ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಪಂದ್ಯಗಳ ವಿರುದ್ಧ ಹೈ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ!

IPL 2020: Petition in HC against IPL cricket matches in wake of coronavirus

ಚೆನ್ನೈ, ಮಾರ್ಚ್ 11: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳನ್ನು ನಡೆಸದಂತೆ ಮದ್ರಾಸ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಕೊರೊನಾ ವೈರಸ್ ಹಬ್ಬುವುದನ್ನು ತಡೆಗಟ್ಟುವ ಸಲುವಾಗಿ ಮಾರ್ಚ್ 29ರಿಂದ ಮೇ 24ರ ವರೆಗೆ ಐಪಿಎಲ್ ನಡೆಸದಂತೆ ಬೋರ್ಡ್ ಆಫ್‌ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾವನ್ನು (ಬಿಸಿಸಿಐ) ಕೇಂದ್ರ ಸರ್ಕಾರ ತಡೆಯಲು ಮಾರ್ಗದರ್ಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

ಪಠಾಣ್ ಸ್ಫೋಟಕ ಬ್ಯಾಟಿಂಗ್: ಶ್ರೀಲಂಕಾ ವಿರುದ್ಧ ಇಂಡಿಯಾಕ್ಕೆ ರೋಚಕ ಜಯ!ಪಠಾಣ್ ಸ್ಫೋಟಕ ಬ್ಯಾಟಿಂಗ್: ಶ್ರೀಲಂಕಾ ವಿರುದ್ಧ ಇಂಡಿಯಾಕ್ಕೆ ರೋಚಕ ಜಯ!

ಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ವಕೀಲ ಜಿ ಅಲೆಕ್ಸ್ ಬೆಂಜಿಗರ್, ಮಾರ್ಚ್ 12 ರಂದು ನ್ಯಾಯಮೂರ್ತಿಗಳಾದ ಎಂಎಂ ಸುಂದ್ರೆಶ್ ಮತ್ತು ಕೃಷ್ಣನ್ ರಾಮಸ್ವಾಮಿ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ಹಾಜರಾಗುವ ಸಾಧ್ಯತೆ ಇದೆ.

ರಣಜಿ ಟ್ರೋಫಿ: ವಿಚಿತ್ರ ಕ್ಷಣಕ್ಕೆ ಸಾಕ್ಷಿಯಾದ ಸೌರಾಷ್ಟ್ರ-ಬೆಂಗಾಲ್ ಫೈನಲ್ ಪಂದ್ಯ!ರಣಜಿ ಟ್ರೋಫಿ: ವಿಚಿತ್ರ ಕ್ಷಣಕ್ಕೆ ಸಾಕ್ಷಿಯಾದ ಸೌರಾಷ್ಟ್ರ-ಬೆಂಗಾಲ್ ಫೈನಲ್ ಪಂದ್ಯ!

ಒಟ್ಟಿನಲ್ಲಿ ಭಾರತದ ಅದ್ದೂರಿ ಟೂರ್ನಿ ಐಪಿಎಲ್‌ಗೂ ಕೊರೊನಾ ವೈರಸ್ ಕಂಟಕ ಎದುರಾಗಿದೆ.

ಹಲವಾರು ಕ್ರೀಡಾಕೂಟಗಳು ರದ್ದು

ಹಲವಾರು ಕ್ರೀಡಾಕೂಟಗಳು ರದ್ದು

ಕೊರೊನಾ ವೈರಸ್ ಭೀತಿಯಿಂದಾಗಿ ಇಟಲಿಯಲ್ಲಿ ನಡೆಯುವ ಇಂಗ್ಲೆಂಡ್ ಪುರುಷರ ಮತ್ತು ಮಹಿಳೆಯರ 6 ರಾಷ್ಟ್ರಗಳ ರಗ್ಬೀ ಪಂದ್ಯಗಳು, ಸೀರೀ ಎ ಫುಟ್ಬಾಲ್ ಪಂದ್ಯಗಳು ಸೇರಿದಂತೆ ಅನೇಕ ಕ್ರೀಡಾಕೂಟಗಳು ಈಗಾಗಲೇ ರದ್ದಾಗಿವೆ. ಕೆಲವೊಂದು ದೇಶಗಳು ಪ್ರಮುಖ ಕ್ರೀಡಾಕೂಟಗಳನ್ನು ರದ್ದು ಇಲ್ಲವೆ ಮುಂದೂಡುತ್ತಿವೆ.

ದೊಡ್ಡ ಸಾಂಕ್ರಾಮಿಕ ವಿಪತ್ತು ಸೃಷ್ಟಿ

ದೊಡ್ಡ ಸಾಂಕ್ರಾಮಿಕ ವಿಪತ್ತು ಸೃಷ್ಟಿ

'ವಿಶ್ವ ಆರೋಗ್ಯ ಸಂಸ್ಥೆಯ ಜಾಲತಾಣದಲ್ಲಿ 'ಕೊವಿಡ್-19' ಸೋಂಕಿಗೆ ನಿರ್ದಿಷ್ಟ ಔಷಧವಿಲ್ಲ ಅಥವಾ ತಡೆಗಟ್ಟಲು, ಔಷಧೋಪಚಾರ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ,' ಎಂದು ಅರ್ಜಿಯಲ್ಲಿ ಬೆಂಜಿಗರ್ ಹೇಳಿದ್ದಾರೆ. ಕೊರೊನಾವೈರಸ್ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ ಮತ್ತು ದೊಡ್ಡ ಸಾಂಕ್ರಾಮಿಕ ವಿಪತ್ತು ಸೃಷ್ಟಿಸುತ್ತಿದೆ ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ.

ಸೋಂಕಿನ ಬಗ್ಗೆ ಬಿಸಿಸಿಐ ಪ್ರತಿಕ್ರಿಯೆ

ಸೋಂಕಿನ ಬಗ್ಗೆ ಬಿಸಿಸಿಐ ಪ್ರತಿಕ್ರಿಯೆ

ಕೊರೊನಾ ವೈರಸ್ ಭೀತಿಯಿಂದ ಐಪಿಎಲ್‌ಗೆ ತೊಂದರೆಯಿದೆಯೇ ಎಂಬ ಪ್ರಶ್ನೆಗಳು ಈಗಾಗಲೇ ಕೇಳಿ ಬಂದಿದ್ದವು. ಆದರೆ ಇದಕ್ಕೆ ಬಿಸಿಸಿಐ 'ಇಲ್ಲ,' ಎಂದು ಉತ್ತರಿಸಿತ್ತು. ಟೂರ್ನಿ ಯಾವುದೇ ಬದಲಾವಣೆಗಳಿಲ್ಲದೆ ನಿಗದಿತ ದಿನಾಂಕದಂದು ನಡೆಯಲಿದೆ ಎಂದು ಐಪಿಎಲ್ ಆಡಳಿತ ಮಂಡಳಿಯ ಅಧ್ಯಕ್ಷ ಬ್ರಿಜೇಶ್ ಪಟೇಲ್ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಮೊದಲು ಹೇಳಿದ್ದರು.

ಕರ್ನಾಟಕದಿಂದ ಬಿಸಿಸಿಐಗೆ ಪತ್ರ

ಕರ್ನಾಟಕದಿಂದ ಬಿಸಿಸಿಐಗೆ ಪತ್ರ

ಕರ್ನಾಟಕದಲ್ಲೂ ಕೊರೊನಾ ಸೋಂಕಿತರ ಪ್ರಕರಣಗಳು ದಾಖಲಾಗುತ್ತಿದ್ದು, ರಾಜ್ಯ ಸರ್ಕಾರ ಐಪಿಎಲ್ ಪಂದ್ಯಗಳನ್ನು ರದ್ದುಗೊಳಿಸುವಂತೆ, ರಾಜ್ಯದಲ್ಲಿ ಪಂದ್ಯಗಳನ್ನು ನಡೆಸದಂತೆ ಬಿಸಿಸಿಐಗೆ ಪತ್ರ ಬರೆದಿದೆ. ಹೀಗಾಗಿ ಒಂದೋ ಐಪಿಎಲ್ ರದ್ದಾಗಬಹುದು, ಮುಂದೂಡಲ್ಪಡಬಹುದು ಇಲ್ಲವೆ ಕರ್ನಾಟಕದ ಪಂದ್ಯಗಳು ರದ್ದು ಅಥವಾ ಬೇರೆಡೆಗೆ ಸ್ಥಳಾಂತರಿಸಲ್ಪಡುವ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ.

Story first published: Wednesday, March 11, 2020, 19:58 [IST]
Other articles published on Mar 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X