ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವರುಣ್ ಚಕ್ರವರ್ತಿ ಮೇಲೆ ಮೀಮ್ಸ್ ಮಾಡಿದ ನಾಗ್ಪುರ್ ಪೊಲೀಸರು

ಐಪಿಎಲ್ 2020ರಲ್ಲಿ ದಿನೇಶ್ ಕಾರ್ತಿಕ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ದೆಹಲಿ ಕ್ಯಾಪಿಟಲ್ಸ್ ವಿರುದ್ಧ 18 ರನ್‌ಗಳ ಸೋಲು ಅನುಭವಿಸಿದ್ದು ಗೊತ್ತಿರಬಹುದು. ಶಾರ್ಜಾದಲ್ಲಿ ನಡೆದ ಈ ಪಂದ್ಯದಲ್ಲಿ ಕೆಕೆಆರ್ ಪರ ಆಡಿದ ಸ್ಪಿನ್ನರ್ ವರುಣ್ ಚಕ್ರವರ್ತಿ ಹಾವ ಭಾವ, ದೊಡ್ಡದಾಗಿ ಕಣ್ಬಿಡುವುದು ನಾಗ್ಪುರ ಪೊಲೀಸರ ಕಣ್ಣಿಗೆ ಬಿದ್ದಿದೆ. ವರುಣ್ ಬಳಸಿಕೊಂಡು ಮೀಮ್ಸ್ ಮಾಡಿ ಜನ ಜಾಗೃತಿ ಮೂಡಿಸಿ ಮನಗೆದ್ದಿದ್ದಾರೆ.

ಅಂದಿನ ಪಂದ್ಯದಲ್ಲಿ ಉಭಯ ತಂಡಗಳು 200 ರನ್‌ಗಳ ಗಡಿ ದಾಟಿದ್ದವು, ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿಯ ಯುವ ಬ್ರಿಗೇಡ್ ತಮ್ಮ ನಾಯಕನ ಅದ್ಭುತ ಬ್ಯಾಟಿಂಗ್ ಸಾಮರ್ಥ್ಯದ ಮೇಲೆ ದೊಡ್ಡ ಸ್ಕೋರ್ ಮಾಡಿತು. ಶ್ರೇಯಸ್ ಅಯ್ಯರ್ 38 ಎಸೆತಗಳಲ್ಲಿ 88 ರನ್ ಚೆಚ್ಚಿದರು. ರಿಷಭ್ ಪಂತ್ ಕೂಡ 17 ಎಸೆತಗಳಲ್ಲಿ 38 ರನ್ ಗಳಿಸಿ ಗಮನ ಸೆಳೆದರು. ಕ್ಯಾಪಿಟಲ್ಸ್ ಸ್ಕೋರ್‌ಬೋರ್ಡ್‌ನಲ್ಲಿ ಒಟ್ಟು 228 ರನ್ ಗಳಿಸಿತು.

ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ

ಇದಕ್ಕೆ ಪ್ರತಿಕ್ರಿಯೆಯಾಗಿ, ಕೆಕೆಆರ್ ರನ್-ಚೇಸ್ ಆರಂಭದಲ್ಲಿ ನಿತೀಶ್ ರಾಣಾ ಅವರ ಅರ್ಧಶತಕ ಗಳಿಸಿದರೆ, ಇಯಾನ್ ಮೋರ್ಗಾನ್-ರಾಹುಲ್ ತ್ರಿಪಾಠಿ ಜೋಡಿ ಗೆಲುವಿನ ಭರವಸೆಯನ್ನು ಹೆಚ್ಚಿಸಿತ್ತು. ಆದರೆ, ಅಂತಿಮ ಎರಡು ಓವರ್‌ಗಳನ್ನು ಗೆಲ್ಲಲು ಕೆಕೆಆರ್‌ಗೆ 31 ರನ್‌ಗಳ ಅಗತ್ಯವಿತ್ತು ಆದರೆ ಅಂತಿಮವಾಗಿ ಡಿಸಿ 18 ರನ್‌ಗಳಿಂದ ಸೋಲು ಕಂಡಿತು.

ಚಕ್ರವರ್ತಿ ಪಾಲಿಗೆ ಕೆಟ್ಟ ದಿನವಾಗಿತ್ತು

ಚಕ್ರವರ್ತಿ ಪಾಲಿಗೆ ಕೆಟ್ಟ ದಿನವಾಗಿತ್ತು

ಮೊದಲ ಇನ್ನಿಂಗ್ಸ್ ಸಮಯದಲ್ಲಿ, ವರುಣ್ ಚಕ್ರವರ್ತಿ ಸೇರಿದಂತೆ ಕೆಕೆಆರ್ ಬೌಲರ್‌ಗಳನ್ನು ಶಾರ್ಜಾದಲ್ಲಿ ಡೆಲ್ಲಿ ಬ್ಯಾಟ್ಸ್ ಮನ್ ಗಳು ದಂಡಿಸಿದರು. ಲೆಗ್ ಬ್ರೇಕ್ ಬೌಲರ್ ತನ್ನ ನಾಲ್ಕು ಓವರ್‌ಗಳಲ್ಲಿ 49 ರನ್ ಚೆಚ್ಚಿಸಿಕೊಂಡರು. 12 ನೇ ಓವರ್‌ನಲ್ಲಿ ಚಕ್ರವರ್ತಿಬೌಲಿಂಗ್ ಮಾಡುವಾಗ ನೀಡಿದ ಹಾವ ಭಾವ,ಸಾಮಾಜಿಕ ಜಾಲತಾಣದಲ್ಲಿ ಹಿಟ್ ಆಗಿದೆ.

ನಾಗ್ಪುರ ಪೊಲೀಸರ ಟ್ವೀಟ್

ನಾಗ್ಪುರ ಪೊಲೀಸರ ಟ್ವೀಟ್

ನಾಗ್ಪುರ ಪೊಲೀಸರು ವರುಣ್ ಚಿತ್ರ ಬಳಸಿ ಟ್ವೀಟ್ ಮಾಡಿದ್ದರು. ಚಕ್ರವರ್ತಿಯವರ ಅದ್ಭುತ ಚಿತ್ರಕ್ಕೆ ಸಾರ್ವಜನಿಕರು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ, ಹಾಸ್ಯದ ಟ್ವೀಟ್‌ಗಳ ಮೂಲಕ ಜನ ಜಾಗೃತಿಗೆ ನಾಗ್ಪುರ ನಗರ ಪೊಲೀಸರು ಹೆಸರುವಾಸಿಯಾಗಿದ್ದಾರೆ. ಒಟಿಪಿ ವಂಚನೆಯ ಬಗ್ಗೆ ಜಾಗೃತಿ ಹಂಚಿಕೊಳ್ಳಲು ಟ್ವಿಟರ್‌ನಲ್ಲಿ ಸ್ಪಿನ್ನರ್‌ನ ಫೋಟೋವನ್ನು ಬಳಸಿದ್ದಾರೆ. "ಮುಖ್ಯ ಕಚೇರಿಯ ಬ್ಯಾಂಕ್ ಉದ್ಯೋಗಿ ಎಂದು ಕರೆ ಬಂದಾಗ, ನೀವು ಒಟಿಪಿಯನ್ನು ಹಂಚಿಕೊಂಡಾಗ" - ಎಂದು ಬರಹ ಹಾಕಲಾಗಿದೆ.

ಚಿತ್ರದ ಕೆಳಗೆ "ನಿಮಗೆ ಬರುವ ಯಾವುದೇ ಕರೆ, ನಿಮ್ಮ ಗೌಪ್ಯ ಮಾಹಿತಿಯನ್ನು ಒಟಿಪಿ, ಸಿವಿವಿ, ಇತ್ಯಾದಿಗಳನ್ನು ಎಂದಿಗೂ ನೀಡಬೇಡಿ" ಎಂದು ಬರೆಯಲಾಗಿದೆ.

ಯುವ ಪ್ರತಿಭೆ ವರುಣ್ ಚಕ್ರವರ್ತಿ

ಯುವ ಪ್ರತಿಭೆ ವರುಣ್ ಚಕ್ರವರ್ತಿ

ಐಪಿಎಲ್ 2020ರ ಹರಾಜಿನಲ್ಲಿ ವರುಣ್ ಚಕ್ರವರ್ತಿಯನ್ನು ಕೋಲ್ಕತಾ ಫ್ರಾಂಚೈಸಿ 4 ಕೋಟಿ ರೂ.ಗೆ ಖರೀದಿಸಿತ್ತು. ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‌ಪಿಎಲ್) ತಾರೆ ಚಕ್ರವರ್ತಿ, 2018 ರಲ್ಲಿ ಮಧುರೈ ಪ್ಯಾಂಥರ್ಸ್ ಪ್ರಶಸ್ತಿಯನ್ನು ಗೆಲ್ಲಲು ಸಹಾಯ ಮಾಡಿದ್ದರು. 2019ರಲ್ಲಿ 7.4 ಕೋಟಿ ಡೀಲ್ ನೊಂದಿಗೆ ಪಂಜಾಬ್ ತಂಡದಲ್ಲಿದ್ದ ವರುಣ್ ರನ್ನು ಹರಾಜಿಗೂ ಮುನ್ನ ತಂಡದಿಂದ ಹರಾಜಿಗೆ ಬಿಡಲಾಗಿತ್ತು. 30 ಲಕ್ಷದ ಮೂಲ ಬೆಲೆಗೆ ಹರಾಜಿಗೆ ನಿಲ್ಲಬೇಕಾಗಿತ್ತು.

ಯುವ ಆಟಗಾರರ ಮೇಲೆ ಟ್ರಾಲ್ ಏಕೆ?

ಉದಯೋನ್ಮುಖ ಆಟಗಾರರ ಮೇಲೆ ಟ್ರಾಲ್ ಏಕೆ?, ನೀವು ಈ ರೀತಿ ಸ್ಟುಪಿಡ್ ಮೀಮ್ಸ್ ಬಿಟ್ಟು, ನಿಮ್ಮ ಕೆಲಸ ಗಂಭೀರವಾಗಿ ಮಾಡಿ ಹಾಗೂ ನಗರದಲ್ಲಿನ ಕ್ರೈಂ ತಡೆಗಟ್ಟಿ .. ಇದರಿಂದ ಎಲ್ಲರಿಗೂ ಉಪಯೋಗ ಇಲ್ಲದಿದ್ದರೆ ನಾಗ್ಪುರ ಸಿಟಿಯೇ ಮೀಮ್ ಅಗಬೇಕಾಗುತ್ತದೆ ಎಂದು ಸುಮಿತ್ ಎಂಬುವರು ಪ್ರತಿಕ್ರಿಯಿಸಿದ್ದಾರೆ.

Story first published: Monday, October 5, 2020, 22:05 [IST]
Other articles published on Oct 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X