ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2020: ಪ್ಲೇ ಆಫ್‌ಗೆ ತಲುಪುವ ಸಾಧ್ಯತೆ ಹೊಂದಿರುವ ತಂಡಗಳು

IPL 2020 Playoffs: Chances Of Each IPL Teams To Make It To The Last 4

ಯುಎಇನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2020ರ ಆವೃತ್ತಿ ಭಾರೀ ಕೂತೂಹಲಕ್ಕೆ ಕಾರಣವಾಗಿದೆ. ಪ್ಲೇ ಆಫ್ ಹಂತಕ್ಕೇರಲು ತಂಡಗಳ ನಡುವೆ ಸಾಕಷ್ಟು ಜಿದ್ದಾಜಿದ್ದಿ ಏರ್ಪಟ್ಟಿದ್ದು, ನೋಡುಗರ ಹೃದಯಬಡಿತ ಹೆಚ್ಚಿಸುತ್ತಿದೆ.

ಈಗಾಗಲೇ ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ ಲೀಗ್ ಹಂತದಲ್ಲೇ ಹೊರಬಿದ್ದ ಮೊದಲ ತಂಡವಾಗಿದೆ. ಮತ್ತೊಂದೆಡೆ ಕೊಲ್ಕತ್ತಾ ನೈಟ್‌ ರೈಡರ್ಸ್ ತಂಡವು ಸಿಎಸ್‌ಕೆ ವಿರುದ್ಧ ಸೋಲುತ್ತಿದ್ದಂತೆ, ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್‌ ಅಧಿಕೃತವಾಗಿ ಪ್ಲೇ ಆಫ್ ತಲುಪಿದ ಮೊದಲ ತಂಡವಾಗಿ ಹೊರಹೊಮ್ಮಿದೆ.

ಆದರೆ ಅಂಕಿಗಳ ಲೆಕ್ಕಚಾರದಲ್ಲಿ ಸಿಎಸ್‌ಕೆ ಹೊರತುಪಡಿಸಿ ಉಳಿದ ಆರು ತಂಡಗಳಲ್ಲಿ(ಮುಂಬೈ ಈಗಾಗಲೇ ಪ್ಲೇ ಆಫ್ ತಲುಪಿದೆ) ನಾಲ್ಕು ತಂಡವು ಪ್ಲೇ ಆಫ್‌ಗೆ ತಲುಪುವ ಸಾಮರ್ಥ್ಯವನ್ನು ಹೊಂದಿವೆ. ಪಾಯಿಂಟ್ಸ್‌ಗಳ ಜೊತೆಗೆ ನೆಟ್‌ ರನ್‌ರೇಟ್ ಕೂಡ ತುಂಬಾನೆ ಪರಿಣಾಮಕಾರಿ ಪ್ರಭಾವ ಬೀರಲಿದೆ.

ಅಕ್ಟೋಬರ್ 30ರವರೆಗೆ ಪ್ಲೇ ಆಫ್‌ ಹಂತಕ್ಕೇರಲು ಯಾವ ತಂಡಗಳು ಎಷ್ಟು ಸಾಧ್ಯತೆ ಹೊಂದಿವೆ ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ:

1. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಸೋಲಿನ ಬಳಿಕ ಕೆಕೆಆರ್ 13 ಪಂದ್ಯಗಳಲ್ಲಿ ಆರು ಪಂದ್ಯಗಳ ಜಯದೊಂದಿಗೆ 12 ಅಂಕಗಳನ್ನು ಹೊಂದಿದ್ದು, ಮುಂದಿನ ಪಂದ್ಯದ ನೆಟ್‌ ರನ್‌ರೇಟ್ ಹೊರತುಪಡಿಸಿ ಪ್ಲೇ ಆಫ್ ತಲುಪಲು ಶೇ.5.5ರಷ್ಟು ಅವಕಾಶ ಹೊಂದಿದೆ.

2. ಆದಾಗ್ಯೂ, ಅವರು ನಾಲ್ಕನೇ ಸ್ಥಾನವನ್ನು ಗಳಿಸಲು ಅಥವಾ ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಲು ಶೇ. 25ರಷ್ಟು ಅವಕಾಶವನ್ನು ಹೊಂದಿರುತ್ತಾರೆ, ಆದರೆ ಅವರ ನೆಟ್‌ ರನ್‌ರೇಟ್‌ ಕಳಪೆಯಾಗಿ ಮುಂದುವರಿದರೆ ಪ್ಲೇ ಆಫ್‌ ತಲುಪಲು ಅವಕಾಶವಿಲ್ಲ.

3. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮತ್ತೊಂದು ಪಂದ್ಯ ಜಯಿಸಿದರೆ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನವನ್ನು ಉಳಿಸಿಕೊಳ್ಳುವುದನ್ನು ತಪ್ಪಿಸಬಹುದು.

4. ಕೆಕೆಆರ್ ತಂಡದ ಸೋಲಿನಿಂದಾಗಿ ಕಿಂಗ್ಸ್‌ ಇಲೆವೆನ್ ಪಂಜಾಬ್‌ ಪ್ಲೇ ಆಫ್ ಹಂತಕ್ಕೇರುವ ಅವಕಾಶವನ್ನು ಹೆಚ್ಚಿಸಿದೆ. ಜೊತೆಗೆ ಕೆಕೆಆರ್ ನೆಟ್ ರನ್‌ರೇಟ್‌ ಕೂಡ ತಗ್ಗಿದರ ಪರಿಣಾಮ ಪಂಜಾಬ್‌ ನೆಟ್‌ ರನ್‌ ರೇಟ್ ಮೇಲೆ ಅವಲಂಬಿತವಾಗುವ ಸಾಧ್ಯತೆಯನ್ನು ಕಡಿಮೆ ಮಾಡಿದೆ.

5. ಕಿಂಗ್ಸ್‌ ಇಲೆವೆನ್ ಪಂಜಾಬ್ ಪ್ಲೇ ಆಫ್ ಹಂತಕ್ಕೆ ತಲುಪಲು ನಾಲ್ಕರಲ್ಲಿ ಮೂರನೇ ಭಾಗದ (3/4) ಅವಕಾಶ ಹೊಂದಿದೆ.

6. ಕೆಕೆಆರ್ ತಂಡದ ಸೋಲು ಸನ್‌ರೈಸರ್ಸ್ ಹೈದ್ರಾಬಾದ್ ತಂಡಕ್ಕೂ ಪ್ಲೇ ಆಫ್ ಹಂತಕ್ಕೇರಲು ಸ್ವಲ್ಪ ಅವಕಾಶ ಮಾಡಿಕೊಟ್ಟಿದೆ. ಕೆಕೆಆರ್ ಸೋಲಿನ ಬಳಿಕ ಎಸ್‌ಆರ್‌ಹೆಚ್ ನಾಲ್ಕರಲ್ಲಿ ಒಂದು ತಂಡವಾಗಿದೆ.

7. ರಾಜಸ್ಥಾನ್ ರಾಯಲ್ಸ್‌ ಪ್ಲೇ ಆಫ್ ಹಂತಕ್ಕೇರಲು ಶೇ. 5.5ರಷ್ಟು ಸಾಧ್ಯತೆ ಇದೆ. ಜೊತೆಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರು ಇಲ್ಲವೇ ನಾಲ್ಕನೇ ಸ್ಥಾನಕ್ಕೇರಲು ನಾಲ್ಕನೇ ಒಂದು ಭಾಗದ (1/4 ) ಅವಕಾಶವಿದೆ.

8. ಮುಂಬೈ ಇಂಡಿಯನ್ಸ್ ಎರಡನೇ ಸ್ಥಾನಕ್ಕಿಂತ ಕೆಳಗೆ ಜಾರುವ ಸಾಧ್ಯತೆ ಕಡಿಮೆ

9. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ತಲುಪುವ ಎಲ್ಲಾ ಅವಕಾಶವನ್ನು ಹೊಂದಿವೆ. ಅಂಕಗಳು ಸಮನಾದಲ್ಲಿ ನೆಟ್‌ ರನ್‌ರೇಟ್‌ ಮೇಲೆ ಎರಡು , ಮೂರನೇ ಸ್ಥಾನ ನಿರ್ಧಾರವಾಗಲಿದೆ.

10 ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಆರ್‌ಸಿಬಿ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಲಾ 16 ಅಂಕಗಳನ್ನು ಹೊಂದುವ ಅವಕಾಶವು ಇದೆ.

11. ಈ ಮೇಲ್ಕಂಡ ನಾಲ್ಕು ತಂಡಗಳು 16 ಅಂಕಗಳನ್ನು ಪಡೆಯಬೇಕಾದರೆ ಕಿಂಗ್ಸ್ ಇಲೆವೆನ್ ಪಂಜಾಬ್ ಉಳಿದ ಎರಡು ಪಂದ್ಯಗಳನ್ನು ಗೆಲ್ಲಬೇಕು. ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ವಿರುದ್ಧ ಗೆದ್ದು ಆರ್‌ಸಿಬಿ ವಿರುದ್ಧ ಸೋಲಬೇಕು. ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ತಂಡಗಳು ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧ ಸೋಲಬೇಕು.

Story first published: Friday, October 30, 2020, 16:02 [IST]
Other articles published on Oct 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X