ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಂಜು ಸ್ಯಾಮ್ಸನ್ ಔಟಾ, ನಾಟೌಟಾ?: ವಿವಾದ ಸೃಷ್ಠಿಸಿದೆ ಅಂಪೈರ್ ತೀರ್ಪು!

IPL 2020: Out or Not Out? Sanju Samsons Dismissal created Controversy

ಅಬುಧಾಬಿ: ಕ್ರಿಕೆಟ್ ಪಂದ್ಯಾಟಗಳ ವೇಳೆ ಗೊಂದಲಕ್ಕೀಡು ಮಾಡುವ ಅನ್ನಿವೇಶಗಳು ಅನೇಕ ಸಾರಿ ಕಾಣಸಿಕ್ಕಿವೆ. ತಂತ್ರಜ್ಞಾನಗಳ ಬೆಂಬಲ ಅಷ್ಟೇನೂ ಇಲ್ಲದ ಕಾಲದಿಂದ ಹಿಡಿದು ಆಟದ ಕ್ಷಣ ಕ್ಷಣವನ್ನೂ ತಂತ್ರಜ್ಞಾನದ ಒರೆಗೆ ಹಚ್ಚಿ ನೋಡುವ ಈ ದಿನಗಳವರೆಗೂ ನಾವು ಮೈದಾನದಲ್ಲಿ ಇಂಥ ಸಂಗತಿಗಳನ್ನು ನೋಡುತ್ತಲೇ ಬಂದಿದ್ದೇವೆ. ತೀರಾ ಇತ್ತೀಚೆಗೆ ಇಂಥದ್ದೇ ಗೊಂದಲಕ್ಕೀಡು ಮಾಡುವ ಸನ್ನಿವೇಶ ಕ್ರಿಕೆಟ್ ಮೈದಾನದಲ್ಲಿ ಕಾಣ ಸಿಕ್ಕಿದೆ.

ಅದ್ಭುತ ಇನ್ನಿಂಗ್ಸ್‌ ನೀಡಿದ ವಿರಾಟ್ ಕೊಹ್ಲಿ ಹೆಸರಿಗೆ ಮತ್ತೊಂದು ದಾಖಲೆಅದ್ಭುತ ಇನ್ನಿಂಗ್ಸ್‌ ನೀಡಿದ ವಿರಾಟ್ ಕೊಹ್ಲಿ ಹೆಸರಿಗೆ ಮತ್ತೊಂದು ದಾಖಲೆ

ಶನಿವಾರ (ಅಕ್ಟೋಬರ್ 3) ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 15ನೇ ಪಂದ್ಯದಲ್ಲಿ ಆಟಗಾರನೊಬ್ಬನಿಗೆ ನೀಡಲಾದ ಔಟ್ ತೀರ್ಪು ಈಗ ವಿವಾದಕ್ಕೀಡಾಗಿದೆ.

'ನಿನ್ನ ಹಣೆಬರಹ ನೋಡ್ಕೋ': ಆಕಾಶ್ ಚೋಪ್ರಾಗೆ ಜಿಮ್ಮಿ ನೀಶಮ್ ಟಾಂಗ್'ನಿನ್ನ ಹಣೆಬರಹ ನೋಡ್ಕೋ': ಆಕಾಶ್ ಚೋಪ್ರಾಗೆ ಜಿಮ್ಮಿ ನೀಶಮ್ ಟಾಂಗ್

ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯ ವೇಳೆ ಆರ್‌ಆರ್ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ ಅವರಿಗೆ ನೀಡಲಾದ ಔಟ್ ತೀರ್ಪು ಚರ್ಚೆ ಹುಟ್ಟುಹಾಕಿದೆ.

ಪ್ರತಿಭಾನ್ವಿತ ಆಟಗಾರ ಸಂಜು

ಪ್ರತಿಭಾನ್ವಿತ ಆಟಗಾರ ಸಂಜು

ಈ ಐಪಿಎಲ್ ಸೀಸನ್‌ನಲ್ಲಿ ರಾಜಸ್ಥಾನ್ ಯುವ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಆಡಿದ ನಾಲ್ಕು ಪಂದ್ಯಗಳಲ್ಲಿ ಕ್ರಮವಾಗಿ 74, 85, 8, 4 ರನ್ ಗಳಿಸಿದ್ದಾರೆ. ಇದರಲ್ಲಿ ಕೊನೇ ಪಂದ್ಯದ ಔಟ್ ತೀರ್ಪು ವಿವಾದ ಸೃಷ್ಠಿಸಿದೆ. (ಪಂದ್ಯದ ಸಂಕ್ಷಿಪ್ತ ಸ್ಕೋರ್‌: ರಾಜಸ್ಥಾನ್- 154-6 (20 Ov), ಬೆಂಗಳೂರು-58-2 (19.1 Ov).

ಪಂದ್ಯದಲ್ಲಿ ಆಗಿದ್ದೇನು?

ಪಂದ್ಯದಲ್ಲಿ ಆಗಿದ್ದೇನು?

3ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಸಂಜು, 2.4ನೇ ಓವರ್‌ನಲ್ಲಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರ ಎಸೆತಕ್ಕೆ ಕಾಟ್ ಆ್ಯಂಡ್ ಬೌಲ್ಡ್ ಅನ್ನಿಸಿ 4 ರನ್‌ಗೆ ನಿರ್ಗಮಿಸಬೇಕಾಯಿತು. ಆದರೆ ಚಾಹಲ್ ಹಿಡಿದಿರುವ ಕ್ಯಾಚ್ ನೆಲಕ್ಕೆ ತಾಗಿದೆಯೋ ಇಲ್ಲವೋ ಅನ್ನೋದು ಗೊಂದಲ ಮೂಡಿಸಿದೆ. ಹೀಗಾಗಿಯೇ ವಿವಾದ ಹುಟ್ಟಿಕೊಂಡಿದೆ.

ಡಿಆರ್‌ಎಸ್‌ ಬಗ್ಗೆಯೂ ಚರ್ಚೆ

ಡಿಆರ್‌ಎಸ್‌ ಬಗ್ಗೆಯೂ ಚರ್ಚೆ

ಸ್ಯಾಮ್ಸನ್ ಹೊಡೆತವನ್ನು ಚಾಹಲ್ ಕ್ಯಾಚ್ ಮಾಡಿದ್ದು ಬರೀಗಣ್ಣಿಗೆ ಸ್ಪಷ್ಟವಾಗಿ ಕಾಣಿಸುತ್ತಿರದಿದ್ದರಿಂದ ಡಿಸಿಶನ್ ರಿವ್ಯೂ ಸಿಸ್ಟಮ್ (ಡಿಆರ್‌ಎಸ್) ಮೊರೆ ಹೋಗಲಾಯಿತು. ಪರಿಶೀಲನೆಯ ಬಳಿಕ ಥರ್ಡ್ ಅಂಪೈರ್ ಪಶ್ಚಿಮ್ ಪಾಠಕ್ ಇದನ್ನು ಔಟ್ ಎಂದು ಸಾರಿದರು. ಆದರೆ ವಿಡಿಯೋ ಗಮನಿಸುವವರಿಗೆ ಚಾಹಲ್ ಚೆಂಡನ್ನು ನೆಲಕ್ಕೆ ತಾಗಿಸಿದಂತೆ ಕಾಣಿಸುತ್ತದೆ. ಹೀಗಾಗಿಯೇ ಡಿಆರ್‌ಎಸ್ ತಂತ್ರಜ್ಞಾನದ ಬಗ್ಗೆಯೂ ಮಾತನಾಡುವಂತಾಗಿದೆ.

ಬ್ರೆಟ್‌ ಲೀಯಿಂದ ವಿವರಣೆ

ಬ್ರೆಟ್‌ ಲೀಯಿಂದ ವಿವರಣೆ

ಪಂದ್ಯದ ವೇಳೆ 'ಡಗ್‌ಔಟ್‌'ನಲ್ಲಿ ವಿಶ್ಲೇಷಣೆ ನೀಡುತ್ತಿದ್ದ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಕೂಡ ಇದೇ ಔಟ್ ತೀರ್ಪಿನ ಬಗ್ಗೆ ವಿವರಣೆ ನೀಡುವ ಪ್ರಯತ್ನ ಮಾಡಿದ್ದರು. ಕ್ಯಾಚ್ ಪಡೆಯುವಾಗ ಚಾಹಲ್ ತನ್ನ ಕೈಯ ಮಧ್ಯದ ಮೂರು ಬೆರಳುಗಳನ್ನು ಚೆಂಡಿನ ಅಡಿಗಿಟ್ಟು ಕ್ಯಾಚ್ ಪಡೆದಿದ್ದಾರೆ. ಹೀಗಾಗಿ ಇಲ್ಲಿ ಚೆಂಡು ನೆಲಕ್ಕೆ ತಾಗುವ ಸಾಧ್ಯತೆಯಿಲ್ಲ. ಆದ್ದರಿಂದಲೇ ಔಟ್ ತೀರ್ಪು ನೀಡಲಾಗಿದೆ ಎಂದಿದ್ದರು. ಆದರೂ ವಿಡಿಯೋ ನೋಡಿದ ಯಾರಿಗೂ ಸ್ಯಾಮ್ಸನ್ ಔಟ್ ತೀರ್ಪು ಸರಿಯೆನಿಸುತ್ತಿಲ್ಲ.

Story first published: Sunday, October 4, 2020, 12:49 [IST]
Other articles published on Oct 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X