ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಕೆಆರ್‌ನ ಅತೀ ಹಿರಿಯ ಆಟಗಾರನಿಗೆ ಐಪಿಎಲ್ ಆಡಲು ಅವಕಾಶವೇ ಇಲ್ಲ!

IPL 2020: Pravin Tambe not eligible to play IPL

ಕೋಲ್ಕತ್ತಾ, ಜನವರಿ 13: ಅನುಭವಿ ಸ್ಪಿನ್ನರ್ ಪ್ರವೀಣ್ ತಾಂಬೆಗೆ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2020ರ ಆವೃತ್ತಿಯಲ್ಲಿ ಆಡಲು ಅವಕಾಶವೇ ಇಲ್ಲವಾಗಿದೆ. ಬಿಸಿಸಿಐ ನಿಯಮ ಮೀರಿದ ಕಾರಣಕ್ಕಾಗಿ ತಾಂಬೆಯನ್ನು ಐಪಿಎಲ್‌ನಿಂದ ಅನರ್ಹಗೊಳಿಸಲಾಗಿದೆ.

ನಿವೃತ್ತಿ ವಾಪಾಸ್ ಪಡೆದು ತಂಡಕ್ಕೆ ಮರಳಿದ ವೆಸ್ಟ್‌ ಇಂಡೀಸ್ ಸ್ಟಾರ್ ಪ್ಲೇಯರ್ನಿವೃತ್ತಿ ವಾಪಾಸ್ ಪಡೆದು ತಂಡಕ್ಕೆ ಮರಳಿದ ವೆಸ್ಟ್‌ ಇಂಡೀಸ್ ಸ್ಟಾರ್ ಪ್ಲೇಯರ್

ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಖರೀದಿಸಲ್ಪಟ್ಟ ಅತೀ ಹಿರಿಯ ಕ್ರಿಕೆಟರ್‌ ಆಗಿ ಪ್ರವೀಣ್ ಗಮನ ಸೆಳೆದಿದ್ದರು. ದುಬೈಯ ಶಾರ್ಜಾದಲ್ಲಿ ನಡೆದಿದ್ದ ಟಿ20 ಲೀಗ್ ಟೂರ್ನಿಯಲ್ಲಿ ಪ್ರವೀಣ್ ತಾಂಬೆ ಪಾಲ್ಗೊಂಡಿದ್ದರು.

ನ್ಯೂಜಿಲೆಂಡ್ ವಿರುದ್ಧದ ಟಿ20ಐಗೆ ಭಾರತ ತಂಡ ಪ್ರಕಟ, ಧೋನಿ ಇಲ್ಲನ್ಯೂಜಿಲೆಂಡ್ ವಿರುದ್ಧದ ಟಿ20ಐಗೆ ಭಾರತ ತಂಡ ಪ್ರಕಟ, ಧೋನಿ ಇಲ್ಲ

ಬಿಸಿಸಿಐ ನಿಯಮಗಳ ಪ್ರಕಾರ ಭಾರತದ ಸಕ್ರಿಯ ಆಟಗಾರ ನಿವೃತ್ತಿಗೂ ಮುನ್ನ ಯಾವುದೇ ವಿದೇಶಿ ಟೂರ್ನಿಗಳಲ್ಲಿ ಪಾಲ್ಗೊಳ್ಳುವಂತಿಲ್ಲ.

ಕೆಕೆಆರ್‌ಗೆ ಹೊಡೆತ

ಕೆಕೆಆರ್‌ಗೆ ಹೊಡೆತ

2020ರ ಐಪಿಎಲ್‌ಗಾಗಿ ನಡೆದ ಆಟಗಾರರ ಹರಾಜಿನಲ್ಲಿ 48ರ ಹರೆಯದ ಪ್ರವೀಣ್ ತಾಂಬೆಯನ್ನು ಮಾಜಿ ಚಾಂಪಿಯನ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮೂಲಬೆಲೆ 20 ಲಕ್ಷ ರೂ.ಗೆ ಖರೀದಿಸಿತ್ತು. ಆದರೆ ತಾಂಬೆ ಅನರ್ಹ ಗೊಂಡಿರುವುದರಿಂದ ಕೆಕೆಆರ್‌ಗೆ ಸಣ್ಣಮಟ್ಟಿನ ಹಿನ್ನಡೆಯಾಗಿದೆ, ಆಟಗಾರನನ್ನು ಬದಲಿಸಬೇಕಿದೆ.

ಅನಹರ್ತೆ ಖಾತರಿ

ಅನಹರ್ತೆ ಖಾತರಿ

ಅಧಿಕೃತವಾಗಿ ನಿವೃತ್ತಿ ಘೋಷಿಸದೆ ವಿದೇಶಿ ಟೂರ್ನಿ ಟಿ10 ಲೀಗ್‌ನಲ್ಲಿ ಪಾಲ್ಗೊಂಡಿದ್ದಕ್ಕಾಗಿ ಅತೀ ಹಿರಿಯ ಆಟಗಾರ ಪ್ರವೀಣ್ ತಾಂಬೆ, 2020ರ ಐಪಿಎಲ್‌ನಲ್ಲಿ ಆಡಲು ಅರ್ಹರಲ್ಲ ಎಂದು ಐಪಿಎಲ್‌ನ ನೂತನ ಅಧ್ಯಕ್ಷ ಬ್ರಿಜೇಶ್ ಪಟೇಲ್ ಖಾತರಿಪಡಿಸಿದ್ದಾರೆ. ಹೀಗಾಗಿ ತಾಂಬೆಯ ಐಪಿಎಲ್ ಆಸೆ ಮಣ್ಣುಪಾಲಾಗಿದೆ.

ಪ್ರತಿಭಾನ್ವಿತ ಬೌಲರ್

ಪ್ರತಿಭಾನ್ವಿತ ಬೌಲರ್

ತಾಂಬೆ ಈ ಹಿಂದಿನ ಐಪಿಎಲ್ ಸೀಸನ್‌ಗಳಲ್ಲಿ ಆಡಿದ ಅನುಭವವಿರುವವರು. ರಾಜಸ್ಥಾನ ರಾಯಲ್, ಗುಜರಾತ್ ಲಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್‌ ಹೀಗೆ ಒಟ್ಟು 3 ತಂಡಗಳಿಗಾಗಿ 4 ಐಪಿಎಲ್‌ ಸೀಸನ್‌ಗಳಲ್ಲಿ ಆಡಿದ್ದರು. ಒಟ್ಟಾರೆ 33 ಐಪಿಎಲ್ ಪಂದ್ಯಗಳನ್ನಾಡಿದ ಅನುಭವ ತಾಂಬೆಗಿದೆ. ಅಲ್ಲದೆ ಆರ್‌ಆರ್‌ ಪರ 2014ರ ಸೀಸನ್‌ನಲ್ಲಿ 15 ಪಂದ್ಯಗಳಲ್ಲಿ 28 ವಿಕೆಟ್‌ ಪಡೆದಿದ್ದ ಪ್ರವೀಣ್ ಗಮನ ಸೆಳೆದಿದ್ದರು.

ಭಜ್ಜಿ, ಯುವಿಗೂ ಇದೇ ಕಾಟ

ಭಜ್ಜಿ, ಯುವಿಗೂ ಇದೇ ಕಾಟ

2016ರಿಂದಲೂ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳದಿರುವ ಹರ್ಭಜನ್ ಸಿಂಗ್ ಅವರನ್ನು ಇಂಗ್ಲೆಂಡ್‌ನ ನೂತನ ಮಾದರಿಯ ಕ್ರಿಕೆಟ್ 'ದ ಹಂಡ್ರೆಡ್‌'ಗೆ ಹೆಸರಿಸಲಾಗಿತ್ತು. ಆದರೆ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಆಡುವ ನಿಟ್ಟಿನಿಂದ ಭಜ್ಜಿ 'ದ ಹಂಡ್ರೆಡ್‌'ನಿಂದ ತಮ್ಮ ಹೆಸರನ್ನು ತೆಗೆಸಿದ್ದರು. ಸ್ಫೋಟಕ ಬ್ಯಾಟ್ಸ್‌ಮನ್ ಯುವಿಗೂ ಇಂಥದ್ದೇ ಸಮಸ್ಯೆ ಕಾಡಿತ್ತು. ಇತ್ತ ಟೀಮ್ ಇಂಡಿಯಾದಲ್ಲೂ ಅವಕಾಶ ಸಿಗಲಿಲ್ಲ, ಅತ್ತ ವಿದೇಶಿ ಟೂರ್ನಿಗಳಲ್ಲೂ ಆಡುವಂತಿರಿಲ್ಲ. ಹೀಗಾಗಿ ಯುವಿ ನಿವೃತ್ತಿ ಘೋಷಿಸಿ ಆ ಬಳಿಕ ಕೆನಡಾ ಗ್ಲೋಬಲ್ ಟಿ20 ಲೀಗ್‌ನಲ್ಲಿ ಪಾಲ್ಗೊಂಡಿದ್ದರು; ಮತ್ತೆ ಟಿ10 ಲೀಗ್‌ನಲ್ಲೂ ಬ್ಯಾಟ್‌ ಬೀಸಿದ್ದರು.

Story first published: Monday, January 13, 2020, 15:01 [IST]
Other articles published on Jan 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X