ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಆರ್‌ಸಿಬಿ ಪಂದ್ಯಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲ್ಲ!?

IPL 2020: No RCB Matches At Chinnaswamy Stadium says source
Karnataka government is request BCCI to postpone IPL bangalore matches

ಬೆಂಗಳೂರು, ಮಾರ್ಚ್ 10: ಮಾರ್ಚ್ 29ರಿಂದ ಭಾರತದ ಅದ್ದೂರಿ ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಗೊಳ್ಳುವುದರಲ್ಲಿದೆ. ಆದರೆ ಅಪಾರ ಸಂಖ್ಯೆಯ ಕ್ರಿಕೆಟ್‌ ಅಭಿಮಾನಿಗಳಿರುವ ಕರ್ನಾಟಕದ ಪಾಲಿಗೆ ನಿರಾಸೆಯ ವಿಚಾರವೊಂದಿದೆ. ಐಪಿಎಲ್‌ನ ಆಕರ್ಷಣೀಯ ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪಂದ್ಯಗಳು ಬೆಂಗಳೂರಿನಲ್ಲಿ ನಡೆಯೋದೆ ಅನುಮಾನ ಎಂಬಂತಾಗಿದೆ.

ಕೊರೊನಾ ಭೀತಿಯಲ್ಲಿ ಐಪಿಎಲ್: ಧೋನಿ ಭವಿಷ್ಯ ಡೋಲಾಯಮಾನಕೊರೊನಾ ಭೀತಿಯಲ್ಲಿ ಐಪಿಎಲ್: ಧೋನಿ ಭವಿಷ್ಯ ಡೋಲಾಯಮಾನ

ಮಾರಕ ಸೋಂಕು ಕೊರೊನಾ ವೈರಸ್‌ನಿಂದಾಗಿ ವಿದೇಶದಲ್ಲೂ ಅನೇಕ ಕ್ರೀಡಾಕೂಟಗಳು, ಪಂದ್ಯಾವಳಿಗಳು ರದ್ದಾಗಿವೆ ಅಥವಾ ಮುಂದೂಡಲ್ಪಟ್ಟಿವೆ. ಕೊರೊನಾ ವೈರಸ್‌ ಭೀತಿ ಭಾರತೀಯ ಕ್ರಿಕೆಟ್‌ಗೂ ತಾಗಿದೆ. ಭಾರತದಲ್ಲಿನ ಕ್ರೀಡಾಕೂಟಗಳೂ ರದ್ದಾಗುವ ಅಥವಾ ಮುಂದೂಡಲ್ಪಡುವ ಅನಿವಾರ್ಯತೆ ಉಂಟಾಗುತ್ತದೆ.

ಭಾರತ vs ದಕ್ಷಿಣ ಆಫ್ರಿಕಾ: ದ.ಆಫ್ರಿಕಾ ಕ್ರಿಕೆಟಿಗರಿಗೆ ಕೋಚ್ ಬೌಚರ್ ಎಚ್ಚರಿಕೆ!ಭಾರತ vs ದಕ್ಷಿಣ ಆಫ್ರಿಕಾ: ದ.ಆಫ್ರಿಕಾ ಕ್ರಿಕೆಟಿಗರಿಗೆ ಕೋಚ್ ಬೌಚರ್ ಎಚ್ಚರಿಕೆ!

ಈಗಿರುವ ಮಾಹಿತಿಯ ಪ್ರಕಾರ, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್‌ಸಿಬಿ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆ ತೀರಾ ಕಮ್ಮಿ ಎನ್ನಲಾಗುತ್ತಿದೆ.

ಕೊರೊನಾ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಸಿಸಿಐ

ಕೊರೊನಾ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಸಿಸಿಐ

ವಿಶ್ವದಾದ್ಯಂತ ಜನರನ್ನು ಆತಂಕಕ್ಕೀಡುವ ಮಾಡಿರುವ ಮಾರಕ ಸೋಂಕು ಕೊರೊನಾ ವೈರಸ್‌ನಿಂದ ಐಪಿಎಲ್‌ಗೆ ಯಾವುದೇ ತೊಂದರೆಯಿಲ್ಲ. ಟೂರ್ನಿ ಯಾವುದೇ ಬದಲಾವಣೆಗಳಿಲ್ಲದೆ ನಿಗದಿತ ದಿನಾಂಕದಂದು ನಡೆಯಲಿದೆ ಎಂದು ಐಪಿಎಲ್ ಆಡಳಿತ ಮಂಡಳಿಯ ಅಧ್ಯಕ್ಷ ಬ್ರಿಜೇಶ್ ಪಟೇಲ್ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಮೊದಲು ಹೇಳಿದ್ದರು.

ಪಂದ್ಯಗಳು ನಡೆಸದಂತೆ ಸರ್ಕಾರ ಪತ್ರ

ಪಂದ್ಯಗಳು ನಡೆಸದಂತೆ ಸರ್ಕಾರ ಪತ್ರ

ಕರ್ನಾಟಕದಲ್ಲೂ ಕೊರೊನಾ ಸೋಂಕಿತರ ಪ್ರಕರಣ ದಾಖಲಾಗಿದ್ದು, ರಾಜ್ಯ ಸರ್ಕಾರ ಐಪಿಎಲ್ ಪಂದ್ಯಗಳನ್ನು ರಾಜ್ಯದಲ್ಲಿ ನಡೆಸದಂತೆ ಬಿಸಿಸಿಐಗೆ ಪತ್ರ ಬರೆದಿದೆ. ಬೆಂಗಳೂರಿನಲ್ಲಿ ನಿಗದಿಯಾಗಿರುವ ಪಂದ್ಯಗಳು ಆರ್‌ಸಿಬಿ ಪಂದ್ಯಗಳು ಮಾತ್ರ. ಹೀಗಾಗಿ ಬೆಂಗಳೂರಿನ ಪಂದ್ಯಗಳು ರದ್ದಾದರೆ, ಆರ್‌ಸಿಬಿ ಪಂದ್ಯಗಳನ್ನು ಕನ್ನಡಿಗರು ಕರ್ನಾಟಕದಲ್ಲಿ ವೀಕ್ಷಿಸುವಂತಿಲ್ಲ.

ಐಪಿಎಲ್ ಪಂದ್ಯ ನಡೆಸಲು ನಿರಾಕರಣೆ

ಐಪಿಎಲ್ ಪಂದ್ಯ ನಡೆಸಲು ನಿರಾಕರಣೆ

ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್, ಸುದ್ದಿಗೋಷ್ಠಿ ನಡೆಸಿ, 'ಐಪಿಎಲ್ ಪಂದ್ಯ ನಡೆಸದಂತೆ ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರ ಸರ್ಕಾರ ಪತ್ರ ಬರೆದಿದೆ. ಮಹಾರಾಷ್ಟ್ರ ಸರ್ಕಾರದಂತೆ ಕರ್ನಾಟಕ ಸರ್ಕಾರವು ಪತ್ರ ಬರೆದಿದ್ದು, ಐಪಿಎಲ್ ಪಂದ್ಯಗಳನ್ನು ಮುಂದೂವಂತೆ ಬಿಸಿಸಿಐಗೆ ಕೇಂದ್ರ ಸರ್ಕಾರ ಸೂಚಿಸುವ ನಿರೀಕ್ಷಿಯಿದೆ, ರಾಜ್ಯದಲ್ಲಿ 982 ಜನ ತಪಾಸಣೆ ಗೆ ಒಳಪಡಿಸಿದ್ದೇವೆ, ಇದರಲ್ಲಿ 92 ಜನರ ಮೇಲೆ ನಿಗಾ ಇಡಲಾಗಿದೆ. ಕೊರೊನಾವೈರಸ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ, ಎಂದಿದ್ದರು.

ಆರ್‌ಸಿಬಿ ಎಷ್ಟು ಪಂದ್ಯಗಳು ಮಿಸ್?

ಆರ್‌ಸಿಬಿ ಎಷ್ಟು ಪಂದ್ಯಗಳು ಮಿಸ್?

ಕರ್ನಾಟಕ ರಾಜ್ಯದಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸದಂತೆ ನಿರ್ಧಾರವಾದರೆ ರಾಜ್ಯದಲ್ಲಿ ನಡೆಯುವ ಒಟ್ಟು 7 ಪಂದ್ಯಗಳನ್ನು ಕ್ರಿಕೆಟ್‌ ಅಭಿಮಾನಿಗಳು ಮಿಸ್‌ ಮಾಡಿಕೊಳ್ಳಲಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಸಲು ನಿರ್ಧರಿಸಲಾಗಿರುವ ಮಾರ್ಚ್ 31 (ಆರ್‌ಸಿಬಿ vs ಕೆಕೆಆರ್), ಏಪ್ರಿಲ್ 7 (ಆರ್‌ಸಿಬಿ vs ಎಸ್‌ಆರ್‌ಎಚ್), ಏಪ್ರಿಲ್ 18 (ಆರ್‌ಸಿಬಿ vs ಆರ್‌ಆರ್), ಏಪ್ರಿಲ್ 22 (ಆರ್‌ಸಿಬಿ vs ಡಿಸಿ), ಮೇ 3 (ಆರ್‌ಸಿಬಿ vs ಕೆXIಪಿ), ಮೇ 14 (ಆರ್‌ಸಿಬಿ vs ಸಿಎಸ್‌ಕೆ), ಮೇ 17ರ (ಆರ್‌ಸಿಬಿ vs ಎಂಐ) ಪಂದ್ಯಗಳು ಮಿಸ್ ಆಗಲಿವೆ.

Story first published: Tuesday, March 10, 2020, 18:23 [IST]
Other articles published on Mar 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X