ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೈದರಾಬಾದ್ ಅನುಭವಿಗಳನ್ನು ಡೆಲ್ಲಿ ಯುವಕರು ಎದುರಿಸಬಲ್ಲರಾ?

IPL 2020, Qualifier 2: Can Delhis young players raise against Hyderabad?

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕ್ವಾಲಿಫೈಯರ್-2ನೇ ಪಂದ್ಯ ಕುತೂಹಲ ಮೂಡಿಸಿದೆ. ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಭಾನುವಾರ ನಡೆಯುವ ಕ್ವಾಲಿಫೈಯರ್-2 ಅಥವಾ ಸೆಮಿಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಇಲ್ಲಿ ಗೆಲ್ಲುವ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಫೈನಲ್‌ನಲ್ಲಿ ಸೆಣಸಾಡಲಿದೆ.

ಆಸ್ಟ್ರೇಲಿಯಾ ಪ್ರವಾಸ ಸರಣಿಗೆ ರೋಹಿತ್ ಶರ್ಮಾ ಸೇರ್ಪಡೆ ಸಾಧ್ಯತೆಆಸ್ಟ್ರೇಲಿಯಾ ಪ್ರವಾಸ ಸರಣಿಗೆ ರೋಹಿತ್ ಶರ್ಮಾ ಸೇರ್ಪಡೆ ಸಾಧ್ಯತೆ

ಇತ್ತಂಡಗಳಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಒಂದು ಸಾರಿ ಟ್ರೋಫಿ ಜಯಿಸಿದೆ. 2016ರಲ್ಲಿ ಎಸ್‌ಆರ್‌ಎಚ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಫೈನಲ್‌ನಲ್ಲಿ ಗೆದ್ದಿತ್ತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಒಂದು ಸಾರಿಯೂ ಐಪಿಎಲ್ ಫೈನಲ್‌ಗೆ ಪ್ರವೇಶಿಸಿಲ್ಲ. ಹೀಗಾಗಿ ಡೆಲ್ಲಿ ಮುಂದೆ ಈ ಸಾರಿ ಇತಿಹಾಸ ನಿರ್ಮಿಸುವ ಅಪೂರ್ವ ಅವಕಾಶವಿದೆ.

ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಶಿಖರ್ ಧವನ್, ಅಜಿಂಕ್ಯ ರಹಾನೆ, ಮಾರ್ಕಸ್ ಸ್ಟೋಯ್ನಿಸ್, ಆರ್‌ ಅಶ್ವಿನ್ ಬಿಟ್ಟರೆ ಉಳಿದ ಹೆಚ್ಚಿನವರು ಯುವಕರು. ಪೃಥ್ವಿ ಶಾ, ರಿಷಭ್ ಪಂತ್, ಶ್ರೇಯಸ್ ಐಯ್ಯರ್, ಶಿಮ್ರನ್ ಹೆಟ್ಮೈಯರ್, ಕಾಗಿಸೊ ರಬಾಡ, ಅಕ್ಸರ್ ಪಟೇಲ್ ಇವರೆಲ್ಲ ಯಂಗ್ ಪ್ಲೇಯರ್ಸ್. ಇವರೆಲ್ಲ ಅನುಭವಿಗಳು ಹೆಚ್ಚಿರುವ ಹೈದರಾಬಾದ್‌ ಅನ್ನು ಎದುರಿಸಬಲ್ಲರಾ?

ಐಪಿಎಲ್: ಪರ್ಪಲ್ ಕ್ಯಾಪ್‌ ರೇಸ್‌ನಲ್ಲಿ ಬೂಮ್ರಾ, ರಬಾಡ-ಗೆಲ್ಲೋದ್ಯಾರು?ಐಪಿಎಲ್: ಪರ್ಪಲ್ ಕ್ಯಾಪ್‌ ರೇಸ್‌ನಲ್ಲಿ ಬೂಮ್ರಾ, ರಬಾಡ-ಗೆಲ್ಲೋದ್ಯಾರು?

ಯುವಕರ ತಂಡವಾಗಿದ್ದೂ ಕೂಡ ಡೆಲ್ಲಿ ಈ ಸಾರಿ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಕಾಣಿಸಿಕೊಂಡಿತ್ತು. ಟೂರ್ನಿ ಅಂತಿಮ ಕ್ಷಣದಲ್ಲಿ ಪೇಚಾಡಿದ್ದು ಬಿಟ್ಟರೆ ಉಳಿದಂತೆ ಡೆಲ್ಲಿ ಒಳ್ಳೆಯ ಪ್ರದರ್ಶನವನ್ನೇ ನೀಡಿತ್ತು. ಅದೇ ಆತ್ಮ ವಿಶ್ವಾಸದ ಆಟವನ್ನು ಡೆಲ್ಲಿ ಈ ಸಾರಿಯೂ ಪ್ರದರ್ಶಿಸಬೇಕಿದೆ. ಆಗ ಮಾತ್ರ ಡೆಲ್ಲಿ ತಂಡ, ಡೇವಿಡ್ ವಾರ್ನರ್, ವೃದ್ಧಿಮಾನ್ ಸಾಹ, ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ಜೇಸನ್ ಹೋಲ್ಡರ್‌ನಂತ ಅನುಭವಿಗಳನ್ನು ಎದುರಿಸಬಲ್ಲದು.

Story first published: Sunday, November 8, 2020, 14:24 [IST]
Other articles published on Nov 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X