ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ಗೆ 48 ವರ್ಷದ ಪ್ರವೀಣ್ ತಾಂಬೆ ಅನರ್ಹ: ಖಚಿತಪಡಿಸಿದ ಐಪಿಎಲ್ ಮುಖ್ಯಸ್ಥ

ipl 2020: Pravin Tambe Disqualified From Tournament

48 ವರ್ಷದ ಪ್ರವೀಣ್ ತಾಂಬೆಯನ್ನು ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್ ತಂಡ ಖರೀದಿ ಮಾಡಿತ್ತು. ಈ ಮೂಲಕ ಈ ಬಾರಿಯ ಐಪಿಎಲ್‌ನಲ್ಲೂ ಹಿರಿಯ ಆಟಗಾರ ಪ್ರವೀಣ್ ತಾಂಬೆ ಪಾಲ್ಗೊಳ್ಳುವುದು ಖಚಿತವಾಗಿತ್ತು. ಆದರೆ ಪ್ರವೀಣ್ ತಾಂಬೆ ತಾವೇ ಮಾಡಿಕೊಂಡ ತಪ್ಪಿನಿಂದ ಐಪಿಎಲ್‌ನಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

ಪ್ರವೀಣ್ ತಾಂಬೆಯನ್ನು ಕೊಲ್ಕತ್ತಾ ನೈಟ್‌ ರೈಡರ್ಸ್ ತಂಡ 20 ಲಕ್ಷ ರೂಪಾಯಿಗೆ ಖರೀದಿ ಮಾಡಿತ್ತು. ಖರೀದಿಯ ಬಳಿಕ ಪ್ರವೀಣ್ ತಾಂಬೆ ಅನರ್ಹಗೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಈಗ ಈ ವಿಚಾರವಾಗಿ ಸ್ವತಃ ಐಪಿಎಲ್ ಮ್ಯಾನೇಜ್‌ಮೆಂಟ್ ಖಚಿತಪಡಿಸಿದೆ. ತಾಂಬೆ ಅನರ್ಹತೆಯನ್ನು ಸ್ಪಷ್ಟಪಡಿಸಿದೆ.

ಮಾರ್ಚ್ 21ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತರಬೇತಿ ಶುರುಮಾರ್ಚ್ 21ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತರಬೇತಿ ಶುರು

ಈ ಬಗ್ಗೆ ಐಪಿಎಲ್‌ ಮುಖ್ಯಸ್ಥ ಬೃಜೇಷ್ ಪಟೇಲ್ ಅವರು ಸ್ಪಷ್ಟಪಡಿಸಿದ್ದಾರೆ. ಬಿಸಿಸಿಐ ನಿಯಮಗಳನ್ನು ಪ್ರವೀಣ್ ತಾಂಬೆ ಉಲ್ಲಂಘಿಸಿದ್ದಾರೆ. ನಿವೃತ್ತಿಯನ್ನು ಘೋಷಿಸದೇ ವಿದೇಶಿ ಟೂರ್ನಿಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಆದರೆ ತಾಂಬೆ ಇದನ್ನು ಧಿಕ್ಕರಿಸಿರುವುದರಿಂದ ಅವರು ಅನರ್ಹರಾಗುತ್ತಾರೆ ಎಂದು ಬ್ರಿಜೇಷ್ ಪಟೇಲ್ ಸ್ಪಷ್ಟಪಡಿಸಿದ್ದಾರೆ.

ಪ್ರವೀಣ್ ತಾಂಬೆ ಕಳೆದ ವರ್ಷ ಬಿಸಿಸಿಐನ ನಿಯಮವನ್ನು ಮೀರಿ ಅಬುದಾಬಿ ಟಿ10 ಲೀಗ್‌ನಲ್ಲಿ ಪ್ರವೀಣ್ ತಾಂಬೆ ಪಾಲ್ಗೊಂಡಿದ್ದರು. ಸಿಂಧೀಸ್ ತಂಡವನ್ನು ಈ ಟೂರ್ನಿಯಲ್ಲಿ ತಾಂಬೆ ಪ್ರತಿನಿಧಿಸಿದ್ದರು. ಹೀಗಾಗಿ ಪ್ರವೀಣ್ ತಾಂಬೆ ಐಪಿಎಲ್ 2020ರಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

ಐಪಿಎಲ್‌ನಿಂದ ಭಾರತದಲ್ಲಿ ಕ್ರಿಕೆಟ್‌ ಬೆಳವಣಿಗೆ: ಶಾಹಿದ್ ಅಫ್ರಿದಿಐಪಿಎಲ್‌ನಿಂದ ಭಾರತದಲ್ಲಿ ಕ್ರಿಕೆಟ್‌ ಬೆಳವಣಿಗೆ: ಶಾಹಿದ್ ಅಫ್ರಿದಿ

ಪ್ರವೀಣ್ ತಾಂಬೆ ಈವರೆಗೆ 33 ಐಪಿಎಲ್ ಪಂದ್ಯಗಳಲ್ಲಿ ಆಡಿದ್ದಾರೆ. ರಾಜಸ್ಥಾನ ರಾಯನ್ಸ್ ಗುಜರಾತ್ ಲಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿ 28 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಈ ಬಾರಿ ಪ್ರವೀಣ್ ತಾಂಬೆ ಕೆಕೆಆರ್ ತಂಡದ ಪಾಲಾಗಿದ್ದರು.

Story first published: Thursday, February 27, 2020, 14:01 [IST]
Other articles published on Feb 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X