ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭುವನೇಶ್ವರ್ ಕುಮಾರ್ ಸ್ಥಾನಕ್ಕೆ ಆಂಧ್ರದ ಎಡಗೈ ವೇಗಿ ಸೇರ್ಪಡೆ

ಗಾಯದಿಂದಾಗಿ ಐಪಿಎಲ್ ಟೂರ್ನಿಯಿಂದಲೇ ಹೊರಬಿದ್ದಿರುವ ಸನ್ ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ವೇಗಿ ಭುವನೇಶ್ವರ್ ಕುಮಾರ್ ಅವರ ಸ್ಥಾನಕ್ಕೆ ಆಂಧ್ರಪ್ರದೇಶದ ಯುವ ಆಟಗಾರನನ್ನು ಸೇರಿಸಿಕೊಳ್ಳಲಾಗಿದೆ. ಬೌಲಿಂಗ್ ಬಲವನ್ನೇ ಮುಖ್ಯವಾಗಿ ನೆಚ್ಚಿಕೊಂಡಿದ್ದ ಸನ್ ರೈಸರ್ಸ್ ತಂಡ ಈ ಬಾರಿ ಸತತ ಸೋಲುಗಳನ್ನು ಕಂಡಿತ್ತು. ಟೂರ್ನಿಯ ಆರಂಭದಲ್ಲಿಯೇ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಗಾಯಗೊಂಡು ಹೊರನಡೆದಿದ್ದರು. ಆ ಗಾಯದ ಮೇಲೆ ಬರೆ ಎಳೆದಂತೆ ಭುವನೇಶ್ವರ್ ಕುಮಾರ್ ಅನುಪಸ್ಥಿತಿ ಮತ್ತಷ್ಟು ಗಾಸಿಯುಂಟುಮಾಡಿದೆ.

ಮಿಚೆಲ್ ಮಾರ್ಷ್ ಅವರ ಬದಲು ವೆಸ್ಟ್ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ ಅವರನ್ನು ಸೋಮವಾರ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 19ನೇ ಓವರ್ ಬೌಲಿಂಗ್ ಮಾಡುವಾಗ ಭುವನೇಶ್ವರ್ ಕುಮಾರ್ ಗಾಯಗೊಂಡಿದ್ದರು. ಅವರ ಸ್ಥಾನಕ್ಕೆ ಎಸ್‌ಆರ್‌ಎಚ್ ಫ್ರಾಂಚೈಸಿಯು ಮತ್ತೊಬ್ಬ ವೇಗಿ ಪೃಥ್ವಿ ರಾಜ್ ಯಾರ್ರಾ ಅವರನ್ನು ಆಯ್ಕೆ ಮಾಡಿದೆ. ಮುಂದೆ ಓದಿ.

 IPL ನಿಂದ ಹೊರಬಿದ್ದ ಭುವನೇಶ್ವರ್ ಕುಮಾರ್ ಸ್ಥಾನಕ್ಕೆ ಈ ಮೂವರಲ್ಲಿ ಯಾರು? IPL ನಿಂದ ಹೊರಬಿದ್ದ ಭುವನೇಶ್ವರ್ ಕುಮಾರ್ ಸ್ಥಾನಕ್ಕೆ ಈ ಮೂವರಲ್ಲಿ ಯಾರು?

ಭುವಿ ಬದಲು ಪೃಥ್ವಿರಾಜ್

ಭುವಿ ಬದಲು ಪೃಥ್ವಿರಾಜ್

ಎಡಗೈ ವೇಗದ ಬೌಲರ್ ಪೃಥ್ವಿರಾಜ್ ಯಾರ್ರಾ ಅವರ ಸೇರ್ಪಡೆಯನ್ನು ಸನ್ ರೈಸರ್ಸ್ ತಂಡದ ಅಧಿಕೃತ ಟ್ವಿಟ್ಟರ್ ಖಾತೆ ಖಚಿತಪಡಿಸಿದೆ. ಜತೆಗೆ ಭುವನೇಶ್ವರ್ ಕುಮಾರ್ ಅವರ ವೇಗದ ಚೇತರಿಕೆಗೆ ಹಾರೈಸಿದೆ. ಈ ಆವೃತ್ತಿಯ ಉಳಿದ ಪಂದ್ಯಗಳಿಗೆ ಭುವನೇಶ್ವರ್ ಜಾಗದಲ್ಲಿ ಪೃಥ್ವಿರಾಜ್ ಆಡಲಿದ್ದಾರೆ ಎಂದು ಅದು ತಿಳಿಸಿದೆ.

ಎರಡು ಪಂದ್ಯ ಆಡಿದ್ದರು

ಎರಡು ಪಂದ್ಯ ಆಡಿದ್ದರು

ಪೃಥ್ವಿ ರಾಜ್ ಯಾರ್ರಾ ಈ ಹಿಂದೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದರು. ಆದರೆ ಎರಡು ಪಂದ್ಯದ ಬಳಿಕ ಅವರನ್ನು ಮತ್ತೆ ಆಡಿಸಿರಲಿಲ್ಲ. 2019ರ ಆವೃತ್ತಿಯಲ್ಲಿ ಸನ್ ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಪೃಥ್ವಿರಾಜ್, 3 ಓವರ್‌ಗಳಲ್ಲಿ 29 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಎರಡನೆಯ ಪಂದ್ಯವನ್ನು ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಆಡಿದ್ದರು. ಅದರಲ್ಲಿ 2 ಓವರ್‌ಗಳಲ್ಲಿ 28 ರನ್ ಗಳಿಸಿದ್ದರು. ಅದರ ಬಳಿಕ ಅವರಿಗೆ ಮತ್ತೆ ಅವಕಾಶ ಸಿಕ್ಕಿರಲಿಲ್ಲ.

ಡೆಲ್ಲಿ ವಿರುದ್ಧದ ಆರ್‌ಸಿಬಿ ಸೋಲಿಗೆ ಕಾರಣ ತಿಳಿಸಿದ ಎಬಿ ಡಿವಿಲಿಯರ್ಸ್

ಪೃಥ್ವಿರಾಜ್ ಸಾಧನೆ

ಪೃಥ್ವಿರಾಜ್ ಸಾಧನೆ

22 ವರ್ಷದ ಪೃಥ್ವಿರಾಜ್, ಆಂಧ್ರಪ್ರದೇಶ ರಣಜಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 11 ಮೊದಲ ದರ್ಜೆ ಪಂದ್ಯಗಳಲ್ಲಿ 39 ವಿಕೆಟ್‌ಗಳನ್ನು ಪಡೆದಿದ್ದಾರೆ. 11 ಲಿಸ್ಟ್ ಎ ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಪಡೆದಿದ್ದಾರೆ. ಹೀಗಾಗಿ ಸ್ಥಳೀಯ ಪ್ರತಿಭೆಗೆ ಅವಕಾಶ ನೀಡಲು ಫ್ರಾಂಚೈಸಿ ಮುಂದಾಗಿದೆ. ಪೃಥ್ವಿ ರಾಜ್ 150 ಕಿಮೀ ವೇಗದಲ್ಲಿ ಚೆಂಡು ಎಸೆಯುವ ಸಾಮರ್ಥ್ಯ ಹೊಂದಿದ್ದಾರೆ.

ಎಸ್‌ಆರ್‌ಎಚ್ ವೇಗಿಗಳು

ಎಸ್‌ಆರ್‌ಎಚ್ ವೇಗಿಗಳು

ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಪ್ರಸ್ತುತ ಅನೇಕ ವೇಗಿಗಳಿದ್ದಾರೆ. ಟಿ. ನಟರಾಜನ್ ಮತ್ತು ಖಲೀಲ್ ಅಹ್ಮದ್ ಅವರ ಜತೆಗೆ ಮೂರನೇ ಎಡಗೈ ವೇಗಿಯಾಗಿ ಪೃಥ್ವಿ ಸೇರ್ಪಡೆಯಾಗಿದ್ದಾರೆ. ಸಂದೀಪ್ ಶರ್ಮಾ, ಬಸಿಲ್ ಥಂಪಿ, ಸಿದ್ಧಾರ್ಥ್ ಕೌಲ್, ಬಿಲ್ಲಿ ಸ್ಟಾನ್ಲೇಕ್ ತಂಡದಲ್ಲಿರುವ ಇತರೆ ವೇಗಿಗಳು.

Story first published: Tuesday, October 6, 2020, 17:13 [IST]
Other articles published on Oct 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X