ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಆರಂಭಿಕನಾಗಿ ಕಣಕ್ಕಿಳಿದು ಗಮನ ಸೆಳೆದ ರಾಹುಲ್ ತ್ರಿಪಾಠಿ

IPL 2020: Rahul Tripathi opens innings for KKR against CSK, scores impressive 81

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಹೊಸ ಆರಂಭಿಕ ಜೋಡಿಯನ್ನು ಕಣಕ್ಕಿಳಿಸಿತು. ಟೂರ್ನಿಯಲ್ಲಿ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ಶುಬ್ಮನ್ ಗಿಲ್ ಜೊತೆಗೆ ರಾಹುಲ್ ತ್ರಿಪಾಠಿ ಆರಂಭಿಕರಾಗಿ ಕಣಕ್ಕಿಳಿದರು. ತನಗೆ ನೀಡಿದ ಜವಾಬ್ಧಾರಿಯನ್ನು ಅದ್ಭುತವಾಗಿ ನಿರ್ವಹಿಸಿದ ತ್ರಿಪಾಠಿ ತಂಡಕ್ಕೆ ಅತ್ಯುತ್ತಮ ಕೊಡುಗೆಯನ್ನು ನೀಡಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಂತರ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಪುಣೆಯ ಪ್ರತಿಭಾನ್ವಿತ ಆಟಗಾರ ರಾಹುಲ್ ತ್ರಿಪಾಠಿಯನ್ನು ಬ್ಯಾಟಿಂಗ್‌ಗೆ ಆರಂಭದಲ್ಲೇ ಕಣಕ್ಕಿಳಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ಬೌಲರ್‌ಗಳ ದಾಳಿಯನ್ನು ಅದ್ಭುತವಾಗಿ ಎದುರಿಸಿದ ತ್ರಿಪಾಠಿ 51 ಎಸೆತಗಳಲ್ಲಿ 81 ರನ್ ಗಳಿಸಿ ಮಿಂಚಿದ್ದಾರೆ.

ಐಪಿಎಲ್ 2020: 5 ವರ್ಷದಲ್ಲಿ ಮೊದಲ ಬಾರಿಗೆ ಟಾಸ್ ಗೆದ್ದ ಕೆಕೆಆರ್ ಬ್ಯಾಟಿಂಗ್ ಆಯ್ಕೆಐಪಿಎಲ್ 2020: 5 ವರ್ಷದಲ್ಲಿ ಮೊದಲ ಬಾರಿಗೆ ಟಾಸ್ ಗೆದ್ದ ಕೆಕೆಆರ್ ಬ್ಯಾಟಿಂಗ್ ಆಯ್ಕೆ

ರಾಹುಲ್ ತ್ರಿಪಾಠಿ ಕೆಕೆಆರ್ ತಂಡದ ಈ ಹಿಂದಿನ ಪಂದ್ಯದಲ್ಲಿ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 16 ಎಸೆತಗಳನ್ನು ಎದುರಿಸಿದ ರಾಹುಲ್ ತ್ರಿಪಾಠಿ 36 ರನ್ ಬಾರಿಸಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದ್ದರು. ಸಿಎಸ್‌ಕೆ ವಿರುದ್ಧವೂ ಈ ಫಾರ್ಮ್ ಮುಂದುವರಿಸುವಲ್ಲಿ ತ್ರಿಪಾಠಿ ಯಶಸ್ವಿಯಾಗಿದ್ದಾರೆ.

29ರ ಹರೆಯದ ರಾಹುಲ್ ತ್ರಿಪಾಠಿ ಪವರ್‌ಪ್ಲೇನಲ್ಲಿ ಸ್ಥಿರವಾದ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ಅರಂಭಿಕ ಜೊತೆಗಾರ ಶುಬ್ಮನ್ ಗಿಲ್ ಬೇಗನೆ ವಿಕೆಟ್ ಕಳೆದುಕೊಂಡರೂ ಚೆನ್ನೈ ಬೌಲರ್‌ಗಳಾದ ದೀಪಕ್ ಚಾಹರ್, ಸ್ಯಾಮ್ ಕರ್ರನ್, ಶಾರ್ದೂಲ್ ಠಾಕೂರ್ ಹಾಗೂ ಡ್ವೇಯ್ನ್ ಬ್ರಾವೋ ಅವರನ್ನು ಗುರಿಯಾಗಿಸಿ ದೊಡ್ಡ ಹೊಡೆತವನ್ನು ಬಾರಿಸುವಲ್ಲಿ ತ್ರಿಪಾಠಿ ಯಶಸ್ವಿಯಾಗಿದ್ದಾರೆ.

ರಾಹುಲ್ ತ್ರಿಪಾಠಿ ಐಪಿಎಲ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವುದು ಇದು ಮೊದಲೇನಲ್ಲ. ಇಪ್ಪತ್ತು ಪಂದ್ಯಗಳಲ್ಲಿ ರಾಹುಲ್ ಆರಂಭಿಕನಾಗಿ ಕಣಕ್ಕಿಳಿದುದ್ದು 34.61ರ ಸರಾಸರಿಯಲ್ಲಿ 650+ ರನ್ ಗಳಿಸಿದ್ದಾರೆ. 142.56ರ ಆರೋಗ್ಯಕರ ಸರಾಸರಿಯಲ್ಲಿ ಬ್ಯಾಟ್ ಬೀಸಿ ಗಮನಸೆಳೆದಿದ್ದಾರೆ.

Story first published: Thursday, October 8, 2020, 9:56 [IST]
Other articles published on Oct 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X