ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ಗೆ ಅನರ್ಹನಾದರೂ ಕೆಕೆಆರ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಪ್ರವೀಣ್ ತಾಂಬೆ!

Ipl 2020: Pravin Tambe Joining Kolkata Knight Riders Confirms Ceo Venky Mysore

ಕಳೆದ ವರ್ಷಾಂತ್ಯದಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ 48ನೇ ವಯಸ್ಸಿನಲ್ಲಿ ಕೆಕೆಆರ್ ತಂಡಕ್ಕೆ ಹರಾಜಾಗುವ ಮೂಲಕ ಪ್ರವೀಣ್ ತಾಂಬೆ ಎಲ್ಲರ ಹುಬ್ಬೇರಿಸಿದ್ದರು. ಐಪಿಎಲ್‌ನಲ್ಲಿ ಹರಾಜಾದ ಅತ್ಯಂತ ಹಿರಿಯ ಆಟಗಾರ ಎಂಬ ಕೀರ್ತಿಗೆ ಪ್ರವೀಣ್ ತಾಂಬೆ ಭಾಜನರಾಗಿದ್ದರು. ಆದರೆ ಬಳಿಕ ವಿದೇಶಿ ಫ್ರಾಂಚೈಸಿ ಜೊತೆಗೆ ಒಪ್ಪಂದ ಮಾಡಿಕೊಂಡ ಹಿನ್ನೆಲೆಯಲ್ಲಿ ಬಿಸಿಸಿಐ ನಿಯಮದ ಪ್ರಕಾರ ಈ ಬಾರಿಯ ಐಪಿಎಲ್‌ನಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

ಹಾಗಿದ್ದರೂ ಪ್ರವೀಣ್ ತಾಂಬೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ಬಾರಿಯ ಐಪಿಎಲ್‌ ಆರಂಭಕ್ಕೆ ಬೆರಳೆಣಿಕೆಯ ದಿನಗಳಿರುವಾಗ ಪ್ರವೀಣ್ ತಾಂಬೆ ಕೆಕೆಆರ್ ತಂಡವನ್ನು ಸೇರಿಕೊಳ್ಳಲಿರುವ ಬಗ್ಗೆ ಕೆಕೆಆರ್ ತಂಡದ ಸಿಇಒ ವೆಂಕಿ ಮೈಸೂರ್ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಈ ಬಗ್ಗೆ ವಿವರವಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇಂಗ್ಲೆಂಡ್ vs ಆಸಿಸ್: ಚೇತರಿಸಿಕೊಂಡ ಸ್ಟೀವ್ ಸ್ಮಿತ್ 2ನೇ ಏಕದಿನಕ್ಕೆ ಲಭ್ಯ ಇಂಗ್ಲೆಂಡ್ vs ಆಸಿಸ್: ಚೇತರಿಸಿಕೊಂಡ ಸ್ಟೀವ್ ಸ್ಮಿತ್ 2ನೇ ಏಕದಿನಕ್ಕೆ ಲಭ್ಯ

ಹಾಗಾದರೆ ಐಪಿಎಲ್‌ನಲ್ಲಿ ಆಡಲು ಅನರ್ಹಗೊಂಡರೂ ಪ್ರವೀಣ್ ತಾಂಬೆ ಕೆಕೆಆರ್ ತಂಡವನ್ನು ಸೇರಿಕೊಂಡಿದ್ದೇಕೆ? ಪ್ರವೀಣ್ ತಾಂಬೆಯ ಬವಾಬ್ಧಾರಿ ಏನಿರಲಿದೆ ಎಂಬ ಬಗ್ಗೆ ತಿಲಿಯಲು ಮುಂದೆ ಓದಿ..

ಸಿಪಿಎಲ್‌ನಲ್ಲಿ ಪಾಲ್ಗೊಂಡಿದ್ದ ಪ್ರವೀಣ್ ತಾಂಬೆ

ಸಿಪಿಎಲ್‌ನಲ್ಲಿ ಪಾಲ್ಗೊಂಡಿದ್ದ ಪ್ರವೀಣ್ ತಾಂಬೆ

ಪ್ರವೀಣ್ ತಾಂಬೆ ಈ ಬಾರಿಯ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶಾರೂಖ್ ಖಾನ್ ಒಡೆತನದ ಸಿಪಿಎಲ್ ಫ್ರಾಂಚೈಸಿ ಟಿಕೆಆರ್ ತಂಡದಲ್ಲಿ ಆಡುವ ಮೂಲಕ ಸಿಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಖ್ಯಾತಿಗೆ ಒಳಗಾಗಿದ್ದಾರೆ. ಸಿಪಿಎಲ್‌ ಟೂರ್ನಿಯ ಅತ್ಯಂತ ಯಶಸ್ವಿ ತಂಡವೆನಿಸಿಕೊಂಡಿರುವ ಟಿಕೆಆರ್ ಈ ಬಾರಿ ನಾಲ್ಕನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಈ ತಂಡದಲ್ಲಿ ಸ್ಪಿನ್ನರ್ ಆಗ ಪ್ರವೀಣ್ ತಾಂಬೆ ಮಿಂಚಿದ್ದರು. 3 ಪಂದ್ಯಗಳಲ್ಲಿ ಆಡಲಿಳಿದಿದ್ದ ತಾಂಬೆ ಕೇವಲ 4ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದರು.

ಐಪಿಎಲ್‌ಗೆ ಅನರ್ಹ ಪ್ರವೀಣ್ ತಾಂಬೆ

ಐಪಿಎಲ್‌ಗೆ ಅನರ್ಹ ಪ್ರವೀಣ್ ತಾಂಬೆ

ಐಪಿಎಲ್‌ನಲ್ಲೂ ಶಾರಖ್ ಖಾನ್ ಒಡೆತನದ ಕೆಕೆಆರ್ ತಂಡಕ್ಕೆ ಪ್ರವೀಣ್ ತಾಂಬೆ 20 ಲಕ್ಷ ಮೂಲ ಬೆಲೆಗೆ ಪ್ರವೀಣ್ ತಾಂಬೆ ಮಾರಾಟವಾಗಿದ್ದರು. ಆದರೆ ಬಳಿಕ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಒಪ್ಪಂದ ಮಾಡಿಕೊಂಡ ಕಾರಣದಿಂದಾಗಿ ಐಪಿಎಲ್‌ನಲ್ಲಿ ಆಡುವುದರಿಂದ ಅನರ್ಹಗೊಂಡರು. ಬಿಸಿಸಿಐನ ನಿಯಮದ ಪ್ರಕಾರ ಭಾರತೀಯ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪಡೆಯದ ಹೊರತು ವಿದೇಶಿ ಟೂರ್ನಿಯಲ್ಲಿ ಪಾಲ್ಗೊಳ್ಳುವಂತಿಲ್ಲ. ಈ ನಿಯಮವನ್ನು ಮುರಿದ ಕಾರಣ ತಾಂಬೆ ಅನರ್ಹಗೊಂಡರು.

ಕೆಕೆಆರ್ ತಂಡವನ್ನು ಕೂಡಿದ್ದೇಕೆ ತಾಂಬೆ

ಕೆಕೆಆರ್ ತಂಡವನ್ನು ಕೂಡಿದ್ದೇಕೆ ತಾಂಬೆ

ಐಪಿಎಲ್‌ನಲ್ಲಿ ಆಡುವ ಅರ್ಹತೆಯನ್ನು ಕಳೆದುಕೊಂಡರೂ ಕೂಡ ಪ್ರವೀಣ್ ತಾಂಬೆ ಸಿಪಿಎಲ್ ಟೂರ್ನಿ ಮುಗಿಸಿ ನೇರವಾಗಿ ಯುಎಇಯಲ್ಲಿ ಕೆಕೆಆರ್ ತಂಡವನ್ನು ಸೇರಿಕೊಂಡಿದ್ದಾರೆ. ಆದರೆ ಆಟಗಾರನಾಗುಗಿ ಅಲ್ಲ. ಹಿರಿಯ ಆಟಗಾರನಾಗಿ ಪ್ರವೀಣ್ ತಾಂಬೆಯ ಅನುಭವ ಹಾಗೂ ಅವರಲ್ಲಿನ ಉತ್ಸಾಹದಿಂದ ತಂಡ ಅವರ ಇರುವಿಕೆಯನ್ನು ಬಯಸಿದೆ ಎಂದು ಕೆಕೆಆರ್ ತಂಡದ ಸಿಇಒ ವೆಂಕಿ ಮೈಸೂರ್ ಹೇಳಿದ್ದಾರೆ.

ತಾಂಬೆ ಉತ್ಸಾಹ ಹಾಗೂ ಅನುಭವ ಕೆಕೆಆರ್‌ಗೆ ನೆರವು

ತಾಂಬೆ ಉತ್ಸಾಹ ಹಾಗೂ ಅನುಭವ ಕೆಕೆಆರ್‌ಗೆ ನೆರವು

ಟಿಕೆಆರ್ ತಂಡದ ಸಹ ಆಟಗಾರರು ಪ್ರವೀಣ್ ತಾಂಬೆ ಅವರ ಉತ್ಸಾಹವನ್ನು ಇಷ್ಟಪಟ್ಟಿದ್ದಾರೆ. ಹೀಗಾಗಿ ಐಪಿಎಲ್ 2020 ರಲ್ಲಿ ಅವರು ಕೋಲ್ಕತಾ ನೈಟ್ ರೈಡರ್ಸ್‌ಗೆ ಸೇರ್ಪಡೆಗೊಳ್ಳಬೇಕೆಂಬ ಜನಪ್ರಿಯ ಬೇಡಿಕೆಯಿದೆ ಎಂದು ವೆಂಕಿ ಮೈಸೂರು ಹೇಳಿದರು. ಯುಎಇ ಸ್ಪಿನ್ನರ್ ಸ್ನೇಹಿ ಪಿಚ್ ಆಗಿರುವುದರಿಂದ ತಂಡದ ಸಿದ್ಧತೆಗೆ ತಾಂಬೆ ಅನುಭವವು ಸೂಕ್ತವಾಗಲಿದೆ ಎಂದು ಕೆಕೆಆರ್ ಸಿಇಒ ಬಹಿರಂಗಪಡಿಸಿದರು.

ಫ್ರಾಂಚೈಸಿ ಮೆಚ್ಚುಗೆಗೆ ಪಾತ್ರರಾದ ತಾಂಬೆ

ಫ್ರಾಂಚೈಸಿ ಮೆಚ್ಚುಗೆಗೆ ಪಾತ್ರರಾದ ತಾಂಬೆ

ಟಿಕೆಆರ್ ಹುಡುಗರು ಪ್ರವೀಣ್ ತಾಂಬೆ ಅವರ ಸಕಾರಾತ್ಮಕತೆ, ಸ್ವಭಾವ ಮತ್ತು ಅವರಲ್ಲಿನ ಉತ್ಸಾಹದಿಂದಾಗಿ ಅವರನ್ನು ಸಂಪೂರ್ಣವಾಗಿ ಪ್ರೀತಿಸುತ್ತಿದ್ದರು. ತರಬೇತುದಾರರು ಹೇಳುವ ಪ್ರಕಾರ ಪ್ರವೀಣ್ ತಾಂಬೆ ಮೈದಾನಕ್ಕೆ ಬರುವ ಮೊದಲ ವ್ಯಕ್ತಿಯೂ ಆಗಿದ್ದರು. ಅವರಲ್ಲಿನ ಉತ್ಸಾಹ ಯುವ ಆಟಗಾರೂ ನಾಚುವಂತೆ ಮಾಡುತ್ತದೆ ಎಂದು ವೆಂಕಿ ಮೈಸೂರ್ ಕೆಕೆಆರ್ ತಂಡಕ್ಕೆ ಪ್ರವೀಣ್ ತಾಂಬೆ ಸೇರ್ಪಡೆಯಾಗುತ್ತಿರುವ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ.

Story first published: Monday, September 14, 2020, 10:05 [IST]
Other articles published on Sep 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X