ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಮುಂಬೈ vs ಆರ್‌ಸಿಬಿ ಪಂದ್ಯದ ನಂತರ ಅಂಕಪಟ್ಟಿ ಹೇಗಿದೆ? ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಯಾರಿಗೆ?

Ipl 2020- Ofter Rcb Vs Mi: Updated Points Table, Orange Cap And Purple Cap List

ಐಪಿಎಲ್ ಮತ್ತೊಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದೆ. ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲೂ ಅಭಿಮಾನಿಗಳಿಗೆ ಭರಪೂರ ಮನರಂಜನೆ ದೊರೆತಿದೆ. ಎರಡೂ ತಂಡಗಳು ನಿಗದಿತ 20 ಓವರ್‌ಗಳಲ್ಲಿ 201 ರನ್‌ಗಳಿಸಿ ಟೈ ಮಾಡಿಕೊಂಡ ಕಾರಣ ಸೂಪರ್ ಓವರ್‌ನಲ್ಲಿ ಆರ್‌ಸಿಬಿ ಗೆದ್ದು ಬೀಗಿದೆ. ಈ ಮೂಲಕ ತನ್ನ 2ನೇ ಗೆಲುವನ್ನು ದಾಖಲಿಸುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದ್ದು ಅಮೂಲ್ಯ 2 ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ.

ಪ್ರತಿ ಪಂದ್ಯದ ಬಳಿಕವೂ ಅಂಕಪಟ್ಟಿಯಲ್ಲಿ ಬದಲಾವಣೆಗಳು ಆಗುತ್ತಿರುತ್ತವೆ. ಹೀಗಾಗಿ ಹೆಚ್ಚಿನ ಪಂದ್ಯಗಳನ್ನು ಗೆಲ್ಲುತ್ತಾ ಮೊದಲ ನಾಲ್ಕು ತಂಡಗಳ ಪೈಕಿ ಇರಬೇಕಾಗಿರುವುದು ಈ ಕದನದಲ್ಲಿ ಎಲ್ಲಾ ತಂಡಗಳ ಇರಾದೆಯಾಗಿದೆ. ಇಲ್ಲವಾದಲ್ಲಿ ಕೊನೆಯ ಹಂತದಲ್ಲೆ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡಗಳು ತಂಡಗಳ ಮೇಲಿರುತ್ತದೆ. ಹೀಗಾಗಿ ಪ್ರತಿ ಪಂದ್ಯವೂ ಪ್ರತಿ ಅಂಕವೂ ತಂಡಗಳಿಗೆ ಇಲ್ಲಿ ಬಹಳ ಮಹತ್ವದ್ದಾಗಿರುತ್ತದೆ.

ಈ ಬಾರಿಯ 10ನೇ ಮುಖಾಮುಖಿ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆದಿದ್ದು ಈ ಪಂದ್ಯದ ಬಳಿಕ ಅಂಕಪಟ್ಟಿಯ ಒಟ್ಟಾರೆ ಚಿತ್ರಣ ಹೇಗಿದೆ? ಮುಂದೆ ಓದಿ

ಅಂಕಪಟ್ಟಿ ಸಹಿತ ಐಪಿಎಲ್ 2020ಯ ಸಂಪೂರ್ಣ ಮಾಹಿತಿಯ ವಿಶೇಷ ಪುಟ

3ನೇ ಸ್ಥಾನಕ್ಕೇರಿದ ಆರ್‌ಸಿಬಿ

3ನೇ ಸ್ಥಾನಕ್ಕೇರಿದ ಆರ್‌ಸಿಬಿ

ಮೂರು ಪಂದ್ಯಗಳನ್ನು ಆಡಿರುವ ಆರ್‌ಸಿಬಿ ಎರಡು ಗೆಲುವಿಗಳ ಮೂಲಕ -1.450 ನೆಟ್‌ರನ್‌ರೇಟ್ನೊಂದಿಗೆ ತನ್ನ ಖಾತೆಯಲ್ಲಿ ಈಗ ನಾಲ್ಕು ಅಂಕಗಳನ್ನು ಗಳಿಸಿಕೊಂಡಿದೆ. ಈ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದು ನೆಟ್‌ರನ್‌ರೇಟ್‌ನಲ್ಲಿ ಆರ್‌ಸಿಬಿಗಿಂತ ಮುಂದಿರುವ ರಾಜಸ್ಥಾನ್ ರಾಯಲ್ಸ್ ಎರಡನೇ ಸ್ಥಾನದಲ್ಲಿದೆ. ಬಳಿಕದ ಸ್ಥಾನವನ್ನು ಆರ್‌ಸಿಬಿ ಪಡೆದುಕೊಂಡಿದೆ.

5ನೇ ಸ್ಥಾನದಲ್ಲಿ ಮುಂಬೈ

5ನೇ ಸ್ಥಾನದಲ್ಲಿ ಮುಂಬೈ

ಮುಂಬೈ ಇಂಡಿಯನ್ಸ್ ಈ ಗೆಲುವಿನ ಮೂಲಕ ಟೂರ್ನಿಯಲ್ಲಿ 2ನೇ ಸೋಲನ್ನು ಅನುಭವಿಸಿದೆ. 3 ಪಂದ್ಯಗಳಲ್ಲಿ ಒಂದು ಗೆಲುವು ಮಾತ್ರ ಮುಂಬೈ ಪಾಲಿಗೆ ಸಾಧ್ಯವಾಗಿದ್ದು ಅದರ ಖಾತೆಯಲ್ಲಿ 2 ಅಂಕಗಳಷ್ಟೇ ಇವೆ. ಈ ಮೂಲಕ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಇಳಿದಿದೆ. 2ನೇ ಅಂಕಗಳನ್ನು ಪಡೆದುಕೊಂಡಿದ್ದರೂ ಕಿಂಗ್ಸ್ ಇಲವೆನ್ ಪಂಜಾಬ್ ಹಾಲಿ ಚಾಂಪಿಯನ್ನರಿಗಿಂತ ನೆಟ್‌ರನ್‌ರೇಟ್‌ನಲ್ಲಿ ಮುಂದಿದ್ದು ಅಂಕಪಟ್ಟಿಯಲ್ಲಿ ಮುಂಬೈಗಿಂತ ಮೇಲಿನ ಸ್ಥಾನವನ್ನು ಪಡೆದುಕೊಂಡಿದೆ.

ಸನ್‌ರೈಸರ್ಸ್‌ಗೆ ಕೊನೆಯ ಸ್ಥಾನ

ಸನ್‌ರೈಸರ್ಸ್‌ಗೆ ಕೊನೆಯ ಸ್ಥಾನ

ದಿನೇಶ್ ಕಾರ್ತಿಕ್ ನೇತೃತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಎಂಎಸ್ ಧೋನಿ ನಾಯಕತ್ವವಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಈವರೆಗಿನ ಪಂದ್ಯಗಳ ಅಂಕಪಟ್ಟಿಯಲ್ಲಿ ಕ್ರಮವಾಗಿ ಆರು ಹಾಗೂ ಏಳನೇ ಸ್ಥಾನವನ್ನು ಪಡೆದುಕೊಂಡಿದೆ. ಕೆಕೆಆರ್ ಆಡಿರುವ 2 ಪಂದ್ಯಗಳಲ್ಲಿ 1 ಗೆಲುವು ಕಂಡಿದ್ದರೆ ಸಿಎಸ್‌ಕೆ 3 ಪಂದ್ಯಗಳಲ್ಲಿ ಒಂದರಲ್ಲಷ್ಟೇ ಗೆಲುವು ಕಂಡಿದೆ. ಸನ್‌ರೈಸರ್‌ಸ ಹೈದರಾಬಾದ್ ತಂಡ ಆಡಿರುವ 2 ಪಂದ್ಯಗಳಲ್ಲಿ ಎರಡನ್ನೂ ಸೋತಿದ್ದು ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಪರ್ಪಲ್‌ಕ್ಯಾಪ್ ಹಾಗೂ ಆರೆಂಜ್ ಕ್ಯಾಪ್

ಪರ್ಪಲ್‌ಕ್ಯಾಪ್ ಹಾಗೂ ಆರೆಂಜ್ ಕ್ಯಾಪ್

ಟೂರ್ನಿಯಲ್ಲಿ ಅತಿ ಹೆಚ್ಚಿನ ರನ್‌ಗಳಿಸಿದ ಆಟಗಾರನಿಗೆ ಸಿಗುವ ಆರೆಂಜ್ ಕ್ಯಾಪ್ ಹಾಗೂ ಹೆಚ್ಚಿನ ವಿಕೆಟ್ ಗಳಿಸಿದ ಬೌಲರ್‌ಗೆ ಸಿಗುವ ಪರ್ಪಲ್‌ಕ್ಯಾಪ್‌ನಲ್ಲಿ ಯಾವುದೇ ಬದಲಾವಣೆಗಳೂ ಆಗಿಲ್ಲ. ಟೂರ್ನಿಯಲ್ಲಿ 222 ರನ್‌ಗಳಿಸಿರುವ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಟಾಪ್ ಸ್ಕೋರರ್ ಆಗಿದ್ದು ಆರೆಂಜ್ ಕ್ಯಾಪ್ ತನ್ನಲ್ಲೇ ಉಳಿಸಿಕೊಂಡಿದ್ದಾರೆ. ಪರ್ಪಲ್ ಕ್ಯಾಪ್‌ಕೂಡ ಪಂಜಾಬ್ ತಂಡದ ಬೌಲರ್ ಮೊಹಮದ್ ಶಮಿ ಅವರಲ್ಲೇ ಉಳಿದುಕೊಂಡಿದೆ. ಶಮಿ 11 ಓವರ್‌ಗಳನ್ನು ಎಸೆದಿದ್ದು 7 ವಿಕೆಟ್ ಕಬಳಿಸಿ ಈ ಪಟ್ಟಿಯಲ್ಲಿ ಮುಂದಿದ್ದಾರೆ.

Story first published: Tuesday, September 29, 2020, 16:08 [IST]
Other articles published on Sep 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X