ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ರಾಜಸ್ಥಾನ್‌ಗೆ 196 ರನ್‌ಗಳ ಬೃಹತ್ ಟಾರ್ಗೆಟ್ ನೀಡಿದ ಮುಂಬೈ

ipl 2020: Mumbai Indians set big target for Rajsthan Royals

ಐಪಿಎಲ್‌ನ 45ನೇ ಪಂದ್ಯ ಮುಂಬೈ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯುತ್ತಿದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಬೃಹತ್ ಗುರಿಯನ್ನು ರಾಜಸ್ಥಾನ್ ಮುಂದಿಟ್ಟಿದೆ. ಅಂತಿಮ ಹಂತದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಹಾರ್ದಿಕ್ ಪಾಂಡ್ಯ ತಂಡದ ಮೊತ್ತ 195ಕ್ಕೆ ಏರಲು ಕಾರಣರಾದರು.

ಟಾಸ್ ಗೆದ್ದು ಮೊದಲುಗೆ ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್‌ಗೆ ಉತ್ತಮ ಆರಂಭ ದೊರೆಯಲಿಲ್ಲ. ಕ್ವಿಂಟನ್ ಡಿಕಾಕ್ 6 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಎರಡನೇ ವಿಕೆಟ್‌ಗೆ 83 ರನ್‌ಗಳ ಉತ್ತಮ ಜೊತೆಯಾಟ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಕಡೆಯಿಂದ ಬಂದಿತು.

ಸೋಲಿನ ಬಳಿಕವೂ ನಾವು ಆತ್ಮವಿಶ್ವಾಸ ಹೊಂದಿದ್ದೇವೆ ಎಂದ ಆರ್‌ಸಿಬಿ ನಾಯಕ ಕೊಹ್ಲಿಸೋಲಿನ ಬಳಿಕವೂ ನಾವು ಆತ್ಮವಿಶ್ವಾಸ ಹೊಂದಿದ್ದೇವೆ ಎಂದ ಆರ್‌ಸಿಬಿ ನಾಯಕ ಕೊಹ್ಲಿ

ಮುಂಬೈ ಇನ್ನಿಂಗ್ಸ್‌ನ ಮಧ್ಯ ಬಾಗದಲ್ಲಿ ಸಣ್ಣ ಕುಸಿತಕ್ಕೆ ಒಳಗಾಯಿತು. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಇಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್ ಜೊತೆಗೆ ನಾಯಕ ಕಿರಾನ್ ಪೊಲಾರ್ಡ್ ಕೂಡ ಹತ್ತು ರನ್‌ಗಳ ಅಂತರದಲ್ಲಿ ವಿಕೆಟ್ ಒಪ್ಪಿಸಿದರು.

ಆದರೆ ಬಳಿಕ ಸೌರಬ್ ತಿವಾರಿಯನ್ನು ಕೂಡಿಕೊಂಡ ಹಾರ್ದಿಕ್ ಪಾಂಡ್ಯ ಮಿಂಚು ಹರಿಸಿದರು. 160-170ರ ಮಧ್ಯೆ ಗುರಿ ನೀಡಬಹುದು ಎಂಬ ಪರಿಸ್ಥಿತಿಯಿಂದ ಪಾಂಡ್ಯ ರನ್ ವೇಗವನ್ನು ಇನ್ನಿಲ್ಲದ ವೇಗ ಹೆಚ್ಚಿಸುವಲ್ಲಿ ಯಶಸ್ವಿಯಾದರು. ನಿಗದಿತ 20 ಓವರ್‌ಗಳಲ್ಲಿ 195 ರನ್ ಗಳಿಸಿಲು ಕಾರಣರಾದರು.

ಐಪಿಎಲ್ 2020: ಹಸಿರು ಜರ್ಸಿಯಲ್ಲಿ ಆರ್‌ಸಿಬಿಗೆ ಗೆಲುವಿಗಿಂತ ಸೋಲೇ ಹೆಚ್ಚು!ಐಪಿಎಲ್ 2020: ಹಸಿರು ಜರ್ಸಿಯಲ್ಲಿ ಆರ್‌ಸಿಬಿಗೆ ಗೆಲುವಿಗಿಂತ ಸೋಲೇ ಹೆಚ್ಚು!

ಇಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕೇವಲ 21 ಎಸೆತಗಳನ್ನು ಎದುರಿಸಿದ್ದು ಭರ್ಜರಿ 60 ರನ್ ಬಾರಿಸಿದರು. ಇದರಲ್ಲಿ ಬರೊಬ್ಬರಿ 7 ಸಿಕ್ಸರ್ ಹಾಗೂ 2 ಬೌಂಡರಿ ಒಳಗೊಂಡಿತ್ತು. 285.71ರ ಸರಾಸರಿಯಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟ್ ಬೀಸಿ ರಾಜಸ್ಥಾನ್ ರಾಯಲ್ಸ್ ತಂಡದ ಲೆಕ್ಕಾಚಾರವನ್ನು ಉಲ್ಟಾಮಾಡಿದರು.

Story first published: Sunday, October 25, 2020, 21:40 [IST]
Other articles published on Oct 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X