ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ್ರಾವಿಡ್ ಜತೆ ಬ್ಯಾಟಿಂಗ್ ಮಾಡುತ್ತೀನೆಂದು ಕನಸಲ್ಲೂ ಯೋಚಿಸಿರಲಿಲ್ಲ: ಸಂಜು ಸ್ಯಾಮ್ಸನ್

IPL 2020: Rajasthan Royals Sanju Samson Praises Rahul Dravids Role In His Career

ಸಂಜು ಸ್ಯಾಮ್ಸನ್ ಎಂಬ ಕೇರಳದ ಪ್ರತಿಭೆ ಪ್ರತಿ ಐಪಿಎಲ್‌ನಲ್ಲಿಯೂ ಎಲ್ಲರ ಹುಬ್ಬೇರಿಸುವ ಪ್ರದರ್ಶನ ನೀಡುತ್ತಿದ್ದಾರೆ. 2020ರ ಐಪಿಎಲ್‌ನ ಮೊದಲ ಎರಡೂ ಪಂದ್ಯಗಳಲ್ಲಿ ಅಬ್ಬರದ ಅರ್ಧಶತಕಗಳನ್ನು ಬಾರಿಸಿದ್ದಾರೆ. ಆದರೆ ಸಂಜುಗೆ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದು ತೀರಾ ಕಡಿಮೆ. 25 ವರ್ಷದ ಸ್ಯಾಮ್ಸನ್ ತೀರಾ ಒತ್ತಡದ ಸನ್ನಿವೇಶದಲ್ಲಿಯೂ ಯಾವ ಉದ್ವೇಗಕ್ಕೂ ಒಳಗಾಗದೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸುವ ಸ್ಥೈರ್ಯ ಪ್ರದರ್ಶಿಸುತ್ತಿರುವುದು ಈ ಯುವ ಪ್ರತಿಭೆ ಬೆಳೆದಿರುವುದಕ್ಕೆ ಸಾಕ್ಷಿ.

ಸಂಜು ಸ್ಯಾಮ್ಸನ್ ಈಗ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗುವ ಯುವ ಪ್ರತಿಭೆಗಳ ಮೆಂಟರ್ ಕೂಡ ಹೌದು. ಹೊಸಬರಿಗೆ ಮಾರ್ಗದರ್ಶನ ಮಾಡುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಹಾಗೂ ಅವರ ಪ್ರತಿಭೆಗೆ ಸಾಣೆ ಹಿಡಿಯುವ ಕೆಲಸವನ್ನು ಈಗಿನಿಂದಲೇ ಅವರು ಮಾಡುತ್ತಿದ್ದಾರೆ.

ಆತ ಇದ್ದಿದ್ದರೆ ವಿಶ್ವಕಪ್ ಗೆಲ್ಲಿಸುತ್ತಿದ್ದ: ತನ್ನ ರಾಜ್ಯದ ಪ್ರತಿಭೆಯನ್ನು ಹೊಗಳಿದ ಶ್ರೀಶಾಂತ್ಆತ ಇದ್ದಿದ್ದರೆ ವಿಶ್ವಕಪ್ ಗೆಲ್ಲಿಸುತ್ತಿದ್ದ: ತನ್ನ ರಾಜ್ಯದ ಪ್ರತಿಭೆಯನ್ನು ಹೊಗಳಿದ ಶ್ರೀಶಾಂತ್

ಅಂಡರ್-19 ಕ್ರಿಕೆಟ್ ತಂಡದಲ್ಲಿ ಆಡಿದ ಬಳಿಕ ಬರುವ ಆಟಗಾರರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬಲ್ಲೆ. ಏಕೆಂದರೆ ನಾನೂ ಅದೇ ಮಾರ್ಗದಿಂದ ಬಂದವನು. ಹಿರಿಯ ಆಟಗಾರನಂತೆ ಕೆಲಸ ಮಾಡು ಎಂದು ಯಾರೂ ಹೇಳಿಲ್ಲ. ಅದು ಸ್ವಾಭಾವಿಕವಾಗಿಯೇ ತನ್ನಲ್ಲಿ ಬಂದಿದೆ ಎಂದು ಹೇಳಿದ್ದಾರೆ ಅವರು. ಅಂದಹಾಗೆ ಸಂಜು ಅವರ ಈ ನಿಸ್ವಾರ್ಥ ಕಾರ್ಯಕ್ಕೆ ಸ್ಫೂರ್ತಿ 'ದಿ ವಾಲ್' ರಾಹುಲ್ ದ್ರಾವಿಡ್. ಮುಂದೆ ಓದಿ...

ನನಗೆ ದ್ರಾವಿಡ್, ರಹಾನೆ ಇದ್ದರು

ನನಗೆ ದ್ರಾವಿಡ್, ರಹಾನೆ ಇದ್ದರು

'ಸಂಜು ನಿನಗೆ 25 ವರ್ಷವಾಯ್ತು, ನೀನೀಗ ತಂಡದಲ್ಲಿ ಅತಿ ಹಿರಿಯ ಆಟಗಾರ ಮತ್ತು ಯುವ ಆಟಗಾರರ ಬಗ್ಗೆ ನೀನು ಕಾಳಜಿವಹಿಸಬೇಕು ಎಂದು ನನಗೆ ಯಾರೂ ಹೇಳಿಲ್ಲ. ಅದು ತಾನಾಗಿತೇ ನನ್ನಲ್ಲಿ ಬಂದಿದೆ. ಏಕೆಂದರೆ ನನ್ನನ್ನು ರೂಪಿಸಲು, ಮಾರ್ಗದರ್ಶನ ನೀಡಲು ನನಗೆ ರಾಹುಲ್ ದ್ರಾವಿಡ್ ಇದ್ದರು. ಅಜಿಂಕ್ಯ ರಹಾನೆ ಮತ್ತು ಶೇನ್ ವಾಟ್ಸನ್ ಇದ್ದರು' ಎಂದಿದ್ದಾರೆ ಸಂಜು.

ನಾನೀಗ ಹೇಳಿಕೊಡಬಹುದಾದ ವ್ಯಕ್ತಿ

ನಾನೀಗ ಹೇಳಿಕೊಡಬಹುದಾದ ವ್ಯಕ್ತಿ

'ಅಂಡರ್ 19 ಕ್ರಿಕೆಟ್ ಬಳಿಕ ಯುವ ಆಟಗಾರ ಬಂದ ಬಳಿಕ, ವಿಷಯ ಹೀಗೆ ಇದೆ, ಹೀಗೆ ಆಗಬಹುದು ಎಂದು ನಾನು ಸಹಜವಾಗಿಯೇ ಹೇಳಬೇಕಾದ ವ್ಯಕ್ತಿ ಎಂದು ಭಾವಿಸಿದ್ದೇನೆ. ನಾನೂ ಅದೇ ಮಾರ್ಗದಿಂದ ಬಂದವನು. ಅದರಿಂದಾಗಿ ನನಗೆ ಸವಾಲುಗಳನ್ನು ಎದುರಿಸಲು ನೆರವಾಯಿತು' ಎಂದು ತಿಳಿಸಿದ್ದಾರೆ.

ಐಪಿಎಲ್‌ನಲ್ಲಿ ಕಣಕ್ಕಿಳಿದ ಹೊಸ ಪ್ರತಿಭೆ: ಯಾರಿದು ಅಬ್ದುಲ್ ಸಮದ್?

ಕನಸಿನಲ್ಲಿಯೂ ಎಣಿಸಿರಲಿಲ್ಲ

ಕನಸಿನಲ್ಲಿಯೂ ಎಣಿಸಿರಲಿಲ್ಲ

'ರಾಹುಲ್ ದ್ರಾವಿಡ್ ಅವರೊಂದಿಗೆ ಒಂದು ದಿನ ಬ್ಯಾಟಿಂಗ್ ಮಾಡುತ್ತೇನೆ ಎಂದು ಕನಸಿನಲ್ಲಿಯೂ ಎಣಿಸಿರಲಿಲ್ಲ. ನನ್ನ ಮೊದಲ ಅಥವಾ ಎರಡನೆಯ ಪಂದ್ಯವಿರಬೇಕು, ನಾನು ಅವರೊಂದಿಗೆ ನಾನ್ ಸ್ಟ್ರೈಕರ್ ತುದಿಯಲ್ಲಿ ನಿಂತಿದ್ದೆ. ಇದು ನನ್ನ ಕ್ರಿಕೆಟ್ ಜೀವನದ ಸ್ಮರಣೀಯ ಘಟನೆ.

ಸರಳವಾಗಿ ಕಲಿಸುತ್ತಾರೆ

ಸರಳವಾಗಿ ಕಲಿಸುತ್ತಾರೆ

ರಾಜಸ್ಥಾನ ರಾಯಲ್ಸ್ ತಂಡಕ್ಕೆ ಕೋಚಿಂಗ್ ಹಾಗೂ ಮೆಂಟರಿಂಗ್ ಮಾಡುತ್ತಿದ್ದ ಅವರು, ಇಂಡಿಯಾ ಎ ತಂಡಕ್ಕೆ ಬಂದರು. ಹೀಗಾಗಿ ನಾನು ಸುಮಾರು ಏಳೆಂಟು ವರ್ಷ ಅವರೊಂದಿಗೆ ಕಳೆದಿದ್ದೇನೆ. ಕ್ರಿಕೆಟ್ ಬಗ್ಗೆ, ನನ್ನ ಬಗ್ಗೆಯೂ ಅವರಿಂದ ಕಲಿತಿದ್ದೇನೆ. ಅವರು ಬಹಳ ಉತ್ತಮ ಶಿಕ್ಷಕ. ಅವರು ಅತ್ಯಂತ ಸರಳ ರೀತಿಯಲ್ಲಿ ಹೇಳಿಕೊಡುತ್ತಾರೆ. ಅನೇಕ ಜನರು ಸ್ವಲ್ಪ ಸಂಕೀರ್ಣವಾಗಿ ಹೇಳುವುದನ್ನು ಪ್ರತಿಯೊಬ್ಬರಿಗೂ ತುಂಬಾ ಸರಳವಾಗಿ ತಿಳಿಸುತ್ತಾರೆ. ಯಾವುದೇ ಸಮಸ್ಯೆ ಬಂದಾಗಲೂ ಭಾರತ ಎ ತಂಡದ ಎಲ್ಲರೂ ಅವರನ್ನು ಸಂಪರ್ಕಿಸುತ್ತಾರೆ' ಎಂದು ರಾಹುಲ್ ದ್ರಾವಿಡ್ ಕುರಿತು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

Story first published: Thursday, October 1, 2020, 10:00 [IST]
Other articles published on Oct 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X