ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಆಯೋಜನಾ ಸ್ಥಳದ ಬಗ್ಗೆ ಬಿಸಿಸಿಐ ಮೂಲದಿಂದ ಮಹತ್ವದ ಸುಳಿವು

Ipl 2020 Not Happening In India

2020ರ ಐಪಿಎಲ್ ಮುಂಬೈ ಒಂದೇ ತಾಣದಲ್ಲಿ ನಡೆಯಲಿದೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ಮತ್ತೊಂದು ಪ್ರಮುಖ ಬೆಳವಣಿಗೆ ಆಗಿದೆ. ಈ ಬಾರಿಯ ಐಪಿಎಲ್ ಭಾರತದಲ್ಲಿ ಭಾರತದಲ್ಲಿ ನಡೆಯುವುದಿಲ್ಲ ಎಂದು ಬಿಸಿಸಿಐ ಮೂಲಗಳೇ ಸುಳಿವು ನೀಡಿದೆ. ಶ್ರೀಲಂಕಾದಲ್ಲಿ ಅಥವಾ ಯುಎಇನಲ್ಲಿ ಐಪಿಎಲ್ ನಡೆಯುವ ಸಾಧ್ಯತೆಯ ಬಗ್ಗೆ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ.

2020ರ ಐಪಿಎಲ್ ಆಯೋಜನೆಯ ನಿರ್ಧಾರವನ್ನು ಕೈಗೊಳ್ಳಲು ಬಿಸಿಸಿಐ ಕಾದು ನೋಡುವ ತಂತ್ರಕ್ಕೆ ಮೊರೆಹೋಗಿದೆ. ಟಿ20 ವಿಶ್ವಕೊ್ ಬಗ್ಗೆ ಐಸಿಸಿ ತೆಗೆದುಕೊಳ್ಳುವ ನಿರ್ಧಾರವನ್ನು ಬಿಸಿಸಿಐ ಕಾಯುತ್ತಿದ್ದು ವಿಶ್ವಕಪ್ ಮುಂದೂಡಲ್ಪಟ್ಟರೆ ಆ ಅವಧಿಯಲ್ಲಿ ಐಪಿಎಲ್ ಆಯೋಜಿಸಲು ಸಿದ್ಧತೆ ನಡೆಸಿದೆ.

3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲು ಕಾರಣ ಚಾಪೆಲ್ ಅಲ್ಲ ಸಚಿನ್: ಇರ್ಫಾನ್3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲು ಕಾರಣ ಚಾಪೆಲ್ ಅಲ್ಲ ಸಚಿನ್: ಇರ್ಫಾನ್

ನಾವಿನ್ನೂ ಐಪಿಎಲ್‌ನ ಆಯೋಜನಾ ಸ್ಥಳದ ಬಗ್ಗೆ ನಿರ್ಧಾರವನ್ನು ಕೈಗೊಂಡಿಲ್ಲ. ಆದರೆ ಈ ಬಾರಿ ಭಾರತದ ಹೊರಗಡೆ ಐಪಿಎಲ್ ನಡೆಯಲಿದೆ ಎಂದು ಬಿಸಿಸಿಐನ ಅಧಿಕಾರಿ ಹೇಳಿದ್ದಾರೆ. ಭಾರತದಲ್ಲಿ ಹೆಚ್ಚಿನ ತಂಡಗಳು ಬಂದು ಆಡುವ ವಾತಾವರಣ ಇಲ್ಲ ಎಂದು ಎಂದು ಆ ಅಧಿಕಾರಿ ಐಎಎನ್‌ಎಸ್ ಸುದ್ದಿ ಸಂಸ್ಥೆಯ ಜೊತೆಗೆ ಮಾತನಾಡುತ್ತಾ ತಿಳಿಸಿದ್ದಾರೆ.

ಇನ್ನು ಐಪಿಎಲ್ ಆಯೋಜನೆಗೆ ಎರಡು ದೇಶಗಳ ಮಧ್ಯೆ ಪೈಪೋಟಿಯಿದೆ. ಶ್ರೀಲಂಕಾ ಹಾಗೂ ಯುಎಇ ಐಪಿಎಲ್‌ನ ಆತಿಥ್ಯ ವಹಿಸಲು ಆಸಕ್ತಿವಹಿಸಿದೆ. ಆದರೆ ಎಲ್ಲಿ ಈ ಬಾರಿಯ ಐಪಿಎಲ್ ಆವೃತ್ತಿಯನ್ನು ಆಯೋಜಿಸಬೇಕು ಎಂಬ ಬಗ್ಗೆ ನಿರ್ಧಾರವನ್ನು ಇನ್ನಷ್ಟೇ ಕೈಗೊಳ್ಳಬೇಕಾಗಿದೆ. ಕೊರೊನಾ ವೈರಸ್‌ನ ಪರಿಸ್ಥಿತಿಯನ್ನು ಅವಲೋಕಿಸಿ ಯಾವುದು ಸೂಕ್ತ ಎಂದು ನಿರ್ಧರಿಸಲಾಗುತ್ತದೆ ಎಂದಿದ್ದಾರೆ.

ವೇಗಿ ಭುವನೇಶ್ವರ್ ಕುಮಾರ್ ಸಿನಿಮಾ ಆದರೆ ರಾಜ್‌ಕುಮಾರ್ ನಟಿಸಬೇಕಂತೆವೇಗಿ ಭುವನೇಶ್ವರ್ ಕುಮಾರ್ ಸಿನಿಮಾ ಆದರೆ ರಾಜ್‌ಕುಮಾರ್ ನಟಿಸಬೇಕಂತೆ

ಐಪಿಎಲ್ ಈ ಹಿಂದೆಯೂ ವಿದೇಶಗಳಲ್ಲಿ ಆಯೋಜನೆಯಾಗಿತ್ತು. 2009ರ ಸಂಪೂರ್ಣ ಆವೃತ್ತಿ ದಕ್ಷಿಣ ಆಫ್ರಿಕಾದಲ್ಲಿ ಆಯೋಜನೆಯಾಗಿತ್ತು. ಅದಾದ ಬಳಿಕ 2014ರಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಕಾರಣದಿಂದಾಗಿ ಮೊದಲ 20 ಪಂದ್ಯಗಳು ಯುಎಇನಲ್ಲಿ ಆಯೋಜನೆಯಾಗಿತ್ತು.

Story first published: Friday, July 3, 2020, 9:51 [IST]
Other articles published on Jul 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X