ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಆ ಆರು ದಿನಗಳು ನನ್ನ ಜೀವನದ ಅತಿ ಕೆಟ್ಟ ಕ್ಷಣ ಎಂದ ಆರ್ ಅಶ್ವಿನ್

Ipl 2020:r Ashwin Says Six Days Of Quarantine One Of The Worst Times In My Life

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಯುಎಇನಲ್ಲಿ ತನ್ನ ಕ್ವಾರಂಟೈನ್ ದಿನಗಳ ಬಗ್ಗೆ ಮಾತನ್ನಾಡಿದ್ದಾರೆ. ಭಾರತದಿಂದ ಯುಎಇಗೆ ತೆರಳಿದ ಬಳಿಕ ಪ್ರತಿಯೊಬ್ಬರೂ ಆರು ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ದುಬೈನಲ್ಲಿ ಒಳಗಾಗಬೇಕಾಗಿತ್ತು. ಈ ಸಂದರ್ಭವನ್ನು ಆರ್ ಅಶ್ವಿನ್ ತನ್ನ ಜೀವನದ ಕೆಟ್ಟಿ ಕ್ಷಣಗಳಲ್ಲಿ ಒಂದು ಎಂದು ಹೇಳಿದ್ದಾರೆ.

ಕಳೆದ ಆವೃತ್ತಿಯಲ್ಲಿ ಕಿಂಗ್ಸ್ XI ಪಂಜಾಬ್ ತಂಡದ ನಾಯಕರಾಗಿದ್ದ ಆರ್ ಅಶ್ವಿನ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯುಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೋದಲ್ಲಿ ಕ್ವಾರಂಟೈನ್ ಅನುಭವ ಹಂಚಿಕೊಂಡಿರುವ ಆರ್ ಅಶ್ವಿನ್ ಹೋಟೇಲ್ ರೂಮ್‌ನಲ್ಲಿ ಏಕಾಂಗಿಯಾಗಿ ಕಳೆದ 6 ದಿನಗಳು ಜೀವನದ ಕಠಿಣ ದಿನಗಳು ಎಂದಿದ್ದಾರೆ.

ಐಪಿಎಲ್ 2020: ಸೆಪ್ಟೆಂಬರ್ 19ರ ಉದ್ಘಾಟನಾ ಪಂದ್ಯಕ್ಕೆ ತಂಡಗಳು ಪ್ರಕಟಐಪಿಎಲ್ 2020: ಸೆಪ್ಟೆಂಬರ್ 19ರ ಉದ್ಘಾಟನಾ ಪಂದ್ಯಕ್ಕೆ ತಂಡಗಳು ಪ್ರಕಟ

'ಕಳೆದ 6 ತಿಂಗಳ ಕಾಲ ನಾನು ಮನೆಯಲ್ಲೇ ಕಳೆದಿದ್ದೇನೆ. ಆದರೆ ಆ ಸಂದರ್ಭದಲ್ಲಿ ನನ್ನ ಸುತ್ತಲೂ ಮನೆಯವರು ಇದ್ದರು. ನನ್ನ ಯೂಟ್ಯೂಬ್ ಚಾನೆಲ್‌ ವಿಚಾರವಾಗಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ಇನ್ಸ್ಟಾಗ್ರಾಮ್ ಲೈವ್ ಸೇರಿದಂತೆ ಅನೇಕ ರೀತಿಯಾಗಿ ನನ್ನನ್ನು ಚಟುವಟಿಕೆಯಿಂದ ಇರುವಂತೆ ನೋಡಿಕೊಂಡಿದ್ದೆ. ಆದರೆ ಕಳೆದ ಆರು ದಿನಗಳು ನನಗೆ ತುಂಬಾ ಕಠಿಣವಾಗಿತ್ತು. ನನ್ನ ಜೀವನದ ಅತ್ಯಂತ ಕೆಟ್ಟ ಕ್ಷಣಗಳು ಆಗಿತ್ತು' ಎಂದು ಆರ್ ಅಶ್ವಿನ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

'ಮೊದಲ ದಿನ ನಾನು ರೂಮ್‌ನ ಹೊರಗೆ ನೋಡಿದರೆ ಮುಂದೆ ದುಬೈ ಕೆರೆ ಕಾಣಿಸುತ್ತಿತ್ತು. ನನ್ನ ಬಲ ಭಾಗಕ್ಕೆ ನೋಡಿದರೆ ಭುರ್ಜ್ ಖಲೀಫಾ ಕಾಣಿಸುತ್ತಿತ್ತು. ಅದು ತುಂಬಾ ಅದ್ಭುತವಾಗಿತ್ತು. ಆದರೆ ಎಷ್ಟು ಸುದೀರ್ಘವಾಗಿ ನೀವು ಹೊರಗೆ ಕುಳಿತು ನೋಡಲು ಸಾಧ್ಯವಿದೆ. ಅದರಲ್ಲೂ ವಾತಾವರಣ ಸಾಕಷ್ಟು ಬಿಸಿಯಿತ್ತು' ಎಂದು ವಿವರಿಸಿದ್ದಾರೆ.

ನಾನ್ಯಾಕೆ ಕೊಹ್ಲಿ, ಶರ್ಮಾರನ್ನು ಹೊಗಳಬಾರದು? ತೀಕ್ಷ್ಣ ಪ್ರಶ್ನೆಗಳಲ್ಲಿ ಟೀಕಾಕಾರರ ತಿವಿದ ಅಖ್ತರ್!ನಾನ್ಯಾಕೆ ಕೊಹ್ಲಿ, ಶರ್ಮಾರನ್ನು ಹೊಗಳಬಾರದು? ತೀಕ್ಷ್ಣ ಪ್ರಶ್ನೆಗಳಲ್ಲಿ ಟೀಕಾಕಾರರ ತಿವಿದ ಅಖ್ತರ್!

ಐಸೋಲೇಷನ್‌ನಲ್ಲಿದ್ದ ಆರು ದಿನಗಳ ಅವಧಿಯಲ್ಲು ಆರ್ ಅಶ್ವಿನ್ ತಾನು ಹೆಚ್ಚಾಗಿ ಮೊಬೈಲ್‌ನಲ್ಲಿ ತಲ್ಲೀನನಾಗಿರುತ್ತಿದ್ದೆ ಎಂದಿದ್ದಾರೆ ಆರ್ ಅಶ್ವಿನ್. ಜೊತೆಗೆ ಪುಸ್ತಕ ಓದುವದರಲ್ಲಿ ಹೆಚ್ಚಿನ ಗಮನ ಹರಿಸಲು ಆ ಸಂದರ್ಭದಲ್ಲಿ ತನ್ನಿಂದ ಸಾಧ್ಯವಾಗಲಿಲ್ಲ ಎಂಬುದನ್ನು ಕೂಡ ಈ ವಿಡಿಯೋದಲ್ಲಿ ಆರ್ ಅಶ್ವಿನ್ ಹೇಳಿಕೊಂಡಿದ್ದಾರೆ.

Story first published: Friday, September 4, 2020, 14:30 [IST]
Other articles published on Sep 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X