ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಪಿನ್ನರ್ ಅಶ್ವಿನ್ ಮಾಡಿದ ಜಾದೂ, ವೃದ್ಧ ದಂಪತಿಗೆ ನೆರವಾಯ್ತು ಟ್ವೀಟ್

ದಕ್ಷಿಣ ದೆಹಲಿಯ ಮಾಳವಿಯಾ ನಗರದ ಹನುಮಾನ್ ಗುಡಿಯ ಬಳಿ ಇದ್ದ ಸಣ್ಣ ಫುಡ್ ಜಾಯಿಂಟ್ ನತ್ತ ಎಲ್ಲರ ಕಣ್ಣು ನೆಟ್ಟಿದೆ. ರಸ್ತೆ ಬದಿಯ ಈ ಆಹಾರ ಮಳಿಗೆ ''ಬಾಬಾ ಕಾ ಧಾಬಾ'' ನಡೆಸುತ್ತಿರುವವರು 80 ವರ್ಷದ ಕಾಂತಾ ಪ್ರಸಾದ್ ಮತ್ತವರ ಪತ್ನಿ ಬಾದಾಮಿ ದೇವಿ. ಇವರಿಬ್ಬರು ಕೊರೊನಾವೈರಸ್ ಲಾಕ್ಡೌನ್ ನಿಂದಾಗಿ ವ್ಯಾಪಾರವಿಲ್ಲದೆ ಕಣ್ಣೀರಿಟ್ಟಿದ್ದರು.

ಈ ವಿಡಿಯೋ ಸಕತ್ ವೈರಲ್ ಆಗಿತ್ತು. ವೈರಲ್ ವಿಡಿಯೋ ಡೆಲ್ಲಿ ಡೇರ್ ಡೆವಿಲ್ಸ್ ಆಟಗಾರ, ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಕಣ್ಣಿಗೆ ಬಿದ್ದಿದೆ. ಬಹುತೇಕ ಎಲ್ಲರಂತೆ ರೀ ಪೋಸ್ಟ್, ರೀ ಟ್ವೀಟ್ ಮಾಡಿ ಕಾಮೆಂಟ್ ಮಾಡಿ ಸುಮ್ಮನಾಗಬಹುದಾಗಿತ್ತು. ಆದರೆ, ಅಶ್ವಿನ್ ಅವರು ರೀ ಟ್ವೀಟ್ ಮಾಡಿ ಮಾಡಿಕೊಂಡ ಮನವಿ ಈಗ ಸಾರ್ವಜನಿಕರು ಸ್ಪಂದಿಸಿದ್ದಾರೆ. ಕಾಂತಾ ಪ್ರಸಾದ್ ದಂಪತಿ ಮುಖದಲ್ಲಿ ಮತ್ತೆ ಸಂತಸ ಮೂಡಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮಂಕಡಿಂಗ್ ಚರ್ಚೆ ಜಾರಿಯಲ್ಲಿರುವಾಗಲೇ ಆರ್ ಅಶ್ವಿನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡು ಇವರ ಹೋರಾಟದ ಬದುಕು, ಸ್ಫೂರ್ತಿಗೆ ನಮ್ಮ ಕೈಲಾಗುವ ನೆರವು ನೀಡೋಣ ಎಂದು ಕರೆ ನೀಡಿದ್ದರು.

ಇದು ಸಾಧ್ಯ! RCB ಉಮೇಶ್ ಬಿಟ್ಟು ಗೇಲ್ ಖರೀದಿಸಬಹುದು!

ವಸುಂಧರಾ ತಂಖಾ ಶರ್ಮ ಎಂಬುವರು ಮೊದಲಿಗೆ ಟ್ವೀಟ್ ಮಾಡಿದ ಈ ವಿಡಿಯೋ ನಂತರ ಬಾಲಿವುಡ್ ಸೆಲೆಬ್ರಿಟಿಗಳು ಸ್ಥಳೀಯ ಮುಖಂಡರ ಕಣ್ಣಿಗೂ ಬಿದ್ದಿದೆ. ಗುರುವಾರದಂದು ಕಾಂತಾ ಪ್ರಸಾದ್ ದಂಪತಿಗೆ ಕೈ ತುಂಬಾ ಕೆಲಸ ಸಿಕ್ಕಿದೆ.. ಏನಿದು ವಿಡಿಯೋ ಕಥೆ, ದಂಪತಿಗಳ ವ್ಯಥೆ ವಿವರಗಳು ಮುಂದಿದೆ..

ವಸುಂಧರಾ ಶರ್ಮ ವಿಡಿಯೋದಲ್ಲಿ ಏನಿದೆ?

ವಸುಂಧರಾ ಶರ್ಮ ವಿಡಿಯೋದಲ್ಲಿ ಏನಿದೆ?

ಈ ವಿಡಿಯೋ ನಿಜಕ್ಕೂ ನನ್ನ ಹೃದಯ ಒಡೆಯುವಂತೆ ಮಾಡಿದೆ. ದಿಲ್ಲಿ ಜನಗಳೇ ದಯವಿಟ್ಟು ನಿಮಗೆ ಸಾಧ್ಯವಾದರೆ ಮಾಳ್ವಿಯಾ ನಗರದಲ್ಲಿರುವ ಬಾಬಾ ಕಾ ಧಾಬಾಗೆ ಹೋಗಿ ಆಹಾರ ಸೇವಿಸಿ, ಈ ವೃದ್ಧ ದಂಪತಿ ಕಣ್ಣೀರು ಒರೆಸಿ, ದಂಪತಿಗೆ ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯಿದ್ದರೂ ಅವರಿಗೆ ಸಹಾಯ ಮಾಡುತ್ತಿಲ್ಲ ಎಂದು ವಸುಂಧರಾ ಶರ್ಮ (@VasundharaTankh
) ಬರೆದಿದ್ದರು. This video completely broke my heart. Dilli waalon please please go eat at बाबा का ढाबा in Malviya Nagar if you get a chance Crying faceBroken heart #SupportLocal

ವಿಡಿಯೋದಲ್ಲಿ ಕಣ್ಣೀರಿಡುವ ಕಾಂತಾ ಪ್ರಸಾದ್

ವಿಡಿಯೋದಲ್ಲಿ ಕಣ್ಣೀರಿಡುವ ಕಾಂತಾ ಪ್ರಸಾದ್

ಧಾಬಾ ನಡೆಸುವ 80 ವರ್ಷದ ಕಾಂತಾ ಪ್ರಸಾದ್ ಹಾಗೂ ಅವರ ಪತ್ನಿ ಬಾದಾಮಿ ದೇವಿ ಲಾಕ್ ಡೌನ್ ಹಾಗೂ ನಂತರದ ಪರಿಸ್ಥಿತಿಯಲ್ಲಿ ವ್ಯಾಪಾರವಿಲ್ಲದೆ, ಮಾಡಿಟ್ಟ ಅಡುಗೆ ತಿನ್ನಲು ಜನರು ಬರದಿದ್ದರಿಂದ ಕಂಗಾಲಾಗಿದ್ದರು. ಬ್ಲಾಗರ್ ಗೌರವ್ ವಾಸನ್ ಅವರು ಚಿತ್ರೀಕರಿಸಿದ ವಿಡಿಯೋ ಇದಾಗಿದ್ದು, ನಂತರ ವಸುಂಧರಾ ಶರ್ಮ ಹಂಚಿಕೊಂಡು ವೈರಲ್ ಆಗಿದೆ. ಬೆಳಿಗ್ಗೆ 6.30ಕ್ಕೆ ತಮ್ಮ ಮನೆಯಲ್ಲಿ ದಾಲ್, ಪಲ್ಯ, ಪರೋಟ ಮತ್ತು ಅನ್ನ ತಯಾರಿಸಿ 9.30ರೊಳಗಾಗಿ ಈ ಧಾಬಾ ಓಪನ್ ಮಾಡುತ್ತೇವೆ. ಆದರೆ, ಜನ ಬರುತ್ತಿಲ್ಲ, ದಿನಕ್ಕೆ 60 ರು ವ್ಯಾಪಾರವಾದರೆ ಹೆಚ್ಚು ಎಂದು ಕಾಂತಾ ಪ್ರಸಾದ್ ಕಣ್ಣೀರಿಡುತ್ತಾರೆ.

ಹರಿದು ಬಂದ ನೆರವಿನ ಮಹಾಪೂರ

ಕ್ರಿಕೆಟ್ ಅಶ್ವಿನ್ ಕೇವಲ ಟ್ವೀಟ್ ಮಾಡಿದ್ದಷ್ಟೇ ಅಲ್ಲ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮ್ಯಾನೇಜ್ಮೆಂಟ್ ಸಂಪರ್ಕಿಸಿ ನೆರವು ಒದಗಿಸಲು ಮುಂದಾಗಿದ್ದಾರೆ, ಜೋಮ್ಯಾಟೋ ಕೂಡಾ ನೆರವು ನೀಡಲು ಮುಂದೆ ಬಂದಿದೆ. ನಟಿ ಸೋನಂ ಕಪೂರ್, ಸುನಿಲ್ ಶೆಟ್ಟಿ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು, ಸಾರ್ವಜನಿಕರು ವೀಡಿಯೋ ಪೋಸ್ಟ್ ಹಂಚಿಕೊಂಡು ವೈರಲ್ ಆಗುತ್ತಿದ್ದಂತೆಯೇ ಎನ್ ಡಿಟಿವಿ ಕೂಡಾ ವರದಿ ಮಾಡಿ, ಇನ್ನಷ್ಟು ಜನರಿಗೆ ತಲುಪಿಸಿದೆ.

ಸಾಮಾಜಿಕ ಜಾಲ ತಾಣ ಸದ್ಬಳಕೆ ಹೀಗೆ ಮಾಡಬಹುದು

ಸಾಮಾಜಿಕ ಜಾಲ ತಾಣವನ್ನು ಒಳ್ಳೆಯದು ಹಾಗೂ ಕೆಟ್ಟದು ಎರಡಕ್ಕೂ ಬಳಸಬಹುದು. ಈ ಘಟನೆ ಸದ್ಬಳಕೆ ಹೇಗೆ ಮಾಡಬಹುದು ಎಂಬುದನ್ನು ತೋರಿಸಿದೆ. ಆಯ್ಕೆ ನಿಮ್ಮ ಮುಂದಿದೆ ಎಂದು ಅಶ್ವಿನ್ ಇಂದು ಟ್ವೀಟ್ ಮಾಡಿ, ವೃದ್ಧ ದಂಪತಿಗೆ ನೆರವಾದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಸೋಷಿಯಲ್ ಮೀಡಿಯಾ ಪವರ್ ಅಂದ್ರೆ ಇದು ಎಂದು ತೋರಿಸಿದ್ದಾರೆ.

ಎಎಪಿ ಸಹ ಸಂಸ್ಥಾಪಕ ಸೋಮನಾಥ್ ಭಾರ್ತಿ

ಎಎಪಿ ಸಹ ಸಂಸ್ಥಾಪಕ, ಇದೇ ಕ್ಷೇತ್ರದ ಶಾಸಕರಾದ ಸೋಮನಾಥ್ ಭಾರ್ತಿ ಅವರು ಸೋಷಿಯಲ್ ಮೀಡಿಯಾದ ಈ ವೈರಲ್ ವಿಡಿಯೋ ಗಮನಿಸಿ, ಇಂದು ಬಾಬಾ ಕಾ ಧಾಬಾಗೆ ಭೇಟಿ ನೀಡಿದ್ದಾರೆ. ಭರವಸೆ ನೀಡಿದಂತೆ ಈ ದಂಪತಿ ಮುಖದಲ್ಲಿ ಮಂದಹಾಸ ಮೂಡಿಸಲಾಗಿದೆ. ಇವರ ಆರೈಕೆ ನಮ್ಮ ಜವಾಬ್ದಾರಿ. ಇದೇ ರೀತಿ ಆರ್ಥಿಕ ಹೊಡೆತಕ್ಕೆ ಸಿಲುಕಿದ ಸಣ್ಣ ಪುಟ್ಟ ಆಹಾರ ಮಳಿಗೆಗಳನ್ನು ರಕ್ಷಿಸಲು ಅಭಿಯಾನ ಆರಂಭಿಸಲಾಗುವುದು ಎಂದಿದ್ದಾರೆ.

ಬಾಬಾಗೆ ಇನ್ನೂ ಚಿಂತೆಯಿಲ್ಲ

ಬಾಬಾಗೆ ಇನ್ನೂ ಚಿಂತೆಯಿಲ್ಲ, ಜನತೆ ಸೂಕ್ತವಾಗಿ ಸ್ಪಂದಿಸಿದ್ದಾರೆ, ಮಾಳ್ವೀಯ ನಗರದ ಈ ರಸ್ತೆ ಬದಿ ಧಾಬಾ ಈಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ವೃದ್ಧ ದಂಪತಿ ಬಿಡುವಿಲ್ಲದೆ ರೋಟಿ, ಪನ್ನೀರ್ ಬಟಾಣಿ ಖಾದ್ಯ ತಯಾರಿಸಿ ಜನರಿಗೆ ನೀಡುತ್ತಿದ್ದಾರೆ. ಸಾಮಾಜಿಕ ಜಾಲ ತಾಣಗಳ ಸೂಕ್ತ ಬಳಕೆಯಾಗಿದೆ ಎಂದು ಸಂಕೇತ್ ಉಪಾಧ್ಯಾಯ್ ವರದಿ ಮಾಡಿದ್ದಾರೆ.

ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ

Story first published: Friday, October 9, 2020, 10:15 [IST]
Other articles published on Oct 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X