ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಮಾಧ್ಯಮಗಳಿಗೆ ಸ್ಟೇಡಿಯಂ ಪ್ರವೇಶವಿಲ್ಲ, ಪಂದ್ಯದ ಬಳಿಕ ಸುದ್ದಿಗೋಷ್ಠಿ

IPL 2020: No stadium access for media

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಟೂರ್ನಿ ವೇಳೆ ಮೈದಾನದೊಳಗೆ ಮಾಧ್ಯಮಗಳಿಗೆ ಪ್ರವೇಶವಿಲ್ಲ. ಪಂದ್ಯ ಮುಗಿದ ಬಳಿಕವಷ್ಟೇ ಕಡ್ಡಾಯ ಸುದ್ದಿಗೋಷ್ಠಿ ನಡೆಸಲಾಗುತ್ತದೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಶುಕ್ರವಾರ ಹೇಳಿದೆ.

ಇನ್ನಷ್ಟು ಕನ್ನಡ ಪದಗಳ ಸೇರಿಸಿ 2ನೇ ಬಾರಿಗೆ 'ಥೀಮ್ ಸಾಂಗ್' ಬಿಟ್ಟ ಆರ್‌ಸಿಬಿ!ಇನ್ನಷ್ಟು ಕನ್ನಡ ಪದಗಳ ಸೇರಿಸಿ 2ನೇ ಬಾರಿಗೆ 'ಥೀಮ್ ಸಾಂಗ್' ಬಿಟ್ಟ ಆರ್‌ಸಿಬಿ!

ಕೊರೊನಾವೈರಸ್ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತಾಳಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫ್ರಾಂಚೈಸಿಗಳಿಗೆ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸುವ ಅವಕಾಶ ಇಲ್ಲದಾಗಿದೆ. ಆದರೆ ಪಂದ್ಯ ಮುಗಿದ ಬಳಿಕ ಕಡ್ಡಾಯವಾಗಿ ವರ್ಚುಯಲ್ ಮಾಧ್ಯಮಗೋಷ್ಠಿ ನಡೆಯಲಿದೆ.

ಇನ್ನಷ್ಟು ಕನ್ನಡ ಪದಗಳ ಸೇರಿಸಿ 2ನೇ ಬಾರಿಗೆ 'ಥೀಮ್ ಸಾಂಗ್' ಬಿಟ್ಟ ಆರ್‌ಸಿಬಿ!ಇನ್ನಷ್ಟು ಕನ್ನಡ ಪದಗಳ ಸೇರಿಸಿ 2ನೇ ಬಾರಿಗೆ 'ಥೀಮ್ ಸಾಂಗ್' ಬಿಟ್ಟ ಆರ್‌ಸಿಬಿ!

'ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುವ ಡ್ರೀಮ್11 ಇಂಡಿಯನ್ ಪ್ರೀಮಿಯರ್ ಲೀಗ್ 2020 ಕೊರೊನಾವೈರಸ್ ಕಾರಣ ಕದ ಮುಚ್ಚಿದ ಸ್ಟೇಡಿಯಂನಲ್ಲಿ ನಡೆಯಲಿದೆ. ಆರೋಗ್ಯ ಮುನ್ನೆಚ್ಚರಿಕಾ ಕ್ರಮವಾಗಿ ಪಂದ್ಯಕ್ಕೂ ಮುನ್ನ ಅಥವಾ ತಂಡಗಳ ಅಭ್ಯಾಸದ ವೇಳೆ ಸ್ಟೇಡಿಯಂ ಒಳಗೆ ಮಾಧ್ಯಮಗಳಿಗೆ ಪ್ರವೇಶ ಇಲ್ಲ,' ಎಂದು ಬಿಸಿಸಿಐ ಹೇಳಿಕೆ ಮೂಲಕ ತಿಳಿಸಿದೆ.

ಕಾಮೆಂಟರಿ ಪ್ಯಾನೆಲ್‌ನಿಂದ ಹೊರದಬ್ಬಿದ್ದಕ್ಕೆ ಅಸಲಿ ಕಾರಣ ಹೇಳಿದ ಮಂಜ್ರೇಕರ್!ಕಾಮೆಂಟರಿ ಪ್ಯಾನೆಲ್‌ನಿಂದ ಹೊರದಬ್ಬಿದ್ದಕ್ಕೆ ಅಸಲಿ ಕಾರಣ ಹೇಳಿದ ಮಂಜ್ರೇಕರ್!

'ಆತಂಕಕಾರಿ ಪರಿಸ್ಥಿತಿಯಿರುವುದರಿಂದ, ಈ ಬಾರಿ ಯುಎಇ ಮಾಧ್ಯಮ ಹೊರತಾಗಿ ಬೇರೆ ಯಾವುದೇ ಹೊಸ ಮಾಧ್ಯಮಗಳ ನೋಂದಾವಣಿ ಇರುವುದಿಲ್ಲ,' ಎಂದು ಬಿಸಿಸಿಐ ಮಾಹಿತಿ ನೀಡಿದೆ. ಇದರರ್ಥ ಅಧಿಕೃತ ಸುದ್ದಿಗಳಿಗಾಗಿ ಗಾಲ್ಫ್ ಮಾಧ್ಯಮಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

Story first published: Saturday, September 19, 2020, 11:09 [IST]
Other articles published on Sep 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X