ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್2020: ತಂಡಕ್ಕಾಗಿ ನಾನು ಹೆಚ್ಚಿನ ರನ್ ಗಳಿಸಬೇಕಿದೆ: ದಿನೇಶ್ ಕಾರ್ತಿಕ್

Ipl 2020 Need To Up My Game And Get A Few Runs, Says Dinesh Karthik

ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವನ್ನು ಸಾಧಿಸಿದ ಬಳಿಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಪ್ರತಿಕ್ರಿಯಿಸಿದ್ದಾರೆ. ತನ್ನ ಆಟದ ಮಟ್ಟವನ್ನು ಹೆಚ್ಚಿಸುವ ಅಗತ್ಯವಿದೆ. ಈ ಮೂಲಕ ತಂಡಕ್ಕೆ ರನ್‌ಗಳಿಸಿ ನೆರವಾಗಬೇಕಿದೆ ಎಂದು ಹೇಳಿದ್ದಾರೆ.

ಅಬುದಾಭಿಯ ಶೇಕ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ದಿನೇಶ್ ಕಾರ್ತಿಕ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೊಲ್ಕತ್ತಾ ತಂಡ ಹೈದರಾಬಾದ್ ನೀಡಿದ್ದ 143 ರನ್‌ಗಳ ಗುರಿಯನ್ನು ಶುಬ್ಮನ್ ಗಿಲ್ ಹಾಗೂ ಇಯಾನ್ ಮಾರ್ಗನ್ ಅದ್ಭುತ ಆಟದ ನೆರವಿನಿಂದ ಇನ್ನೂ ಎರಡು ಓವರ್‌ಗಳು ಉಳಿದಿರುವಂತೆಯೇ ಗೆದ್ದುಕೊಂಡಿತು.

ಗಿಲ್ ಅರ್ಧ ಶತಕ, ಹೈದರಾಬಾದ್ ವಿರುದ್ಧ ಕೋಲ್ಕತ್ತಾಕ್ಕೆ ಭರ್ಜರಿ ಜಯಗಿಲ್ ಅರ್ಧ ಶತಕ, ಹೈದರಾಬಾದ್ ವಿರುದ್ಧ ಕೋಲ್ಕತ್ತಾಕ್ಕೆ ಭರ್ಜರಿ ಜಯ

ಈ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ತಂಡಕ್ಕೆ ನೆರವಾಗುವಲ್ಲಿ ವಿಫಲರಾದರು. ರಶೀದ್ ಖಾನ್ ಬೌಲಿಂಗ್‌ನಲ್ಲಿ ಯಾವುದೇ ರನ್‌ಗಳಿಸಲು ವಿಫಲರಾಗಿ ದಿನೇಶ್ ಕಾರ್ತಿಕ್ ವಾಪಾಸ್ ಮರಳಿದರು. ಈ ಮೂಲಕ ದಿನೇಶ್ ಕಾರ್ತಿಕ್ ನಿರಾಸೆಯನ್ನು ಅನುಭವಿಸಿದರು. ಆದರೆ ಗಿಲ್ ಹಾಗೂ ಮಾರ್ಗನ್ ಸಮಯೋಚಿತ ಆಟ ತಂಡವನ್ನು ಹಠಾತ್ ಕುಸಿತದಿಂದ ಪಾರು ಮಾಡಿ ಗೆಲುವಿಗೆ ಕಾರಣವಾಯಿತು.

ಆತ ಬ್ಯಾಟಿಂಗ್‌ಗೆ ಹೋಗೋದು ನೋಡಲು ಭಯಾನಕವಾಗಿರುತ್ತೆ: ಡಿಕೆಆತ ಬ್ಯಾಟಿಂಗ್‌ಗೆ ಹೋಗೋದು ನೋಡಲು ಭಯಾನಕವಾಗಿರುತ್ತೆ: ಡಿಕೆ

'ಒಂದು ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸುವುದರಿಂದ ನೀವು ಕೆಟ್ಟ ಆಟಗಾರ ಎಂದು ಸಾಭೀತಾಗುವುದಿಲ್ಲ. ಉತ್ತಮ ಬ್ಯಾಟರ್‌ಗಳು ಅಗ್ರಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎಂಬ ನಿಲುವಿನಲ್ಲಿ ಕೋಚ್ ಮೆಕ್ಕಲಮ್ ಸ್ಪಷ್ಟತೆಯನ್ನು ಹೊಂದಿದ್ದಾರೆ. ನಾನು ಹೆಚ್ಚಿನ ರನ್ ಗಳಿಸಬೇಕಾಗಿದೆ. ನನ್ನ ಆಟವನ್ನು ಎತ್ತರಕ್ಕೇರಿಸಿಕೊಂಡು ತಂಡಕ್ಕೆ ನೆರವಾಗಬೇಕು' ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

53/3 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ನಲ್ಲಿ ಶುಬ್ಮನ್ ಗಿಲ್ ಹಾಗೂ ಇಯಾನ್ ಮಾರ್ಗನ್ ಜೊತೆಯಾದರು. ಆದರೆ ಮುಂದೆ ತಂಡಕ್ಕೆ ಯಾವುದೇ ಆಘಾತವಾಗದಂತೆ ನೋಡಿಕೊಂಡ ಈ ಜೋಡಿ ನಾಲ್ಕನೇ ವಿಕೆಟ್‌ಗೆ 92 ರನ್ ಗಳಿಸಿ ಗೆಲುವನ್ನು ಸಾರಿತ್ತು

Story first published: Sunday, September 27, 2020, 14:32 [IST]
Other articles published on Sep 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X