ಐಪಿಎಲ್ 2020: ಆರಂಭ, ಅಂತ್ಯ, ಸಮಯ, ಕ್ರೀಡಾಂಗಣ, ಪ್ರಾಯೋಜಕತ್ವ ಎಲ್ಲದಕ್ಕೂ ಸ್ಪಷ್ಟ ಉತ್ತರ

ಐಪಿಎಲ್‌ನ 13ನೇ ಆವೃತ್ತಿಗೆ ಕೇಂದ್ರ ಸರ್ಕಾರದ ಹಸಿರುನಿಶಾನೆಯೊಂದಿಗೆ ಭರದಿಂದ ಚಾಲನೆ ದೊರೆತಿದೆ. ಇದೇ ಸಂದರ್ಭದಲ್ಲಿ ಭಾನುವಾರ ಐಪಿಎಲ್ ಆಡಳಿತಾತ್ಮಕ ಮಂಡಳಿಯ ಸಭೆಯನ್ನೂ ನಡೆಸಲಾಗಿತ್ತು. ಈ ಸಭೆಯ ಬಳಿಕ ಪ್ರಮುಖ ವಿಚಾರಗಳನ್ನು ಅಂತಿಮಗೊಳಿಸಲಾಗಿದ್ದು ಈ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದೆ.

ಐಪಿಎಲ್ ಪಂದ್ಯಗಳನ್ನು ಆರಂಭಿಸುವ ಸಮಯದ ಬಗ್ಗೆ ಇದ್ದ ಅನುಮಾನಗಳಿಗೂ ಈಗ ಸ್ಪಷ್ಟ ಉತ್ತರ ಸಿಕ್ಕಿದ್ದು ಮಹತ್ವದ ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆ. ಎರಡು ಪಂದ್ಯಗಳಿರುವ ದಿನಗಳಲ್ಲಿ ಮೊದಲ ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ರಾತ್ರಿಯ ಪಂದ್ಯ 7:30ಕ್ಕೆ ಆರಂಭವಾಗಲಿದೆ.

ಐಪಿಎಲ್ 2020: ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್, ನವೆಂಬರ್10ಕ್ಕೆ ಫೈನಲ್

ಮೂರು ಕ್ರೀಡಾಂಗಣಗಳಲ್ಲಿ ಪಂದ್ಯಾವಳಿ

ಮೂರು ಕ್ರೀಡಾಂಗಣಗಳಲ್ಲಿ ಪಂದ್ಯಾವಳಿ

ಈ ಬಾರಿಯ ಟೂರ್ನಿಯನ್ನು ಮೂರು ಕ್ರೀಡಾಂಗಣಗಳಲ್ಲಿ ನಡೆಸಲು ತೀರ್ಮಾನವನ್ನು ಕೈಗೊಂಡಿತ್ತು ಅದಕ್ಕೂ ಕೂಡ ಈಗ ಅಧಿಕೃತ ಮುದ್ರೆ ಬಿದ್ದಿದೆ. ಯುಎಇನ ಪ್ರಮುಖ ಮೂರು ಕ್ರೀಡಾಂಗಣಗಳಾದ ದುಬೈ, ಅಬುದಾಬಿ ಹಾಗೂ ಶಾರ್ಜಾ ದ ಕ್ರಿಡಾಂಗಣಗಳಲ್ಲಿ ಪಂದ್ಯವನ್ನು ಏರ್ಪಡಿಸಲಾಗುತ್ತದೆ.

ಕೋವಿಡ್ ಸಬ್‌ಟಿಟ್ಯೂಡ್

ಕೋವಿಡ್ ಸಬ್‌ಟಿಟ್ಯೂಡ್

ಇನ್ನು ಪ್ರತೀ ತಂಡಕ್ಕೂ ಗರಿಷ್ಠ 24 ಆಟಗಾರರ ತಂಡವನ್ನು ಹೊಂದಲು ಅವಕಾಶವನ್ನು ನೀಡಲಾಗಿದೆ. ಇದರ ಜೊತೆಗೆ ಕೋವಿಡ್19 ಬದಲಾವಣೆಯಾಗಿ ಅನಿರ್ದಿಷ್ಟ ಆಟಗಾರರನ್ನು ಸಬ್‌ಟಿಟ್ಯೂಟ್ ಮಾಡಿಕೊಳ್ಳುವ ಅವಕಾಶವನ್ನು ಈ ಬಾರಿಯ ಟೂರ್ನಿಯಲ್ಲಿ ನೀಡಲಾಗಿದೆ.

'ಎಲ್ಲಾ ಪ್ರಾಯೋಜಕರು ನಮ್ಮೊಂದಿಗೆ'

'ಎಲ್ಲಾ ಪ್ರಾಯೋಜಕರು ನಮ್ಮೊಂದಿಗೆ'

ಇನ್ನು ಇದೇ ಸಂದರ್ಭದಲ್ಲಿ ಐಪಿಎಲ್ ಪ್ರಾಯೋಜಕರ ಬಗ್ಗೆಯೂ ತನ್ನ ನಿರ್ಧಾರವನ್ನು ಐಪಿಎಲ್ ಪ್ರಕಟಿಸಿತು. ನಮ್ಮ ಎಲ್ಲಾ ಪ್ರಾಯೋಜಕರು ಈ ಬಾರಿಯ ಐಪಿಎಲ್‌ನಲ್ಲೂ ನಮ್ಮೊಂದಿಗೆ ಇರಲಿದ್ದಾರೆ. ಈ ವಾಕ್ಯದೊಳಗಿನ ಅರ್ಥವವನ್ನು ನೀವು ಗ್ರಹಿಸಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ ಎಂದು ಆಡಳಿತಾತ್ಮಕ ಮಂಡಳಿಯ ಸದಸ್ಯರೊಬ್ಬರು ಮಾಹಿತಿಯನ್ನು ನೀಡಿದ್ದಾರೆ.

ಚೀನಾ ಕಂಪನಿಯೇ ಟೈಟಲ್ ಸ್ಪಾನ್ಸರ್

ಚೀನಾ ಕಂಪನಿಯೇ ಟೈಟಲ್ ಸ್ಪಾನ್ಸರ್

ಈ ಮೂಲಕ ಚೀನಾದ ವಿವೋ ಈ ಬಾರಿಯ ಟೈಟಲ್ ಸ್ಪಾನ್ಸರ್ ಆಗಿ ಮುಂದುವರಿಯುವುದು ಖಚಿತವಾಗಿದೆ. ಭಾರತ ಚೀನಾ ನಡುವಿನ ಬಿಕ್ಕಟ್ಟು ತೀವ್ರಗೊಂಡ ಹಿನ್ನೆಲೆಯಲ್ಲಿ ಚೀನಾ ಕಂಪನಿಯ ಪ್ರಾಯೋಜಕತ್ವದಿಂದ ಬಿಸಿಸಿಐ ಹಿಂದಕ್ಕೆ ಸರಿಯಲಿದೆ ಎನ್ನಲಾಗಿತ್ತು. ಆದರೆ ವಿವೋ ಈ ಬಾರಿಯ ಶೀರ್ಷಿಕೆ ಪ್ರಾಯೋಜಕರಾಗಿಯೇ ಮುಂದುವರಿಯಲಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, August 3, 2020, 9:09 [IST]
Other articles published on Aug 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X