ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ದಾಖಲೆಯ ಬಾರಿಗೆ ಟಾಸ್ ಗೆದ್ದ ಹೈದರಾಬಾದ್ ನಾಯಕ ವಾರ್ನರ್

IPL 2020 Playoffs: SRH captain David Warner wins the toss for 11th time this season

ಐಪಿಎಲ್ 2020ಯ ಪ್ಲೇ ಆಫ್ ಪಂದ್ಯದಲ್ಲು ಆರ್‌ಸಿಬಿ ಹಾಗೂ ಎಸ್‌ಆರ್‌ಹೆಚ್ ತಂಡಗಳು ಮುಖಾಮುಖಿಯಾಗಿದೆ. ಎಲಿಮಿನೇಟರ್ ಪಂದ್ಯವಾಗಿರುವ ಇಂದಿನ ಕಾದಾಟದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಟಾಸ್ ಗೆದ್ದಿದೆ. ಹೀಗಾಗಿ ಟೂರ್ನಿಯಲ್ಲಿ ಹೆಚ್ಚು ಬಾರಿ ಟಾಸ್ ಗೆದ್ದ ದಾಖಲೆಯಲ್ಲಿ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಕೂಡ ಸೇರಿಕೊಂಡಿದ್ದಾರೆ.

ಐಪಿಎಲ್‌ನ ಈ ಬಾರಿಯ ಆವೃತ್ತಿಯಲ್ಲಿ ವಾರ್ನರ್ ಬರೊಬ್ಬರಿ 11 ಬಾರಿ ಟಾಸ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ಆವೃತ್ತಿಯಲ್ಲಿ ನಾಯಕ ಹೆಚ್ಚು ಬಾರಿ ಟಾಸ್ ಗೆದ್ದ ದಾಖಲೆಗೆ ಇದು ಸಮವಾಗಿದೆ. ಈ ಹಿಂದೆ ಇಬ್ಬರು ನಾಯಕರು ಇಷ್ಟೇ ಸಂಖ್ಯೆಯಲ್ಲಿ ಟಾಸ್ ಗೆದ್ದ ದಾಖಲೆ ಹೊಂದಿದ್ದಾರೆ.

ಐಪಿಎಲ್ 2020: ಮಹತ್ವದ ಮೈಲಿಗಲ್ಲಿನ ಸನಿಹದಲ್ಲಿ ಡೇವಿಡ್ ವಾರ್ನರ್ಐಪಿಎಲ್ 2020: ಮಹತ್ವದ ಮೈಲಿಗಲ್ಲಿನ ಸನಿಹದಲ್ಲಿ ಡೇವಿಡ್ ವಾರ್ನರ್

ಡೇವಿಡ್ ವಾರ್ನರ್ ಅವರನ್ನು ಹೊರತು ಪಡಿಸಿ ಐಪಿಎಲ್ ಟೂರ್ನಿಯೊಂದರಲ್ಲಿ 11 ಬಾರಿ ಟಾಸ್ ಗೆದ್ದ ದಾಖಲೆಯನ್ನು ಇಬ್ಬರು ನಾಯಕರು ಹೊಂದಿದ್ದಾರೆ. ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಇಷ್ಟೇ ಸಂಖ್ಯೆಯಲ್ಲಿ ಟಾಸ್ ಗೆದ್ದಿದ್ದಾರೆ.

ಇನ್ನು ಈ ಟಾಸ್ ಗೆಲುವಿನಲ್ಲಿ ಕುತೂಹಲಕಾರಿ ಸಂಗತಿಯೊಂದಿದೆ. ರೋಹಿತ್ ಶರ್ಮಾ 2017ರ ಆವೃತ್ತಿಯಲ್ಲಿ 11 ಟಾಸ್ ಗೆದಗದಿದ್ದರು ಹಾಗೂ ಆ ಬಾರಿಯ ಟೂರ್ನಿಯಲ್ಲಿ ಮುಂಬೈ ಚಾಂಪಿಯನ್ ಪಟ್ಟಕ್ಕೇರಿತ್ತು. 2018ರ ಆವೃತ್ತಿಯಲ್ಲಿ ಎರಡು ವರ್ಷಗಳ ನಿಷೇಧದಿಂದ ವಾಪಾಸ್ ಬಂದ ಚೆನ್ನೈ ಪರವಾಗಿ ನಾಯಕ ಧೋನಿ ಈ ದಾಖಲೆಯನ್ನು ಮರುಕಳಿಸಿದರು. ಆ ಆವೃತ್ತಿಯಲ್ಲಿ ಚೆನ್ನೈ ಕೂಡ ಚಾಂಪಿಯನ್ ಪಟ್ಟಕ್ಕೇರಿತ್ತು. ಹೀಗಾಗಿ ಈ ಬಾರಿ ಹೈದರಾಬಾದ್‌ ಕೂಡ ಈ ಅದೃಷ್ಠವಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

Story first published: Friday, November 6, 2020, 20:06 [IST]
Other articles published on Nov 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X