಿದೆ. ಕೀರನ್ ಪೊಲಾರ್ಡ್ ಪ್ರಸ್ತುತ ತಂಡವನ್ನ ಮುನ್ನಡೆಸುತ್ತಿದ್ದು, ರೋಹಿತ್ ಶರ್ಮಾ ಅವರ ಸ್ಥಾನದಲ್ಲಿ ಇಶಾನ್ ಕಿಶನ್ ಇನ್ನಿಂಗ್ಸ್ ತೆರೆದಿದ್ದಾರೆ. ಅವರ ನಾಯಕ ಐಪಿಎಲ್‌ನಿಂದ ಹೊರಗುಳಿದಿದ್ದಾರೆಯೇ ಅಥವಾ ಮುಂದಿನ ಕೆಲವು ದಿನಗಳಲ್ಲಿ ರೋಹಿತ್ ಫಿಟ್ ಆಗುವುದರೊಂದಿಗೆ ಐಪಿಎಲ್ ಮತ್ತು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುತ್ತಾರೆಯೇ ಎಂಬುದು ಕುತೂಹಲಕಾರಿಯಾಗಿದೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, October 27, 2020, 8:45 [IST]
Other articles published on Oct 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X